/newsfirstlive-kannada/media/post_attachments/wp-content/uploads/2024/12/PAVITHRA-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿದ್ದ 13ನೇ ಆರೋಪಿ ಪ್ರದೂಷ್ ಕೂಡ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇಂದು ಬೆಳಗ್ಗೆ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಿಡುಗಡೆಗೊಂಡರು.
ಬೆನ್ನಲ್ಲೇ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಪ್ರದೂಷ್.. ಜೈಲಿನಿಂದ ಹೊರ ಬರ್ತಿರೋದಕ್ಕೆ ತುಂಬಾ ಖುಷಿ ಇದೆ. ಕಾನೂನಿನ ಮೇಲೆ ನನಗೆ ಗೌರವ ಇದೆ. ಪ್ರಕರಣದ ಬಗ್ಗೆ ಏನೂ ಕೇಳಬೇಡಿ. ನಾನು ಏನೂ ಹೇಳಲ್ಲ ಎನ್ನುತ್ತ ಕಾರು ಹತ್ತಿ ಮನೆಗೆ ಹೋಗಿದ್ದಾರೆ.
ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಗೌಡ ರಿಲೀಸ್.. ನಗು ನಗುತ್ತ ಹೊರ ಬಂದ ಆರೋಪಿ..
ಹೈಕೋರ್ಟ್ ಕಳೆದ ಶುಕ್ರವಾರ ದರ್ಶನ್ ಹಾಗೂ ಪವಿತ್ರ ಗೌಡ ಸೇರಿ ಒಟ್ಟು 6 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ನಂತರದ ಪ್ರಕ್ರಿಯೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ. ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರದೂಷ್ ಹಾಗೂ ಪವಿತ್ರ ಗೌಡ ರಿಲೀಸ್ ಆದರು. ಇಬ್ಬರು ಒಟ್ಟಿಗೆ ಜೈಲಿನಿಂದ ಹೊರ ಬಂದರು. ಜೈಲಿನಿಂದ ಪವಿತ್ರಗೌಡ ನಗುನಗುತ್ತ ಹೊರ ಬಂದರು. ನಂತರ ತಮ್ಮ ತಾಯಿಯನ್ನು ತಬ್ಬಿಕೊಂಡು ಕಣ್ಣೀರು ಇಟ್ಟರು. ಕೊನೆಗೆ ಮನೆಯತ್ತ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ