newsfirstkannada.com

ಹಾಸನದಲ್ಲಿ ಅಶ್ಲೀಲ ವಿಡಿಯೋ ಕೇಸ್​; ಹೇಗಿರುತ್ತೆ ಬಿ.ಕೆ ಸಿಂಗ್ ನೇತೃತ್ವದ ಎಸ್​ಐಟಿ ತನಿಖೆ?

Share :

Published April 29, 2024 at 9:10am

Update April 29, 2024 at 9:12am

    ಹಿರಿಯ IPS ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ಟೀಂ

    ಗೌರಿ ಲಂಕೇಶ್ ಕೇಸ್​ನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಬಿ.ಕೆ ಸಿಂಗ್

    ಎಸ್​ಪಿ, ನಾಲ್ವರು ಡಿವೈಎಸ್​ಪಿ ಕೂಡ ಎಸ್ಐಟಿ ತಂಡದಲ್ಲಿದ್ದಾರೆ

ಹಾಸನದಲ್ಲಿನ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ತನಿಖೆಗೆ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್​ನ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ವರದಿ ನೀಡುವಂತೆ ಸೂಚನೆ ನೀಡಿದೆ.

ಈ ಹಿಂದೆ ಗೌರಿ ಲಂಕೇಶ್ ಕೇಸ್​ನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಬಿ.ಕೆ ಸಿಂಗ್ ಜೊತೆ ಮೂವರು SP, 4 ಡಿವೈಎಸ್​ಪಿ ಕೂಡ ಎಸ್ಐಟಿ ತಂಡದಲ್ಲಿದ್ದಾರೆ.

ಇದನ್ನೂ ಓದಿ: ಅಬ್ಬಾಬ್ಬ..! ಡೇರಿಲ್ ಮಿಚೆಲ್ ನಿನ್ನೆ ಹಿಡಿದ ಕ್ಯಾಚ್​ಗಳು ಎಷ್ಟು ಗೊತ್ತಾ? Catches Win Matches ಅನ್ನೋದು ಪ್ರೂವ್..!

ಹೇಗಿರುತ್ತೆ ಎಸ್​ಐಟಿ ತನಿಖೆ?

  • ಸಂತ್ರಸ್ತ ಮಹಿಳೆಯರನ್ನ ಸಂಪರ್ಕಿಸಲಿರುವ SIT ತಂಡ
  • ಪ್ರಕರಣದ ಬಗ್ಗೆ ಸಂತ್ರಸ್ತರಿಂದ ಹೇಳಿಕೆ ದಾಖಲಿಸಲಾಗುತ್ತೆ
  • ಬಳಿಕ ಸಂತ್ರಸ್ತೆಯರನ್ನ ಕೋರ್ಟ್​​ಗೆ ಕರೆಸಿ ಹೇಳಿಕೆ ದಾಖಲು
  • ಸಂತ್ರಸ್ತೆಯರನ್ನ ಕರೆದೊಯ್ದು ಸ್ಥಳ ಮಹಜರು ನಡೆಸಲಾಗುತ್ತದೆ
  • ಬಳಿಕ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಂಗ್ರಹ ಮಾಡಲಾಗುತ್ತದೆ
  • ರೆಕಾರ್ಡ್ ಮಾಡಿರುವ ಮೊಬೈಲ್ ವಶಕ್ಕೆ ಪಡೆಯಲಿದ್ದಾರೆ
  • ಮೊಬೈಲ್ ವಿಡಿಯೋಗಳನ್ನ FSLಗೆ ರವಾನಿಸಲಾಗುತ್ತದೆ
  • FSLನಲ್ಲಿ ವಿಡಿಯೋ ಅಸಲೀಯತ್ತಿನ ಬಗ್ಗೆ ಪರೀಕ್ಷಿಸಲಾಗುತ್ತೆ
  • ಹೇಳಿಕೆ, FSL ರಿಪೋರ್ಟ್ ಆಧರಿಸಿ ವರದಿ ಸಿದ್ಧಪಡಿಸಲಾಗುತ್ತೆ

ಒಂದೆಡೆ ಪೆನ್​ಡ್ರೈವ್​ ಪ್ರಕರಣದ ತನಿಖೆ ಚುರುಕುಗೊಂಡಿದ್ರೆ, ಮತ್ತೊಂದೆಡೆ ಹಾಸನ ಸಂಸದನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಸಂತ್ರಸ್ಥ ಮಹಿಳೆಯರೇ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಇವತ್ತು ಹಾಸನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ.

ಇದನ್ನೂ ಓದಿ:ದುಬೈನಲ್ಲಿ ಬರೋಬ್ಬರಿ 2.9 ಲಕ್ಷ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ, ಅದ್ಭುತ ಫೋಟೋಗಳು..!

ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಡಿ.ಕೆ.ಸುರೇಶ್​ ಒತ್ತಾಯ
ಈ ಬಗ್ಗೆ ಟ್ವೀಟ್​ ಮಾಡಿರುವ ಸಂಸದ ಡಿ.ಕೆ.ಸುರೇಶ್​, ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ಆ ಕುಟುಂಬ ದಿಂದ ಯಾವುದೇ ಸಮಯಕ್ಕೂ ಆಪತ್ತು ತಪ್ಪಿದ್ದಲ್ಲ. ಹೀಗಾಗಿ ಸರ್ಕಾರ ಜವಾಬ್ಧಾರಿ ತಗೆದುಕೊಂಡು ಎಲ್ಲಾ ಸಂತ್ರಸ್ತೆಯರಿಗೂ ಸೂಕ್ತ ರಕ್ಷಣೆ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ಅಶ್ಲೀಲ ವಿಡಿಯೋ ಕೇಸ್​; ಹೇಗಿರುತ್ತೆ ಬಿ.ಕೆ ಸಿಂಗ್ ನೇತೃತ್ವದ ಎಸ್​ಐಟಿ ತನಿಖೆ?

https://newsfirstlive.com/wp-content/uploads/2024/03/Prajwal-Revanna-1.jpg

Load More