newsfirstkannada.com

BREAKING: ಬೆಂಗಳೂರು ಏರ್ಪೋರ್ಟ್​ನಲ್ಲೇ ಪ್ರಜ್ವಲ್​ ರೇವಣ್ಣ ಅರೆಸ್ಟ್​​.. ಮುಂದೇನು?

Share :

Published May 31, 2024 at 1:12am

Update May 31, 2024 at 1:23am

    ಬರೋಬ್ಬರಿ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್

    ಕೊನೆಗೂ ಬೆಂಗಳೂರು ಇಂಟರ್​ ನ್ಯಾಷನಲ್​​​ ಏರ್ಪೋರ್ಟ್​ಗೆ ಬಂದ ಆರೋಪಿ

    ಬೆಂಗಳೂರು ಏರ್ಪೋರ್ಟ್​ಗೆ ಬರುತ್ತಿದ್ದಂತೆಯೇ ಪ್ರಜ್ವಲ್​ ರೇವಣ್ಣ ಅರೆಸ್ಟ್​​..!

ಬೆಂಗಳೂರು: ಬರೋಬ್ಬರಿ ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್​ ರೇವಣ್ಣ ಕೊನೆಗೂ ಬೆಂಗಳೂರಿಗೆ ಬಂದಿದ್ದಾರೆ. ಜರ್ಮನಿಯಿಂದ ಬೆಂಗಳೂರು ಇಂಟರ್​ ನ್ಯಾಷನಲ್​ ಏರ್ಪೋರ್ಟ್​ಗೆ ಬರುತ್ತಿದ್ದಂತೆ ಪ್ರಜ್ವಲ್​ ರೇವಣ್ಣ ಅವರನ್ನು ಎಸ್​ಐಟಿ ಪೊಲೀಸ್ರು ಅರೆಸ್ಟ್​ ಮಾಡಿದ್ದಾರೆ. ಭಾರೀ ಬಿಗಿ ಪೊಲೀಸ್​ ಬಂದೋಬಸ್ತ್​ ಮಧ್ಯೆ ಪ್ರಜ್ವಲ್​ ರೇವಣ್ಣ ಬಂಧನವಾಗಿದೆ.

ಜೆಡಿಎಸ್​ ಸಂಸದ ಪ್ರಜ್ವಲ್​ ರೇವಣ್ಣ ಜರ್ಮನ್​​ನಿಂದ ಲುಫ್ತಾನ್ಸಾ ಏರ್‌ಲೈನ್ಸ್ ಫ್ಲೈಟ್‌ ಮೂಲಕ ಭಾರತಕ್ಕೆ ಬಂದರು. ಸುಮಾರು 40 ಕೆಜಿ ಗಂಟು ಮೂಟೆ ಸಮೇತ ಬ್ಯುಸಿನೆಸ್ ಕ್ಲಾಸ್‌ ಟಿಕೆಟ್ ಬುಕ್ ಮಾಡಿಕೊಂಡು ಪ್ರಜ್ವಲ್​ ರೇವಣ್ಣ ವಿಮಾನದಲ್ಲಿ ಆಗಮಿಸಿದ್ದಾರೆ.

ಪ್ರಜ್ವಲ್​ ಏರ್​ಪೋರ್ಟ್​ಗೆ ಬರ್ತಿದ್ದಂತೆ ಅರೆಸ್ಟ್!

ಇನ್ನು, ಪ್ರಜ್ವಲ್​ ರೇವಣ್ಣ ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್​ಪೋರ್ಟ್​ಗೆ ಬಂದಿದ್ದು, ವಿಮಾನದಲ್ಲೇ ಸುದೀರ್ಘ ಪ್ರಕ್ರಿಯೆಗಳು ನಡೆಸಲಾಗುತ್ತಿದೆ. ಸುಮಾರು 1 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಪ್ರಜ್ವಲ್ ರೇವಣ್ಣ ಫ್ಲೈಟ್ ಹತ್ತಿದ ಕೂಡಲೇ ಆರೋಪಿ LOC ಇರುವ ಇಂಟಿಮೇಷನ್ ಬಂದಿತ್ತು. ಬ್ಯೂರೋ ಆಫ್ ಇಮಿಗ್ರೇಷನ್ ಮೂಲಕ ಇಂಟಿಮೇಷನ್ ಮಾಹಿತಿ ಸಿಕ್ಕಿತ್ತು. ಇದಾದ ಬೆನ್ನಲ್ಲೇ ಸೆಕ್ಯೂರಿಟಿ ಟೀಂಗೆ ಇಮಿಗ್ರೇಷನ್ ಮಾಹಿತಿ ರವಾನೆ ಆಗಿದೆ.

ಇದಾದ ಕೂಡಲೇ ಪ್ರಜ್ವಲ್‌ ಅವರನ್ನು ಬಂಧಿಸಿದ ಅಧಿಕಾರಿಗಳು ಏರ್‌ಪೋರ್ಟ್‌ನಿಂದ ಕರೆ ತರುತ್ತಿದ್ದಾರೆ. ಮುಂದೆ ಪ್ರಜ್ವಲ್​ ರೇವಣ್ಣ ಎಸ್‌ಐಟಿ ಕಸ್ಟಡಿಯಲ್ಲೇ ಇರ್ತಾರಾ? ಅಥವಾ ನೇರ ಜೈಲಿಗಾ? ಅನ್ನೋದು ಕೋರ್ಟ್​ ನಿರ್ಧಾರ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬೆಂಗಳೂರು ಏರ್ಪೋರ್ಟ್​ನಲ್ಲೇ ಪ್ರಜ್ವಲ್​ ರೇವಣ್ಣ ಅರೆಸ್ಟ್​​.. ಮುಂದೇನು?

https://newsfirstlive.com/wp-content/uploads/2024/05/Prajwal-Arrest.jpg

Load More