ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಕೇಸ್​.. ವಕೀಲ ದೇವರಾಜೇಗೌಡಗೆ ಶಾಕ್ ಮೇಲೆ ಶಾಕ್​.. ಕೋರ್ಟ್ ಏನಂತು?​

author-image
Bheemappa
Updated On
ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಕೇಸ್​.. ವಕೀಲ ದೇವರಾಜೇಗೌಡಗೆ ಶಾಕ್ ಮೇಲೆ ಶಾಕ್​.. ಕೋರ್ಟ್ ಏನಂತು?​
Advertisment
  • ಸಾಕ್ಷಿದಾರನನ್ನ ಇಲ್ಲಿ ಆರೋಪಿ ಮಾಡಲಾಗಿದೆ ಅಂತ ವಕೀಲರು ವಾದ
  • ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋಗಳು ಹಂಚಿಕೆ ಪ್ರಕರಣ
  • ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಪೊಲೀಸರು

ಹಾಸನ: ಮಹಿಳೆ ಮೇಲೆ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅವರನ್ನು ಜೆಎಂಎಫ್​ಸಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಕೋರ್ಟ್ ಈ ಆದೇಶವನ್ನು ನೀಡಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ‌ ದೇವರಾಜೇಗೌಡರನ್ನ ಒಂದು ದಿನ ಕಾಲ ಎಸ್​ಐಟಿ ವಶ ಕೋರ್ಟ್ ನೀಡಿದೆ. ಈ ಪ್ರಕರಣದಲ್ಲಿ 8ನೇ ಆರೋಪಿಯಾಗಿ ಪರಿಗಣಿಸಲಾಗಿದ್ದು ನಾಳೆ ಸಂಜೆ 5 ಗಂಟೆಯವರೆಗೂ ಎಸ್​ಐಟಿ ಕಸ್ಟಡಿಯಲ್ಲಿ ದೇವರಾಜೇಗೌಡ ಇರಲಿದ್ದಾರೆ.

ಇದನ್ನೂ ಓದಿ: RCB vs CSK ಪ್ಲೇ ಆಫ್​; ಈ ತಂಡ ಚಿನ್ನಸ್ವಾಮಿಯಲ್ಲಿ ಮ್ಯಾಚ್​ ಗೆದ್ರೆ ಸ್ಪೆಷಲ್ ರೆಕಾರ್ಡ್​​ ಗ್ಯಾರಂಟಿ

publive-image

ಏಪ್ರಿಲ್ 23 ರಂದು ಹಾಸನ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಅನ್ನು ಮಹಿಳೆಯೊಬ್ಬರು ದಾಖಲು ಮಾಡಿದ್ದರು. ಕೇಸ್​ನಲ್ಲಿ 8ನೇ ಆರೋಪಿಯಾಗಿ ದೇವರಾಜೇಗೌಡರನ್ನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದರು. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ವೇಳೆ ವಿಚಾರಣೆ ನಡೆಸಲು ವಶಕ್ಕೆ ನೀಡುವಂತೆ ಎಸ್​ಐಟಿ ಮನವಿ ಮಾಡಿತ್ತು.

ಇದನ್ನೂ ಓದಿ: RCB ಫ್ಯಾನ್ಸ್​​ಗೆ ಗುಡ್​ನ್ಯೂಸ್,​ ಭಯ ಬೇಡ.. ಮಳೆ ಬಂದ್ರು ಚಿನ್ನಸ್ವಾಮಿಯಲ್ಲಿದೆ ಈ ಅತ್ಯುನ್ನತ ತಂತ್ರಜ್ಞಾನ; ಏನದು?

ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸುವಾಗ ಪೆನ್​ಡ್ರೈವ್ ಹಂಚಿಕೆ ಮಾಡಿರೋ ಆರೋಪ ದೇವರಾಜೇಗೌಡ ಮೇಲಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಪಬ್ಲಿಕ್​ ಪ್ರಾಸಿಕ್ಯೂಟರ್ ವಾದಿಸಿದರು. ಸಾಕ್ಷಿದಾರನನ್ನ ಇಲ್ಲಿ ಆರೋಪಿ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿಯೇ ತರಾತುರಿಯಲ್ಲಿ ಎಫ್​ಐಆರ್ ದಾಖಲಿಸಿ ಕರೆದುಕೊಂಡು ಬರಲಾಗಿದೆ ಎಂದು ದೇವರಾಜೇಗೌಡ ಪರ ವಕೀಲ ಸುನಿಲ್ ಅವರು ವಾದ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಒಂದು ದಿನ ವಶಕ್ಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment