newsfirstkannada.com

ಪ್ರಜ್ವಲ್ ಕನಸು ನುಚ್ಚುನೂರು; ಹಾಸನದಲ್ಲಿ ಅತ್ಯಾಚಾರ ಆರೋಪಿ ಸೋಲಿಗೆ ಸಂಭ್ರಮ; ಆಗಿದ್ದೇನು?

Share :

Published June 4, 2024 at 8:41pm

    43 ಸಾವಿರಕ್ಕೂ ಅಧಿಕ ಮತ ಪಡೆದು ಪಾರ್ಲಿಮೆಂಟ್ ಪ್ರವೇಶಿಸಿದ ಎದುರಾಳಿ

    ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಆರೋಪಿಯಾಗಿರೋ ಪ್ರಜ್ವಲ್ ರೇವಣ್ಣಗೆ ಸೋಲು

    ಅಖಾಡದಲ್ಲಿ ಎರಡನೇ ಬಾರಿ ಗೆಲ್ಲುವ ಕನಸು ಕಂಡಿದ್ದ ನಾಯಕನಿಗೆ ಬಿಗ್‌ ಶಾಕ್

ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡ ಪ್ರಜ್ವಲ್ ರೇವಣ್ಣ ಪೊಲೀಸ್‌ ಕಸ್ಟಡಿ ಸೇರಿದ್ದಾರೆ. ಅತ್ಯಾಚಾರದ ಆರೋಪ ಹೊತ್ತು ಜೈಲುಹಕ್ಕಿಯಾಗಿದ್ದಾರೆ. ಈ ಹೊತ್ತಲ್ಲೇ ಪ್ರಜ್ವಲ್‌ಗೆ ಪಾಠವೋ? ಅಥವಾ ಮಾಡಿದ್ದಾರೆ ಎನ್ನಲಾದ ತಪ್ಪಿಗೆ ಮೊದಲ ಶಿಕ್ಷೆಯೋ? ಹಾಸನ ಮತದಾರರು ಸೋಲಿಸಿಬಿಟ್ಟಿದ್ದಾರೆ. ಲೋಕಸಭಾ ಅಖಾಡದಲ್ಲಿ ಎರಡನೇ ಬಾರಿ ಗೆಲ್ಲುವ ಕನಸು ಕಂಡಿದ್ದ ನಾಯಕನಿಗೆ ಶಾಕ್ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಯ ಹೊತ್ತು. ಅಷ್ಟರಲ್ಲೇ ಹಾಸನದಲ್ಲಿ ಪೆನ್‌ಡ್ರೈವ್ ಪ್ರಸಂಗ ಶುರುವಾಗಿತ್ತು. ವೋಟಿಂಗ್ ಆದ ಮರುದಿನವೇ ಜಿಲ್ಲೆಯಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಈ ಮಧ್ಯೆ ಲೋಕಸಭಾ ಕದನಕ್ಕೆ ಮತದಾನವೂ ನಡೆದಿತ್ತು. ಆದ್ರೀಗ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್ ರೇವಣ್ಣ ಪೊಲೀಸರ ಅತಿಥಿಯಾಗಿದ್ದಾರೆ. ಇದೇ ಹೊತ್ತಲ್ಲಿ ಹಾಸನ ಮತದಾರ ಪ್ರಜ್ವಲ್ ರೇವಣ್ಣನಿಗೆ ತಕ್ಕ ಪಾಠ ಕಲಿಸಿದಂತಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ನೆಲೆಯೂರಲು ಬಯಸಿದ್ದ ಅತ್ಯಾಚಾರ ಆರೋಪಿಯನ್ನ ಪರಾಭವಗೊಳಿಸಿದ್ದಾರೆ.

ಎರಡು ದಶಕಗಳ ಬಳಿಕ ಕಾಂಗ್ರೆಸ್‌ ತೆಕ್ಕೆಗೆ ಹಾಸನ

ಪೆನ್‌ಡ್ರೈವ್ ಕೊಟ್ಟ ಪೆಟ್ಟೋ? ಅಥವಾ ಪ್ರಜ್ವಲ್ ರೇವಣ್ಣನ ಜನರೇ ತಿರಸ್ಕರಿಸಿದ್ರೋ ಆದ್ರೆ, ಇವತ್ತು ಹಾಸನ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ. ಸುಮಾರು 43 ಸಾವಿರಕ್ಕೂ ಅಧಿಕ ಮತಗಳಿಂದ ಶ್ರೇಯಸ್ ಪಟೇಲ್‌ ಪಾರ್ಲಿಮೆಂಟ್ ಪ್ರವೇಶಿಸಿದ್ದಾರೆ. ಈ ಮೂಲಕ ಎರಡು ದಶಕಗಳ ಬಳಿಕ ಕಾಂಗ್ರೆಸ್ ಪಾಳಯದ ತೆಕ್ಕೆಗೆ ಹಾಸನ ಲೋಕಸಭಾ ಕ್ಷೇತ್ರ ಜಾರಿದೆ. ಇದೆಲ್ಲದರ ಮಧ್ಯೆ ಜೆಡಿಎಸ್‌ನಿಂದ ಉಚ್ಛಾಟನೆಯಾಗಿರೋ ನಾಯಕನಿಗೆ ಸೋಲಿನ ಸರಪಳಿ ಸುತ್ತಿಕೊಂಡಿದೆ.

ಪ್ರಜ್ವಲ್ ಸೋಲುತ್ತಿದ್ದಂತೆ ಕಾಂಗ್ರೆಸ್ ಸಂಭ್ರಮಾಚರಣೆ

ಹಾಸನದಲ್ಲಿ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆದ್ದಿದ್ದಾರೆ ಎನ್ನುವ ಸಂಭ್ರಮಕ್ಕಿಂತ ಪ್ರಜ್ವಲ್ ರೇವಣ್ಣ ಸೋತಿದ್ದಾರೆ ಎಂಬ ಸಂಭ್ರಮವೇ ಮುಗಿಲು ಮುಟ್ಟಿತ್ತು. ಹಾಸನದ ಕೈ ಕಾರ್ಯಕರ್ತರೆಲ್ಲಾ ಶ್ರೇಯಸ್ ಪಟೇಲ್ ಗೆಲುವನ್ನ ಸಂಭ್ರಮಿಸಿದ್ರು. ಅಚ್ಚರಿ ಏನಂದ್ರೆ ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಆರೋಪಿಗಳಾದ ಕಾರ್ತಿಕ್ ಗೌಡ, ಪುಟ್ಟರಾಜು ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ್ದಾರೆ. ಹೊಳೆನರಸೀಪುರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸೆಲಬ್ರೇಟ್ ಮಾಡಿದ್ದಾರೆ.

ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು!

ಪ್ರಜ್ವಲ್ ರೇವಣ್ಣಗೆ ಮೊದಲು ಟಿಕೆಟ್ ನೀಡದಂತೆ ಪ್ರೀತಂಗೌಡ ಅಡ್ಡಗಾಲು ಹಾಕಿದ್ರು. ಕೊನೆಗೂ ಹೈ ನಾಯಕರ ಮಾತಿಗೆ ಮಣಿದು ಜೆಡಿಎಸ್‌ಗೆ ಸಹಕಾರ ನೀಡಿದ್ರು. ಆದ್ರೀಗ ಪ್ರಜ್ವಲ್ ರೇವಣ್ಣ ಸೋಲ್ತಿದ್ದಂತೆ ಪ್ರೀತಂಗೌಡ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಹಾಸನದ ಡೈಲಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ್ದಾರೆ. ಅಶ್ಲೀಲ ಆರೋಪ ಹೊತ್ತಿರೋ ಪ್ರಜ್ವಲ್ ರೇವಣ್ಣ ಗೆದ್ದಿದ್ರೂ ಸಂಸದ ಸ್ಥಾನಕ್ಕೆ ಕುತ್ತೂ ಇದ್ದೇ ಇತ್ತು. ಆದ್ರೂ ಎರಡನೇ ಬಾರಿ ಗೆದ್ದು ಪಾರ್ಲಿಮೆಂಟ್‌ಗೆ ಹೋಗುವ ಕನಸು ನುಚ್ಚು ನೂರಾಗಿದೆ. ಇದೀಗ ಒಂದು ಕಡೆ ಅಶ್ಲೀಲ ಆರೋಪದ ಕಳಂಕ. ಮತ್ತೊಂದ್ಕಡೆ ಲೋಕಸಭೆ ಚುನಾವಣೆ ಸೋಲಿನ ಸುಳಿ ಪ್ರಜ್ವಲ್‌ನ ಮತ್ತಷ್ಟು ಘಾಸಿಗೊಳಿಸೋದಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ಕನಸು ನುಚ್ಚುನೂರು; ಹಾಸನದಲ್ಲಿ ಅತ್ಯಾಚಾರ ಆರೋಪಿ ಸೋಲಿಗೆ ಸಂಭ್ರಮ; ಆಗಿದ್ದೇನು?

https://newsfirstlive.com/wp-content/uploads/2024/06/PRAJWAL.jpg

Load More