newsfirstkannada.com

ಅಸಲಿ ಆಟ ಈಗ ಶುರು.. 6 ದಿನ ಪ್ರಜ್ವಲ್ ರೇವಣ್ಣಗೆ ಅಗ್ನಿಪರೀಕ್ಷೆ; ವಿಡಿಯೋ ಸೀಕ್ರೆಟ್‌ ತನಿಖೆ ಹೇಗಿರುತ್ತೆ?

Share :

Published May 31, 2024 at 5:39pm

    ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದು ಯಾವ ಮೊಬೈಲ್‌ನಲ್ಲಿ?

    ವಿದೇಶಕ್ಕೆ ಹೋಗುವಾಗ ನಿಮ್ಮನ್ನ ಏರ್‌ಪೋರ್ಟ್‌ಗೆ ಬಿಟ್ಟಿದ್ಯಾರು?

    ಲೈಂಗಿಕ ಕಿರುಕುಳದ ವಿಡಿಯೋ ಚಿತ್ರೀಕರಣವನ್ನು ಯಾಕೆ ಮಾಡಿದ್ರಿ?

ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಹಾಗೂ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಕಷ್ಟ ಈಗ ಶುರುವಾಗಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದು, ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ 6 ದಿನ ಎಸ್‌ಐಟಿ ಕಸ್ಟಡಿಗೆ ನೀಡಿದೆ.

42ನೇ ACMM ಕೋರ್ಟ್‌ ಎಸ್‌ಐಟಿ ಕಸ್ಟಡಿಗೆ ನೀಡಿರುವುದರಿಂದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಕಚೇರಿಗೆ ಕರೆದುಕೊಂಡು ಹೋಗಲಾಗಿದೆ. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ ಮೇಲೆ ಇದುವರೆಗೂ ಆರೋಪಿಯನ್ನು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಕೋರ್ಟ್ 6 ದಿನ ಕಸ್ಟಡಿಗೆ ನೀಡಿರುವುದರಿಂದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಅಸಲಿ ವಿಚಾರಣೆ ಈಗ ಶುರುವಾಗಲಿದೆ.

ಅಶ್ಲೀಲ ವಿಡಿಯೋಗಳ ಸೀಕ್ರೆಟ್ ಏನು? 
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪ ಕೇಳಿ ಬಂದಿದೆ. ಕೋರ್ಟ್‌ನಿಂದ ಕಸ್ಟಡಿಗೆ ಪಡೆದ ನಂತರ SIT ಅಧಿಕಾರಿಗಳು ತನ್ನ ವಿಚಾರಣೆ ಆರಂಭಿಸಲಿದ್ದಾರೆ. ಪ್ರಮುಖವಾಗಿ ಕೇಳುವ ಪ್ರಶ್ನೆಗಳನ್ನು ನೋಡೋದಾದ್ರೆ ಸಂತ್ರಸ್ಥ ಮಹಿಳೆಯರಿಗೂ ನಿಮಗೂ ಯಾವಗಿನಿಂದ ಪರಿಚಯ ಆಯಿತು. ಯಾವಾಗ ಇಬ್ಬರ ನಡುವೆ ಕ್ಲೋಸ್ ರಿಲೇಷನ್‌ಶಿಪ್ ಆಯ್ತು. ಯಾವಾಗ ನೀವು ಅವರ ಮೇಲೆ ಅತ್ಯಾಚಾರವೆಸಗಿದ್ರಿ ಎಂದು ಪ್ರಶ್ನಿಸಲಾಗುತ್ತದೆ.

ಇನ್ನು, ಸಂತ್ರಸ್ತೆಯರಿಗೆ ನೀಡಿದ ಲೈಂಗಿಕ ಕಿರುಕುಳದ ವಿಡಿಯೋ ಚಿತ್ರೀಕರಣವನ್ನು ಯಾಕೆ ಮಾಡಿದ್ರಿ ಎಂದು ಎಸ್‌ಐಟಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ವಿಡಿಯೋ ಚಿತ್ರೀಕರಣದ ಹಿಂದೆ ಬ್ಲಾಕ್ ಮೇಲ್ ಮಾಡುವ ಉದ್ದೇಶವಿತ್ತಾ. ಪದೇ ಪದೇ ವಿಡಿಯೋ ಕರೆ ಮಾಡಿ ರೆಕಾರ್ಡ್ ಮಾಡಿದ್ದು ಯಾಕೆ ಎಂದು ಸಾಕ್ಷಿಗಳನ್ನ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: ‘SIT ಶೌಚಾಲಯದಲ್ಲಿ ತುಂಬಾ ವಾಸನೆ’- ಕೋರ್ಟ್‌ ಅಲ್ಲಿ ಪ್ರಜ್ವಲ್ ರೇವಣ್ಣ ದೂರಿಗೆ ಎಲ್ಲರಿಗೂ ನಗು 

ಇದರ ಜೊತೆಗೆ ಖಾಸಗಿ ವಿಡಿಯೋಗಳು ಹೇಗೆ ವೈರಲ್ ಆಯಿತು. ನಿಮಗೆ ಇದರ ಬಗ್ಗೆ ಗೊತ್ತಿತ್ತಾ. ಯಾಕೆ ನೀವು ವಿದೇಶಕ್ಕೆ ಹೋಗಿದ್ದು. ಪ್ರಕರಣ ದಾಖಲಾಗುವ ಬಗ್ಗೆ ನಿಮಗೆ ಮಾಹಿತಿ ಇತ್ತಾ. ನಿಮ್ಮನ್ನ ಏರ್‌ಪೋರ್ಟ್‌ಗೆ ಬಿಟ್ಟಿದ್ಯಾರು. ವಿದೇಶದಲ್ಲಿ ನಿಮಗೆ ಆಶ್ರಯ ಕೊಟ್ಟಿದ್ಯಾರು? ಹಣದ ಸಹಾಯ ಮಾಡಿದವರು ಯಾರು? ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದು ಯಾಕೆ? ನೋಟಿಸ್ ಕೊಟ್ಟ ಬಳಿಕ ವಿಚಾರಣೆಗೆ ಯಾಕೆ ಆಗಮಿಸಿಲ್ಲ ಎಂದು ಪ್ರಶ್ನಿಸಲಾಗುತ್ತೆ.

ಪ್ರಮುಖವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದು ಯಾವ ಮೊಬೈಲ್‌ನಲ್ಲಿ. ಆ ವಿಡಿಯೋ ಇರುವ ಮೊಬೈಲ್ ಎಲ್ಲಿದೆ. ಬೇರೆ ಎಲ್ಲಾದ್ರು ವಿಡಿಯೋ ಸೇವ್ ಮಾಡಿ‌ ಇಟ್ಟಿದ್ದೀರಾ? ಮಾಜಿ ಕಾರು ಡ್ರೈವರ್‌ ಕಾರ್ತಿಕ್‌ಗೆ ಅಷ್ಟು ವಿಡಿಯೋ ಲಭ್ಯವಾಗಿದ್ದು ಹೇಗೆ? ಕಾರ್ತಿಕ್ ಯಾವಾಗಿನಿಂದ ನಿಮ್ಮ ಡ್ರೈವರ್ ಆಗಿ ಕೆಲಸ ಮಾಡಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಎಸ್‌ಐಟಿ ಅಧಿಕಾರಿಗಳು 6 ದಿನಗಳಲ್ಲಿ ಉತ್ತರ ಪಡೆಯುವ ಪ್ರಯತ್ನ ಮಾಡಲಿದ್ದಾರೆ.
ಇನ್ನು, ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಪ್ರತಿದಿನ ಬೆಳಗ್ಗೆ 9:30 ರಿಂದ 10:30ರ ವೇಳೆ ವಕೀಲರನ್ನು ಭೇಟಿಗೆ ಅವಕಾಶ ನೀಡಲಾಗಿದೆ. ನಾಳೆಯೂ ಮೆಡಿಕಲ್ ಚೆಕಪ್ ಹಾಗೂ ಕೃತ್ಯ ನಡೆದ ಜಾಗದ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಲಿ ಆಟ ಈಗ ಶುರು.. 6 ದಿನ ಪ್ರಜ್ವಲ್ ರೇವಣ್ಣಗೆ ಅಗ್ನಿಪರೀಕ್ಷೆ; ವಿಡಿಯೋ ಸೀಕ್ರೆಟ್‌ ತನಿಖೆ ಹೇಗಿರುತ್ತೆ?

https://newsfirstlive.com/wp-content/uploads/2024/05/Prajwal-Revanna-4-1.jpg

Load More