newsfirstkannada.com

ಪ್ರಜ್ವಲ್ ಪೆನ್‌ಡ್ರೈವ್ ಕೇಸ್​; ಮತ್ತಿಬ್ಬರು ಅರೆಸ್ಟ್‌.. ಯಾರಿವರು..?

Share :

Published May 13, 2024 at 8:45am

Update May 13, 2024 at 8:38am

    SIT ಕರೆದೊಯ್ಯುವಾಗ ಹೆದರಬೇಡವೆಂದು ಧೈರ್ಯ ತುಂಬಿದ ತಂದೆ

    ವಿಡಿಯೋ ಹಂಚಿಕೆ ಮಾಡಿದ್ದು ಯಾರೆಂಬುದು ಪತ್ತೆಗೆ ಮುಂದಾದ SIT

    ಹಾಸನದ ಮಾಜಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡಿದ್ದ ಬಗ್ಗೆ ಮಾಹಿತಿ

ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಈ ಕೇಸ್​ನಲ್ಲಿ ಹಾಸನದ ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾಗಿರುವ ಇಬ್ಬರನ್ನು ಎಸ್​ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಇದೀಗ ಬಂಧಿತರನ್ನ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಹರಿದಾಟ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಪ್ರಜ್ವಲ್​ ಪೆನ್‌ಡ್ರೈವ್‌ಗಳನ್ನು ಹಾಸನದಾದ್ಯಂತ ಹಂಚಿಕೆ ಮಾಡಿದ್ದು ಯಾರು ಅನ್ನೋದನ್ನು ಪತ್ತೆ ಹಚ್ಚಿಲು ಮುಂದಾಗಿರುವ ಪೊಲೀಸರು, ಇದೀಗ ಮತ್ತಿಬ್ಬರನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿ ರಾಜ್ಯದಲ್ಲಿ ಭಾರೀ ಮಳೆ.. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ಎಲ್ಲೆಲ್ಲಿ, ಏನೇನು ಆಗಿದೆ?

ರಾಜ್ಯದಲ್ಲಿ ಪ್ರಜ್ವಲ್​ ಅಶ್ಲೀಲ ವಿಡಿಯೋ ಪ್ರಕರಣದಷ್ಟೇ, ಆ ವಿಡಿಯೋಗಳನ್ನು ಹಂಚಿಕೆ ಮಾಡಿದವ ವಿರುದ್ಧವೂ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಪ್ರಜ್ವಲ್​ ಪೆನ್​ಡ್ರೈವ್​ ಹಂಚಿಕೆ ಬಗ್ಗೆ 23ರಂದೇ ದೂರು ನೀಡಿದ್ರು. ಬಳಿಕ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ ಪೆನ್​ಡ್ರೈವ್​ ಹಂಚಿಕೆ ಪ್ರಕರಣದಲ್ಲಿ ಚೇತನ್ ಹಾಗೂ ಲಿಖಿತ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಈ ಅರ್ಜಿ ವಜಾಗೊಂಡ ಬೆನ್ನಲ್ಲೇ ಇಬ್ಬರನ್ನೂ ತನಿಖಾಧಿಕಾರಿಗಳು ಅರೆಸ್ಟ್​ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಕೋರ್ಟ್‌ ಇಬ್ಬರನ್ನೂ ಜೈಲಿಗೆ ಕಳುಹಿಸಿದೆ..

ಇಬ್ಬರಿಗೆ ನ್ಯಾಯಾಂಗ ಬಂಧನ

  • ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಹಂಚಿಕೆ ಕೇಸ್‌ನಲ್ಲಿ ಇಬ್ಬರ ಬಂಧನ
  • ಇಬ್ಬರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಕೊಟ್ಟ ಕೋರ್ಟ್‌
  • ಲಿಖಿತ್​, ಚೇತನ್​ ಇಬ್ಬರಿಗೂ 14 ದಿನ​ಗಳ ನ್ಯಾಯಾಂಗ ಬಂಧನ
  • ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಗಿರೀಗೌಡ ಆದೇಶ

ಅರೆಸ್ಟ್ ಆದ ಲಿಖಿತ್‌ಗೆ ಧೈರ್ಯ ಹೇಳಿದ ಆತನ ತಂದೆ

ಬಂಧಿತ ಆರೋಪಿಗಳನ್ನ ಪೊಲೀಸರು ಕರೆದೊಯ್ಯುತ್ತಿದ್ದಾಗ ಲಿಖಿತ್‌ ತಂದೆ ಕೂಡಾ ಅಲ್ಲಿಗೆ ಧಾವಿಸಿದ್ರು.. ಇದೇ ವೇಳೆ ಲಿಖಿತ್‌ಗೆ ಆತನ ತಂದೆ ಪ್ರಕಾಶ್, ಮೆಡಿಕಲ್ ಟೆಸ್ಟ್​ಗೆ ಕರೆದೊಯ್ಯುವಾಗ ಹೆದರಬೇಡ ಅಂತ ಧೈರ್ಯ ತುಂಬಿದ್ದಾರೆ. ಅಲ್ಲದೇ ಪ್ರಪಂಚದಲ್ಲಿ ಆಗಬಾರದೇನು ಆಗಿಲ್ಲ ಎನ್ನುತ್ತಾ ಲಿಖಿತ್ ತಂದೆ ಅಭಯ ನೀಡಿದ್ದಾರೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಪ್ರಜ್ವಲ್​ ಪೆನ್​ಡ್ರೈವ್​ ವೈರಲ್​ ಪ್ರಕರಣವನ್ನ ಎಸ್​ಐಟಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅದರ ಮೂಲ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಬಂಧಿತರಲ್ಲಿ ಆರೋಪಿ ಚೇತನ್ ಹಾಸನದ ಮಾಜಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡಿದ್ದ ಅನ್ನೋದು ಗೊತ್ತಾಗಿದೆ. ಇದೀಗ ಇಡೀ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ಪೆನ್‌ಡ್ರೈವ್ ಕೇಸ್​; ಮತ್ತಿಬ್ಬರು ಅರೆಸ್ಟ್‌.. ಯಾರಿವರು..?

https://newsfirstlive.com/wp-content/uploads/2024/05/PRAJWAL_CASE_SIT.jpg

Load More