/newsfirstlive-kannada/media/post_attachments/wp-content/uploads/2024/04/PRAJWAL.jpg)
ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಪೆನ್ಡ್ರೈನ್ ಪ್ರಕರಣ ಸದ್ದು ಮಾಡ್ತಿದೆ. ರಾಜ್ಯದಲ್ಲಿ ಜೆಡಿಎಸ್ ನಾಯಕರಿಗೆ ಮುಜುಗರವನ್ನು ಉಂಟು ಮಾಡಿದೆ. ಹೀಗಾಗಿ ಪಕ್ಷದ ಡ್ಯಾಮೇಜ್ ಕಂಟ್ರೋಲ್ಗೆ ದಳಪತಿಗಳು ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಸ್ವಪಕ್ಷದ ನಾಯಕರ ಒತ್ತಡ ಹೆಚ್ಚಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕೈಗೊಳ್ಳುವ ಸುಳಿವು ನೀಡಿದ್ದಾರೆ. ಇವತ್ತು ಹುಬ್ಬಳ್ಳಿಯಲ್ಲಿ ಮಹತ್ವದ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಜ್ವಲ್ ವಿಚಾರ ಚರ್ಚೆಗೆ ಬರಲಿದ್ದು, ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಹೆಚ್ಡಿಕೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಸುಖಾ ಸುಮ್ಮನೆ ಕೊಹ್ಲಿ ಟೀಕಿಸಿದ್ಕೆ ಸಿಡಿಮಿಡಿ.. ಗಂಭೀರ್ ಅಚ್ಚರಿಯ ಹೇಳಿಕೆ
ಒಂದೆಡೆ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ಗೆ ದಳಪತಿಗಳು ಪ್ರಜ್ವಲ್ ಉಚ್ಛಾಟನೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಹಾಸನ ವಿಡಿಯೋ ಪ್ರಕರಣದಲ್ಲಿ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಎಸ್ಪಿ ಸೀಮಾ ಲಾಟ್ಕರ್ ಮುಂದೆ ಐವರು ಸಂತ್ರಸ್ತೆಯರು ಹಾಜರಾಗಿ, ಉತ್ತರ ನೀಡಿದ್ದಾರೆ.
- ಗುರುತು ಪತ್ತೆಯಾದ ಸಂತ್ರಸ್ತೆಯರನ್ನ ಕರೆಸಿ ಎಸ್ಐಟಿ ತನಿಖೆ
- ಎಸ್ಪಿ ಸೀಮಾ ಲಾಟ್ಕರ್ ಮುಂದೆ ಐವರು ಸಂತ್ರಸ್ತೆಯರು ಹಾಜರು
- ಸೀಮಾ ಲಾಟ್ಕರ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು
- ಸಂತ್ರಸ್ತೆಯರಿಂದ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದ ಎಸ್ಐಟಿ
- ಹಾಸನದ ವೈರಲ್ ವೀಡಿಯೋದಲ್ಲಿ ಇರುವುದು ನೀವೇನಾ?
- ಯಾವ ಉದ್ದೇಶಕ್ಕಾಗಿ ಆ ವೀಡಿಯೋ ಮಾಡಿಕೊಳ್ಳಲಾಗಿತ್ತು?
- ಮಹಿಳೆಯರ ಇಚ್ಛೆಗನುಸಾರವಾಗಿ ಮಾಡಿಕೊಳ್ಳಲಾಗಿತ್ತಾ?
- ಭಯ ಉಂಟು ಮಾಡಿ ವಿಡಿಯೋ ಮಾಡಿಕೊಳ್ಳಲಾಗಿತ್ತಾ?
ಇತ್ತ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೂ ಇರಿಸುಮುರಿಸು ತರಿಸಿದೆ. ಪ್ರಜ್ವಲ್ ವಿಚಾರವನ್ನೇ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಮುಗಿಬೀಳುತ್ತಿದ್ದಾರೆ.. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವ ಬಿಜೆಪಿಯವರು, ಮೊದಲು ಹಾಸನ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಬಿಜೆಪಿಗೆ ತಿರುಗೇಟು ನೀಡುತ್ತಿದ್ದಾರೆ.
ಇದನ್ನೂ ಓದಿ:ಇನ್ನೇನು ಸಾಯುತ್ತಿದ್ದ ಮಹಿಳೆಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ, ಮರುಜನ್ಮ ಪಡೆದ ಪವಾಡಗಿತ್ತಿಯ ಕಥೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ