newsfirstkannada.com

ಹಾಸನ ಅಶ್ಲೀಲ ವಿಡಿಯೋ ಕೇಸ್​​; ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಮಾಜಿ ಡ್ರೈವರ್​​

Share :

Published April 30, 2024 at 10:52pm

Update April 30, 2024 at 10:54pm

    15 ವರ್ಷಗಳಿಂದ ರೇವಣ್ಣ ಕುಟುಂಬದ ಜೊತೆ ಕೆಲಸ ಮಾಡಿದ್ದ ಚಾಲಕ

    ರಾಜ್ಯಾದ್ಯಂತ ಹಲ್​ಚಲ್ ಎಬ್ಬಿಸಿದ ಹಾಸನ ಅಶ್ಲೀಲ ವಿಡಿಯೋ ಕೇಸ್

    ನಾನು ಪೆನ್​ಡ್ರೈವನ್ನ ಕಾಂಗ್ರೆಸ್​ನವರಿಗೆ ಕೊಟ್ಟಿಲ್ಲವೆಂದ ಚಾಲಕ ಕಾರ್ತಿಕ್!

ಹಾಸನ ಅಶ್ಲೀಲ ವಿಡಿಯೋ ಕೇಸ್ ಹಲ್​ಚಲ್ ಎಬ್ಬಿಸಿದೆ. ರಾಜ್ಯ ರಾಜಕಾರಣದಲ್ಲಂತೂ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ನಡುವೆ ವಿಡಿಯೋದ ಮೂಲ ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕನ ಕಡೆಗೆ ಬೊಟ್ಟು ಮಾಡ್ತಿದೆ. ಈ ಬಗ್ಗೆ ಖುದ್ದು ಮಾಜಿ ಕಾರು ಚಾಲಕನೇ ಪ್ರತ್ಯಕ್ಷವಾಗಿ ಹಲವು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ.

ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್‌; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಹಾಸನ ಅಶ್ಲೀಲ ವಿಡಿಯೋ ಕೇಸ್ ಸದ್ಯ ರಾಜ್ಯಾದ್ಯಂತ ಹಲ್​ಚಲ್ ಸೃಷ್ಟಿಸಿದೆ. ಚುನಾವಣೆ ಸಮಯದಲ್ಲಿ ಇಷ್ಟೆಲ್ಲ ಸಂಚಲನ ಸೃಷ್ಟಿಸಿರುವ ವಿಡಿಯೋಗಳು ಬಂದದ್ದು ಎಲ್ಲಿಂದ? ಅವುಗಳನ್ನು ಬಿಟ್ಟದ್ದು ಯಾರು ಅನ್ನೋ ಪ್ರಶ್ನೆಗಳು ಕಾಡ್ತಿರುವಾಗಲೇ ಪ್ರಜ್ವಲ್ ರೇವಣ್ಣರ ಮಾಜಿ ಕಾರು ಚಾಲಕ ಧುತ್ತನೇ ಪ್ರತ್ಯಕ್ಷರಾಗಿದ್ದಾರೆ.

ಒಂದು ಕಾಪಿಯನ್ನು ದೇವರಾಜೇಗೌಡರಿಗೆ ಕೊಟ್ಟಿದ್ದೆ ಎಂದ ಡ್ರೈವರ್‌

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಬಗ್ಗೆ ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಖುದ್ದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾನು 15 ವರ್ಷಗಳಿಂದ ರೇವಣ್ಣ ಕುಟುಂಬದ ಜೊತೆ ಕೆಲಸ ಮಾಡಿದ್ದೇನೆ. ಪ್ರಜ್ವಲ್‌ ರೇವಣ್ಣ ನನ್ನ ಜಮೀನು ಬರೆಸಿಕೊಂಡು ತೊಂದರೆ ಕೊಟ್ಟಿದ್ದಕ್ಕೆ ಕೆಲಸ ಬಿಟ್ಟಿದ್ದೆ ಅಂತ ಹೇಳಿದ್ದಾರೆ. ಬಳಿಕ ನ್ಯಾಯಕ್ಕಾಗಿ ವಕೀಲ ಹಾಗೂ ಬಿಜೆಪಿ ನಾಯಕರಾದ ದೇವರಾಜೇಗೌಡರ ಬಳಿ ಹೋಗಿದ್ದೆ. ಆಗ ನನ್ನ ಬಳಿ ಇರುವ ಪೋಟೋ ವಿಡಿಯೋ ರಿಲೀಸ್ ಮಾಡಬಾರದೆಂದು ಪ್ರಜ್ವಲ್ ಸ್ಟೇ ತಂದಿದ್ರು. ಈ ಬಗ್ಗೆ ದೇವರಾಜೇಗೌಡರನ್ನ ಭೇಟಿ ಮಾಡಿದಾಗ ನ್ಯಾಯ ಕೊಡಿಸುವ ಮಾತಾಡಿದ್ದರು. ಈ ವೇಳೆ ವಿಡಿಯೋ ಹಾಗೂ ಫೋಟೋ ಕೊಡು ಎಂದು ಕೇಳಿದಾಗ ಒಂದು ಕಾಪಿ ಕೊಟ್ಟಿದ್ದೆ. ಅವರು ಅದನ್ನು ಏನು ಮಾಡಿದ್ರೋ ಗೊತ್ತಿಲ್ಲ ಅಂತ ಹೇಳಿದ್ದಾರೆ.  ಇನ್ನು, ಪೆನ್​ಡ್ರೈವ್ ಹಂಚಿಕೆ ಬಗ್ಗೆಯೂ ಕಾರ್ತಿಕ್ ಸ್ಫೋಟಕ ಮಾಹಿತಿ ಕೊಟ್ಟಿದ್ದಾರೆ. ನಾನು ದೇವರಾಜೇಗೌಡರಿಗೆ ಮಾತ್ರ ಕೊಟ್ಟಿದ್ದೆ. ಯಾವುದೇ ಕಾಂಗ್ರೆಸ್ ನಾಯಕರಿಗೆ ಕೊಟ್ಟಿಲ್ಲ ಅಂತ ಹೇಳಿದ್ದಾರೆ.

ನಾನು ನೀಚ ಕೆಲಸ ಮಾಡಲ್ಲ, ಕಾನೂನು ಹೋರಾಟ ಎಂದ ದೇವರಾಜೇಗೌಡ

ಕಾರ್ತಿಕ್ ಸಾಲು ಸಾಲು ಆರೋಪಗಳ ಬೆನ್ನಲ್ಲೇ ದೇವರಾಜೇಗೌಡ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಹರಿಬಿಟ್ಟಿದ್ದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಲೀಸ್‌ ಮಾಡೋದಾಗಿದ್ದರೆ ಬಿಜೆಪಿ ಹೈಕಮಾಂಡ್​ಗೆ ಪತ್ರ ಯಾಕೆ ಬರೀತಿದ್ದೆ? ನಾನು ನೀಚ ಕೆಲಸ ಮಾಡಲ್ಲ. ನನ್ನದು ಏನಿದ್ರೂ ಕಾನೂನು ಹೋರಾಟ ಅಂತ ಹೇಳಿದ್ದಾರೆ. ಅಶ್ಲೀಲ ಹಗರಣ ಸಂಬಂಧ ಎಸ್​ಐಟಿ ಎದುರು ಕಾರ್ತಿಕ್ ಹಾಜರಾಗಿದ್ದಾರೆ. ಕಾರ್ತಿಕ್​ನ ವಿಚಾರಣೆ ನಡೆಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸದ್ಯ ತನಿಖೆ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಕೇಸ್​​; ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಮಾಜಿ ಡ್ರೈವರ್​​

https://newsfirstlive.com/wp-content/uploads/2024/04/prajval7.jpg

Load More