newsfirstkannada.com

ಮೇ 3ಕ್ಕೆ ವಾಪಸ್ ಬರ್ತಾರಾ ಪ್ರಜ್ವಲ್​ ರೇವಣ್ಣ; ವಿದೇಶಕ್ಕೆ ಹಾರಿದ್ದ ಸಂಸದನ ಬಗ್ಗೆ ಸುಳಿವು ಕೊಟ್ಟಿದ್ಯಾರು?

Share :

Published May 1, 2024 at 9:15pm

    ಮೇ 3 ರಂದು ಬುಕ್ ಆಗಿರುವ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಎಸ್ಐಟಿ ತಂಡ

    ಜರ್ಮನಿಯಲ್ಲಿರುವ ಪ್ರಜ್ವಲ್‌ ಕರೆತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ

    ಜರ್ಮನಿಯ ಫ್ರಾಂಕ್​​ಫರ್ಟ್​ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್​​

ಹಾಸನ ಪೆನ್ ಡ್ರೈವ್ ಕೇಸ್ ದೇಶಾದ್ಯಂತ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ವಿದೇಶದಲ್ಲಿರುವ ಪ್ರಜ್ವಲ್‌ನ ಕರೆಸಲು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆಯೇ ಪ್ರಜ್ವಲ್ ರೇವಣ್ಣ ಆಗಮನದ ಸುದ್ದಿ ಸಿಕ್ಕಿದೆ. ಆದ್ರೆ ಅಂದು ಬರ್ತಾರಾ ಅಥವಾ ಇಲ್ಲವಾ ಅನ್ನೋದೇ ಸದ್ಯದ ಅನುಮಾನ.

ಇತ್ತ ಮತ್ತೆ ರಾಜಕೀಯ ಕೆರೆರಚಾಟ ಮುಂದುವರೆದಿದೆ. ಅಶ್ಲೀಲ ವಿಡಿಯೋ ಹಗರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಹಾಸನದಿಂದ ದೆಹಲಿವರೆಗೂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆದ್ರೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಮಾತ್ರ ಪೊಲೀಸರ ಕೈಗೆ ಸಿಗದೇ ವಿದೇಶಕ್ಕೆ ಹಾರಿದ್ದಾರೆ. ಈ ನಡುವೆ ಪ್ರಜ್ವಲ್ ಆಗಮನದ ಸುದ್ದಿ ಸಿಕ್ಕಿದೆ. ಅಶ್ಲೀಲ ವಿಡಿಯೋಗಳ ಹಗರಣ ಸಂಬಂಧ ಎಸ್‌ಐಟಿ ತನಿಖೆ ಬಿರುಸಿನಿಂದ ನಡೆಯುತ್ತಿದೆ. ಆದ್ರೆ ಪ್ರಮುಖ ಆರೋಪಿ ಪ್ರಜ್ವಲ್‌ ಜರ್ಮನಿಯಲ್ಲಿದ್ದು ಸರ್ಕಾರದ ಮೇಲೆ ಕರೆಸಲು ಒತ್ತಡ ಹೆಚ್ಚಾಗಿದೆ. ಈ ನಡುವೆ ಪ್ರಜ್ವಲ್ ಮೇ 3ರಂದು ಭಾರತಕ್ಕೆ ವಾಪಸ್‌ ಆಗುವ ಸಾಧ್ಯತೆ ಇದೆ.

ಮೇ 3ಕ್ಕೆ ಪ್ರಜ್ವಲ್ ವಾಪಸ್​!?

ಪ್ರಜ್ವಲ್‌ ರೇವಣ್ಣ ಸದ್ಯ ಜರ್ಮಿನಿಯಲ್ಲೇ ಇದ್ದು, ವಿದೇಶಕ್ಕೆ ತೆರಳುವ ಮುನ್ನವೇ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನದಲ್ಲಿ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಿದ್ದರು. ಮೇ 3ರಂದು ಮಧ್ಯಾಹ್ನ 1:30ಕ್ಕೆ ಫ್ರಾಂಕ್‌ಫರ್ಟ್‌ನಿಂದ ವಿಮಾನ ಹೊರಡಲಿದ್ದು, ರಾತ್ರಿ 1ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದೆ. ಇಮಿಗ್ರೇಷನ್ ಕ್ಲಿಯರೇನ್ಸ್​ಗೆ ರಿಟರ್ನ್ ಟಿಕೆಟ್ ಕಡ್ಡಾಯ ಹಿನ್ನೆಲೆ 3 ಕ್ಕೆ ಟಿಕೆಟ್ ಬುಕ್ಕಿಂಗ್ ಆಗಿತ್ತು. ಆದ್ರೆ ಮೇ 03 ರಂದು ವಾಪಸ್ ಬರ್ತಾರಾ ಅಲ್ಲೆ ಉಳಿದುಕೊಳ್ತಾರಾ ಅನ್ನೋದೇ ಇನ್ನೂ ಅನುಮಾನವಾಗಿದೆ. ಒಂದು ವೇಳೆ ಬಂದ್ರೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್‌ ಬಂದಿಳಿಯಲಿದ್ದಾರೆ. ಹೀಗಾಗಿ ಮೇ 3 ರಂದು ಬುಕ್ ಆಗಿರುವ ಟಿಕೆಟ್ ಮೇಲೆ ಎಸ್ಐಟಿ ತಂಡ ಕಣ್ಣಿಟ್ಟಿದೆ. ಇನ್ನು ದೇವೇಗೌಡರೇ ಪ್ಲಾನ್ ಮಾಡಿ ಪ್ರಜ್ವಲ್​ನ್ನ ವಿದೇಶಕ್ಕೆ ಕಳಿಸಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವೀಸಾ ಕೊಡೋಱರು? ಪಾಸ್​ ಕೊಡೋಱರು? ಬಿಜೆಪಿಯವರೇ ತಾನೆ ಅಂತ ಪ್ರಶ್ನಿಸಿದ್ದಾರೆ.

ಹೆಚ್​.ಡಿ ದೇವೇಗೌಡರೇ ಪ್ಲಾನ್​ ಮಾಡಿ ಪ್ರಜ್ವಲ್​ ರೇವಣ್ಣ ಅವರನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ವೀಸಾ ಕೋಡೋರೋ ಯಾರು, ಪಾಸ್ ಕೋಡೋರು ಬಿಜೆಪಿಯವರೇ ತಾನೇ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಪ್ರಜ್ವಲ್ ವಿದೇಶಕ್ಕೆ ಹೋಗೋವರೆಗೂ ಕತ್ತೆ ಕಾಯುತ್ತಿದ್ರಾ?’

ಇನ್ನು, ಪ್ರಜ್ವಲ್ ವಿದೇಶಕ್ಕೆ ಕಳಿಸಿರುವ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೆಂಡವಾಗಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹೋಗೋವರೆಗೂ ಕತ್ತೆ ಕಾಯುತ್ತಿದ್ರಾ? ನಮ್ಮ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ ಪ್ರಜ್ವಲ್ ರೇವಣ್ಣ ಘಟನೆ ನಡೆದಿಲ್ಲ. ಇದು ನಡೆದಿರೋದ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಕಾಲದಲ್ಲಿ ಅಂತ ಗುಡುಗಿದ್ದಾರೆ.

ನಾವು ಇತ್ತೀಚೆಗೆ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೆ ಕಾಂಗ್ರೆಸ್‌ನವರು ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದರು. ಹುಡುಗನ ಅಪ್ಪನನ್ನು ಮಂತ್ರಿ ಮಾಡಿದ್ದರು ಎಂದು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರಜ್ವಲ್ ವಿದೇಶಕ್ಕೆ ಹೋಗೋವರೆಗೂ ಕತ್ತೆ ಕಾಯುತ್ತಿದ್ರಾ? ನಮ್ಮ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ ಪ್ರಜ್ವಲ್ ರೇವಣ್ಣ ಘಟನೆ ನಡೆದಿಲ್ಲ. ಇದು ನಡೆದಿರೋದ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಕಾಲದಲ್ಲಿ.
– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಒಟ್ಟಾರೆ ಅಶ್ಲೀಲ ವಿಡಿಯೋ ಹಗರಣ ಕೇಸ್ ಸದ್ಯ ಹಾಸನದ ಗಲ್ಲಿಗಲ್ಲಿಗಳಿಂದ ದಿಲ್ಲಿವರೆಗೂ ಸೌಂಡ್ ಮಾಡ್ತಿದೆ. ಸದ್ಯ ಎಲ್ಲರ ಚಿತ್ತ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಸ್ವದೇಶದಕ್ಕೆ ವಾಪಸ್ ಮರಳುವುದರ ಮೇಲೆ ನೆಟ್ಟಿದೆ. ಮೇ 3 ರಂದು ಅವರು ಬರ್ತಾರೋ ಅಥವಾ ಅಲ್ಲೇ ಉಳಿದುಕೊಳ್ತಾರಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇ 3ಕ್ಕೆ ವಾಪಸ್ ಬರ್ತಾರಾ ಪ್ರಜ್ವಲ್​ ರೇವಣ್ಣ; ವಿದೇಶಕ್ಕೆ ಹಾರಿದ್ದ ಸಂಸದನ ಬಗ್ಗೆ ಸುಳಿವು ಕೊಟ್ಟಿದ್ಯಾರು?

https://newsfirstlive.com/wp-content/uploads/2024/05/prajwal-revanna7.jpg

Load More