Advertisment

ಪುರುಷತ್ವ ಪರೀಕ್ಷೆಗೆ ಹೋಗಲು ಜಡ್ಜ್ ಮುಂದೆ ಪ್ರಜ್ವಲ್ ರೇವಣ್ಣ ಅಳಲು; ಕೇಳಿಕೊಂಡಿದ್ದೇನು?

author-image
admin
Updated On
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌; ಕೋರ್ಟ್‌ ಮಹತ್ವದ ಆದೇಶ
Advertisment
  • ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿಕೊಂಡಿದ್ದಕ್ಕೆ ಬೇಸರ
  • ಮತ್ತೊಂದು ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶುರುವಾದ ಸಂಕಷ್ಟ
  • ಪ್ರಜ್ವಲ್‌ಗೆ ನಿಮಗೆ ಏನಾದರೂ ಸಮಸ್ಯೆ ಇದೆಯಾ ಎಂದ ಪ್ರಶ್ನಿಸಿದ ಜಡ್ಜ್‌

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ಮುಂದುವರಿದಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ತನ್ನ ಅಳಲು ತೋಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಅತಿ ವೇಗ ತಿಥಿ ಬೇಗ.. ನಟ ದರ್ಶನ್ ಅಂಡ್‌ ಗ್ಯಾಂಗ್‌ಗೆ ಉಮಾಪತಿ ಗೌಡ ಕೌಂಟರ್‌; ಹೇಳಿದ್ದೇನು? 

ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೊಂದು ಪ್ರಕರಣದಲ್ಲಿ ಕಸ್ಟಡಿಗೆ ನೀಡಲು ಮನವಿ ಮಾಡಿದರು. ಎಸ್ಐಟಿ ಪರ ಎಸ್‌ಪಿಪಿ ಅಶೋಕ್ ನಾಯಕ್ ಅವರು ಕ್ರೈಂ ನಂಬರ್ 20ರಲ್ಲಿ ಕಸ್ಟಡಿಗೆ ನೀಡಲು ಮನವಿ ಮಾಡಿದರು. ಜಡ್ಜ್ ಮೂರನೇ ಕೇಸ್‌ನಲ್ಲಿ ಬಾಡಿ ವಾರಂಟ್ ಹಾಕಿದ್ರೆ ತಗೋಬಹುದು. ಆದರಂತೆ ನಾವು ಈಗ ಜೆಸಿ ಕೊಡ್ತೀವಿ. ನಾಳೆ ವಿಸಿ ಮೂಲಕ ಪ್ರಡ್ಯೂಸ್ ಮಾಡಿ. ಆನಂತರ ಬಾಡಿ ವಾರಂಟ್ ಮೇಲೆ ಪಡೆಯಬಹುದು ಎಂದು ಸೂಚನೆ ನೀಡಿದ್ದಾರೆ.

publive-image

ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ನಿಮಗೆ ಏನಾದರೂ ಮೆಡಿಕಲ್ ಸಮಸ್ಯೆ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಪ್ರಜ್ವಲ್‌, ಹೌದು ನನಗೆ ಆರೋಗ್ಯ ಸಮಸ್ಯೆ ಇದೆ. ಉಸಿರಾಟದ ತೊಂದರೆ ಇದ್ದು, MRI ಮಾಡಿಸಬೇಕಿದೆ ಎಂದಿದ್ದಾರೆ. ಇದಕ್ಕೆ ಜಡ್ಜ್‌, ಆರೋಪಿಗೆ ಜೈಲಿನಲ್ಲಿ ಚಿಕಿತ್ಸೆ ಕೊಡಿಸಲು ತಿಳಿಸಿದ್ದಾರೆ.

Advertisment

ಇದನ್ನೂ ಓದಿ: ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ಸ್ಟೇಷನ್‌ನಲ್ಲಿ ದರ್ಶನ್‌ ನಡೆ ನುಡಿ ಹೇಗಿದೆ? 

ಪುರುಷತ್ವ ಪರೀಕ್ಷೆಗೆ ಮುಜುಗರ
ಕೋರ್ಟ್ ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಅವರು ನಾನು ಎರಡು ಕೇಸ್‌ನಲ್ಲಿ ಒಪ್ಪಿಕೊಂಡು ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗುತ್ತೆ. ಎರಡು ಸಲ ಕೇಳಿದಕ್ಕೆ ನಾನೇ ಮಾಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಕೇಳ್ತಾರೆ. ಈಗಾಗಲೇ ಎರಡು ಕೇಸ್‌ನಲ್ಲಿ ಪುರುಷತ್ವ ಪರೀಕ್ಷೆ ಆಗಿದೆಎಂದು ಜಡ್ಜ್ ಮುಂದೆ ಪ್ರಜ್ವಲ್ ರೇವಣ್ಣ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment