/newsfirstlive-kannada/media/post_attachments/wp-content/uploads/2025/05/PRAJWAL-REVANNA.jpg)
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಜೈಲಿನಲ್ಲಿದ್ದಾರೆ. ಕೋರ್ಟ್ನಲ್ಲಿ ಡ್ರೈವರ್ ಕಾರ್ತಿಕ್ ಸಾಕ್ಷ್ಯ ಹೇಳಿರೋ ವಿಚಾರ ತಿಳಿದು ಒಂದರ ನಂತರ ಒಂದು ಕಷ್ಟಗಳು ಬರ್ತಾನೇ ಇದೆ ಅಂತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಮಾಜಿ ಸಂಸದನಿಗೆ ಮಾಜಿ ಕಾರು ಚಾಲಕನಿಂದ ಮತ್ತೆ ಸಂಕಷ್ಟ
ಪ್ರಜ್ವಲ್ ರೇವಣ್ಣ ಮಾಜಿ ಚಾಲಕ ಕಾರ್ತಿಕ್ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆ ದಾಖಲಿಸುವಾಗ ಅದೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ವಿಚಾರ ತಿಳಿದು ಪ್ರಜ್ವಲ್ಗೆ ಹಳೇ ನೆನಪುಗಳು ಕಾಡ್ತಿದ್ದು, ಭಯ ಹೆಚ್ಚಾಗಿ ನಿದ್ದೆಗೆಡುವಂತಾಗಿದೆ. ಮೊಬೈಲ್‌ನಲ್ಲಿ 200 ಹುಡುಗಿಯರ ಅಶ್ಲೀಲ ಫೋಟೋಗಳು ಮತ್ತು 40-50 ವಿಡಿಯೋಗಳಿದ್ದವು ಎಂದು ಕಾರ್ತಿಕ್ ನ್ಯಾಯಾಲಯದ ಮುಂದೆ ತಿಳಿಸಿದ್ದಾರಂತೆ. ಪ್ರಜ್ವಲ್ ಅಶ್ಲೀಲ ಆಟಗಳ ಬಗ್ಗೆ ಭವಾನಿ ರೇವಣ್ಣಗೂ ಮಾಹಿತಿ ಇತ್ತಂತೆ. ಇದರಿಂದ ತಾಯಿ-ಮಗನ ನಡುವೆ ಮಾತು ಮುರಿದಿತ್ತಂತೆ. ಅಷ್ಟಕ್ಕೂ ಆ ಡ್ರೈವರ್ ಕಾರ್ತಿಕ್ ಕೋರ್ಟ್ ಮುಂದೆ ಏನ್ ಹೇಳಿದ್ದಾರೆ ಅನ್ನೋ ವಿವರ ಇಲ್ಲಿದೆ.
ಡ್ರೈವರ್ ನುಡಿದ ಸಾಕ್ಷ್ಯ
2009ರಿಂದ ಹೆಚ್.ಡಿ.ರೇವಣ್ಣ, ರೇವಣ್ಣರ ಪತ್ನಿ ಭವಾನಿ ಮತ್ತು ಮಗ ಸೂರಜ್ ಅವರ ಕಾರಿಗೆ ಚಾಲಕನಾಗಿದ್ದೆ. ನಂತರ 2018ರಿಂದ ಮಾಜಿ ಸಂಸದ ಪ್ರಜ್ವಲ್ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಪ್ರಜ್ವಲ್ ಸಂಚಾರ ಮಾಡುತ್ತಿದ್ದಾಗ ಕಾರಿನಲ್ಲೇ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸ್ತಿದ್ರು. ನಾನು ಆ ಕಡೆ ನೋಡಿದರೆ ಮೊಬೈಲ್ ತಿರುಗಿಸಿಕೊಳ್ಳುತ್ತಿದ್ದ. ಅದೊಂದು ದಿನ ಪ್ರಜ್ವಲ್ ಜಯನಗರದಲ್ಲಿನ ಫ್ರೆಂಡ್ ಮನೆಗೆ ಹೋದಾಗ ಕಾರಿನಲ್ಲೇ ಮೊಬೈಲ್ ಬಿಟ್ಟಿದ್ದರು.
ಇದನ್ನೂ ಓದಿ: RCB ಗೆಲ್ಲಲು ಈ ಫಾರ್ಮುಲಾ ಬೇಕೇಬೇಕು.. ಇವತ್ತು ಯಾರ ಕೊಡುಗೆ ತುಂಬಾನೇ ಮುಖ್ಯ ಗೊತ್ತಾ..?
ಮೊಬೈಲ್ ತೆಗೆದು ನೋಡಿದಾಗ ಸುಮಾರು 200 ಹುಡುಗಿರ ಅಶ್ಲೀಲ ಫೋಟೋ ಪತ್ತೆಯಾಯ್ತು. 30 ರಿಂದ 40 ಹುಡುಗಿಯರ ಅಶ್ಲೀಲ ವಿಡಿಯೋಗಳು ಇದ್ವು. ಈ ವಿಚಾರವನ್ನ ಭವಾನಿ ರೇವಣ್ಣಗೆ ತಿಳಿಸಲು ನನ್ನ ಮೊಬೈಲ್ಗೆ ವರ್ಗಾಯಿಸಿಕೊಂಡೆ. ಬಳಿಕ ನಾನು ಭವಾನಿ ರೇವಣ್ಣಗೆ ಈ ಬಗ್ಗೆ ವಿಷಯ ತಿಳಿಸಿದೆ. ಭವಾನಿ ಅವರು ಆ ಫೋಟೋ, ವಿಡಿಯೋಗಳನ್ನು ತಮಗೆ ಕಳುಹಿಸುವಂತೆ ಹಾಗೂ ಎಲ್ಲಿಯೂ ಬಹಿರಂಗಪಡಿಸದಂತೆ ಸೂಚಿಸಿದ್ದರು.
ಬಳಿಕ ವಿಡಿಯೋ, ಫೋಟೋಗಳನ್ನ ಭವಾನಿ ರೇವಣ್ಣರಿಗೆ ಕಳುಹಿಸಿದೆ. ಈ ವಿಚಾರದ ನಂತರ ಭವಾನಿ ರೇವಣ್ಣ, ಪ್ರಜ್ವಲ್ ಜೊತೆ ಮಾತು ಬಿಟ್ಟರು. ವಿಡಿಯೋ, ಫೋಟೋಗಳ ವಿಚಾರ ಬಗ್ಗೆ ಹೇಳಿದ್ದು ಯಾರು ಅಂತ ಪ್ರಜ್ವಲ್ ಕೇಳಿದಕ್ಕೆ, ಚಾಲಕ ಕಾರ್ತಿಕ್ ಹೇಳಿದ್ದು ಅಂತ ಭವಾನಿ ಹೇಳಿದ್ದರು. ಆ ಬಳಿಕ ಪ್ರಜ್ವಲ್ ರೇವಣ್ಣ ಫೋನ್ ಮಾಡಿ ನನಗೆ ಬೈದ. 2022ರಲ್ಲಿ ನಾನು ಪ್ರಜ್ವಲ್ ರೇವಣ್ಣ ಬಳಿ ಕೆಲಸ ಬಿಟ್ಟೆ ಎಂದು ಕಾರ್ತಿಕ್ ಸಾಕ್ಷಿ ನುಡಿದಿದ್ದಾರೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲದೆ ಹೆಚ್.ಡಿ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸ್ನಲ್ಲೂ ಡ್ರೈವರ್ ಕಾರ್ತಿಕ್ ಕೋರ್ಟ್ಗೆ ಸಾಕ್ಷ್ಯ ಹೇಳಿದ್ದಾರೆ. ಒಟ್ನಲ್ಲಿ, ಒಂದೇ ದಿನ ಮಗ ಪ್ರಜ್ವಲ್ಗೆ, ತಂದೆ ರೇವಣ್ಣಗೆ ಮಾಜಿ ಡ್ರೈವರ್ ಹೇಳಿಕೆ ಸಂಕಷ್ಟ ತೊಂದೊಡ್ಡಿದೆ.
ಇದನ್ನೂ ಓದಿ: Monsoon rain ಕರ್ನಾಟಕದಲ್ಲಿ ಮಾತ್ರ ಮಳೆನಾ.. ಪಕ್ಕದ ರಾಜ್ಯಗಳ ಪರಿಸ್ಥಿತಿಗಳು ಹೇಗಿವೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ