ಕಸದ ಮೇಲೆ ತೆರಿಗೆ.. ಕರ್ನಾಟಕ ಸರ್ಕಾರಕ್ಕೆ ಯಾಕಿಂಥಾ ಸ್ಥಿತಿ ಬಂತು? ಪ್ರಹ್ಲಾದ್ ಜೋಶಿ ಹೇಳಿದ್ದೇನು? VIDEO

author-image
admin
Updated On
ಕಸದ ಮೇಲೆ ತೆರಿಗೆ.. ಕರ್ನಾಟಕ ಸರ್ಕಾರಕ್ಕೆ ಯಾಕಿಂಥಾ ಸ್ಥಿತಿ ಬಂತು? ಪ್ರಹ್ಲಾದ್ ಜೋಶಿ ಹೇಳಿದ್ದೇನು? VIDEO
Advertisment
  • ‘ಕಾಂಗ್ರೆಸ್‌ ವೈಫಲ್ಯ ಮುಚ್ಚಿಡಲು ಜನರಿಗೆ ಬೆಲೆ ಏರಿಕೆಯ ಹೊರೆ’
  • ಗ್ಯಾರಂಟಿ ಸ್ಕೀಂ, ಆರ್ಥಿಕತೆಯ ತಪ್ಪು ನಿರ್ಧಾರಗಳೇ ಇದಕ್ಕೆ ಕಾರಣ
  • ಸಿಎಂ ಸಿದ್ದರಾಮಯ್ಯ ಸರ್ಕಾರದ ಮೇಲೆ ಪ್ರಹ್ಲಾದ್ ಜೋಶಿ ಆರೋಪ

ನವದೆಹಲಿ: ಕರ್ನಾಟಕ ದಿವಾಳಿಯಾಗಿದೆ. ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ತನ್ನ ವೈಫಲ್ಯವನ್ನು ಮುಚ್ಚಿಡಲು ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಹೊರೆಯಾಗಿದೆ. ಆಸ್ತಿ ನೋಂದಣಿ ಶುಲ್ಕಗಳು, ರಸ್ತೆ ತೆರಿಗೆ, ಬ್ಯಾಂಕ್ ಸಾಲ ನೋಂದಣಿ ಶುಲ್ಕ ಮತ್ತು ಜನನ ಮತ್ತು ಮರಣ ಪ್ರಮಾಣಪತ್ರ ಶುಲ್ಕಗಳು, ವಾಣಿಜ್ಯ ವಾಹನ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಈ ಎಲ್ಲದರ ಜೊತೆಗೆ ಇದೀಗ ಕಸದ ಮೇಲೂ ತೆರಿಗೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿ ಹಣದುಬ್ಬರ ಹೆಚ್ಚಾಗಿದೆ ಅನ್ನೋದು ಗೊತ್ತಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: EPFO ಬಳಕೆದಾರರಿಗೆ ಗುಡ್​ನ್ಯೂಸ್​.. ಅಡ್ವಾನ್ಸ್ ಕ್ಲೇಮ್ ಮಿತಿ 1 ಲಕ್ಷದಿಂದ 5 ಲಕ್ಷ ರೂಪಾಯಿ ಹೆಚ್ಚಳಕ್ಕೆ ನಿರ್ಧಾರ 


">April 1, 2025

ಕರ್ನಾಟಕ ಸರ್ಕಾರ ಬೆಂಗಳೂರಲ್ಲಿ ಕಸದ ಮೇಲೆ ಹಾಕುತ್ತಿರುವ ತೆರಿಗೆಯನ್ನು ನಾನು ಖಂಡಿಸುತ್ತೇನೆ. ಇದು ಜನರಿಗೆ ಅನ್ಯಾಯದ ಹೊರೆಯಾಗಿದೆ. ಅವರ ಗ್ಯಾರಂಟಿ ಸ್ಕೀಂ, ತಪ್ಪು ನಿರ್ವಹಣೆ ಹಾಗೂ ಹಣಕಾಸಿನ ಯೋಜನೆಗಳು ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಪಾಪರ್ ಸರ್ಕಾರ ದಿವಾಳಿ ಆಗಿದೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment