newsfirstkannada.com

ತನ್ನ ಹುಟ್ಟುಹಬ್ಬಕ್ಕೆ ಅನಾಥ ಮಕ್ಕಳ ಪರ ಸಿಎಂಗೆ ವಿಶೇಷ ಮನವಿ ಮಾಡಿದ ಪ್ರದೀಪ್ ಈಶ್ವರ್; ಏನದು..?

Share :

Published February 8, 2024 at 3:47pm

  ಇಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬರ್ತ್​ಡೇ

  ತನ್ನ ಹುಟ್ಟುಹಬ್ಬದಂದೇ ಪ್ರದೀಪ್ ಈಶ್ವರ್ ಸಿಎಂ ಸಿದ್ದರಾಮಯ್ಯಗೆ ವಿಶೇಷ ಮನವಿ

  ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪ್ರದೀಪ್​ ಈಶ್ವರ್​​!

ಬೆಂಗಳೂರು: ತನ್ನ ಹುಟ್ಟುಹಬ್ಬದಂದೇ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಿಎಂ ಸಿದ್ದರಾಮಯ್ಯಗೆ ವಿಶೇಷ ಮನವಿ ಮಾಡಿದ್ದಾರೆ. ಹುಟ್ಟಹಬ್ಬದ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರದೀಪ್ ಈಶ್ವರ್ ವಿಶೇಷ ಮನವಿ ಪತ್ರ ನೀಡಿದ್ರು. ಬಳಿಕ ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ತಂದೆ ತಾಯಿ‌ ಇಲ್ಲದ ಅನಾಥ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಬೇಕು. ಸರ್ಕಾರ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಶಾಸಕ ಪ್ರದೀಪ್​ ಈಶ್ವರ್​​. ಪ್ರದೀಪ್​ ಈಶ್ವರ್​​ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಪ್ರದೀಪ್​ ಈಶ್ವರ್​​ ಮನವಿ ಪತ್ರದಲ್ಲೇನಿದೆ..?

ರಾಜ್ಯದಲ್ಲಿರುವ ತಂದೆ ತಾಯಿ ಇಲ್ಲದ ಅನಾಥ ಮಕ್ಕಳ ಕ್ಷೇಮಾಭಿವೃದ್ಧಿಗೆ ವಿಶೇಷ ಯೋಜನೆಯನ್ನು ರೂಪಿಸಬೇಕು ಮತ್ತು ಈ ಮಕ್ಕಳ ಉನ್ನತ ವ್ಯಾಸಂಗದ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನ ಹುಟ್ಟುಹಬ್ಬಕ್ಕೆ ಅನಾಥ ಮಕ್ಕಳ ಪರ ಸಿಎಂಗೆ ವಿಶೇಷ ಮನವಿ ಮಾಡಿದ ಪ್ರದೀಪ್ ಈಶ್ವರ್; ಏನದು..?

https://newsfirstlive.com/wp-content/uploads/2024/02/Pradeep-Eshwar.jpg

Load More