newsfirstkannada.com

ಪ್ರಜ್ವಲ್​ ರೇವಣ್ಣ ಸೇರಿ ಮತ ಚಲಾಯಿಸಿದ ಲೋಕಸಭಾ ಅಭ್ಯರ್ಥಿಗಳು

Share :

Published April 26, 2024 at 9:16am

Update April 26, 2024 at 9:19am

    ಇಂದು ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಮತದಾನ

    ರಾಜ್ಯದ 14 ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆ

    ಮತ ಚಲಾಯಿಸಿದ ಪ್ರಜ್ವಲ್​ ರೇವಣ್ಣ, ಯದುವೀರ್​, ಡಾ ಕೆ ಸುಧಾಕರ್ 

2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ 14 ಮತಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಇದಾಗಿದೆ. ಈಗಾಗಲೇ ಅನೇಕರು ಮತದಾನ ಮಾಡಿದ್ದಾರೆ. ಅದರಂತೆಯೇ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಸಹ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮತದಾನ ಮಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ

ಎನ್ ಡಿ ಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಕೂಡ ಮತದಾನ ಚಲಾಯಿಸಿದ್ದಾರೆ. 8 ಗಂಟೆಗೆ ಮತದಾನ ಮಾಡಲಿದ್ದೇನೆ ಎಂದು ಹೇಳಿದ್ದ ಅಭ್ಯರ್ಥಿ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮತ ಚಲಾಯಿದ್ದಾರೆ. ಹೊಳೇನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟ 251 ಮತದಾನ ಕೇಂದ್ರದಲ್ಲಿ ಪ್ರಜ್ವಲ್‌ರೇವಣ್ಣ ಮತ ಚಲಾಯಿಸಿದ್ದಾರೆ. ಪ್ರಜ್ವಲ್‌ರೇವಣ್ಣ ಜೊತೆಗೆ ಅಣ್ಣ ಸೂರಜ್​ ರೇವಣ್ಣ ಮತ್ತು ಅವರ ಪತ್ನಿ ಕೂಡ ಮತ ಚಲಾಯಿಸಿದ್ದಾರೆ.

ಯದುವೀರ್

ಮತಗಟ್ಟೆ ಸಂಖ್ಯೆ 176ರಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಮತದಾನ ಮಾಡಿದ್ದಾರೆ. ಮಹಾರಾಣಿ ಪ್ರಮೋದ ದೇವಿ ಹಾಗೂ ಪತ್ನಿ ತ್ರಿಶಿಕಾ ದೇವಿ ಜೊತೆ ಆಗಮಿಸಿ ಯದುವೀರ್ ಮತದಾನ ಮಾಡಿದ್ದಾರೆ. ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 179ರಲ್ಲಿ ಪ್ರಮೋದ ದೇವಿ ಮತದಾನ ಮಾಡಿದ್ದಾರೆ. ಆದರೆ ಮತಚಲಾಯಿಸೋದಕ್ಕೂ ಮುನ್ನ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಡಾ ಕೆ ಸುಧಾಕರ್ 

ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಪೆರೇಸಂದ್ರ ಗ್ರಾಮದಲ್ಲಿ ಮತದಾನ ಮಾಡಿದ್ದಾರೆ. ಪತ್ನಿ ಡಾ ಪ್ರೀತಿ ಹಾಗೂ ತಂದೆ ಪಿ ಎನ್ ಕೇಶವರೆಡ್ಡಿ ಯೊಂದಿಗೆ ತೆರಳಿ ಮತದಾನ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 21 ರಲ್ಲಿ ಮತದಾನ ಮಾಡಿದ್ದಾರೆ.

ಹೆಚ್‌.ಪಿ.ಸ್ವರೂಪ್‌ ಪ್ರಕಾಶ್

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್‌.ಪಿ.ಸ್ವರೂಪ್‌ ಪ್ರಕಾಶ್ ಮತದಾನ ಮಾಡಿದ್ದಾರೆ. ಪತ್ನಿ ಶ್ವೇತಾ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ. ಹಾಸನ ನಗರದ ರಾಯಲ್ ಅಪೊಲೋ ಶಾಲೆಯಲ್ಲಿ ಪತ್ನಿ ಸಮೇತ ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 121 ರಲ್ಲಿ ಮತದಾನ ಮಾಡಿದ್ದಾರೆ.

ಡಾ ಪರಮೇಶ್ವರ್

ಗೃಹ ಸಚಿವ ಡಾ ಪರಮೇಶ್ವರ್ ಮತದಾನ ಮಾಡಿದ್ದಾರೆ. ಪತ್ನಿ ಕನ್ನಿಕಾ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ. ತುಮಕೂರಿನ ಸಿದ್ದಾರ್ಥ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 57 ರಲ್ಲಿ ಮತದಾ‌ನ ಮಾಡಿದ್ದಾರೆ.

ಇದನ್ನೂ ಓದಿ: ಮಂಡ್ಯ, ಚಿಕ್ಕಮಗಳೂರು, ತುಮಕೂರಿನಲ್ಲಿ ಕೈ ಕೊಟ್ಟ EVM ಮೆಷಿನ್​, ಮತದಾನ ವಿಳಂಬ: ಆಕ್ರೋಶ ಹೊರಹಾಕಿದ ಜನರು

ಬೆಳ್ಳಿ ಪ್ರಕಾಶ್

ಬಿಜೆಪಿ ಮಾಜಿ ಶಾಸಕ ಹಾಗೂ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತದಾನ ಮಾಡಿದ್ದಾರೆ. ಕಡೂರಿನಲ್ಲಿ ಬೆಳ್ಳಿ ಪ್ರಕಾಶ್ ಮತ ಚಲಾಯಿಸಿದ್ದಾರೆ. ಕಡೂರು ತಾಲೂಕಿನ ಕುಂದೂರು ಮತಗಟ್ಟೆ 252 ರಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.

ಪುಟ್ಟರಾಜು

ಮಾಜಿ ಸಚಿವ ಪುಟ್ಟರಾಜು ಮತದಾನ ಮಾಡಿದ್ದಾರೆ. ಪತ್ನಿ ನಾಗಮ್ಮ ಜೊತೆಗೂಡಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಮತಗಟ್ಟೆ 138ರಲ್ಲಿ ಮತದಾನ ಮಾಡಿದ್ದಾರೆ.

ಸುನೀಲ್​ ಕುಮಾರ್​

ಮಾಜಿ ಸಚಿವ ಶಾಸಕ ವಿ. ಸುನಿಲ್ ಕುಮಾರ್ ಮತದಾನ ಮಾಡಿದ್ದಾರೆ. ಕಾರ್ಕಳ ಮತಗಟ್ಟೆ ಸಂಖ್ಯೆ 140 ರಲ್ಲಿ ಮತದಾನ ಮಾಡಿದ್ದಾರೆ. ಕುಟುಂಬ ಸಹಿತ ಬಂದು ಮತದಾನ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​ ರೇವಣ್ಣ ಸೇರಿ ಮತ ಚಲಾಯಿಸಿದ ಲೋಕಸಭಾ ಅಭ್ಯರ್ಥಿಗಳು

https://newsfirstlive.com/wp-content/uploads/2024/04/Vote-10.jpg

Load More