newsfirstkannada.com

ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

Share :

Published May 12, 2024 at 7:34am

Update May 12, 2024 at 7:35am

    8 ದಿನದಲ್ಲಿ ವಾಪಸ್ ಬರುತ್ತೇನೆಂದು ಚಾಲೆಂಜ್ ಮಾಡಿರುವ ವಕೀಲ ಸಾಹೇಬ್

    ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸ್

    ದೇವಸ್ಥಾನಕ್ಕೆ ಹೊರಟ ವಕೀಲ ಸಾಹೇಬರಿಗೆ ದೇವರ ಬದಲು ಪೊಲೀಸರ ದರ್ಶನ

ಪ್ರಜ್ವಲ್​ ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್​ ನೀಡಿದ್ದ ವಕೀಲ ದೇವರಾಜೇಗೌಡ ಪೊಲೀಸರ ಅತಿಥಿಯಾಗಿದ್ದಾರೆ. ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹಾಸನ ಪೊಲೀಸರು ಬಿಜೆಪಿ ಮುಖಂಡನ ಬಂಧಿಸಿದ್ದಾರೆ. ಇದೀಗ ದೇವರಾಜೇಗೌಡಗೆ ಜೈಲೂಟ ಫಿಕ್ಸ್‌ ಆಗಿದೆ. ಇನ್ನೂ 14 ದಿನ ಜೈಲುವಾಸವೇ ಫಿಕ್ಸ್ ಆಗಿದೆ.

ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಸ್ಫೋಟಿಸಿದ ಅದೊಂದು ಆಡಿಯೋ ಬಾಂಬ್​ ಇಡೀ ಪ್ರಕರಣಕ್ಕೆ ಬಿಗ್​ಟ್ವಿಸ್ಟ್​ ಕೊಟ್ಟಿತ್ತು. ಪ್ರಜ್ವಲ್​ ಪೆನ್​ಡ್ರೈವ್​ ವೈರಲ್​ ಹಿಂದೆ ಮಹಾನಾಯಕನ ಕೈವಾಡ ಇರುವ ಗುಮಾನಿಯು ಭಾರೀ ಸದ್ದು ಮಾಡ್ತಿದೆ. ಇದರ ನಡುವೆ ವಕೀಲ ದೇವರಾಜೇಗೌಡ ವಿರುದ್ಧ ಕೂಡ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಇದೀಗ ಆ ಕೇಸ್​ನಲ್ಲಿ ವಕೀಲ ದೇವರಾಜೇಗೌಡನನ್ನು ಪೊಲೀಸರು ಲಾಕ್​ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಬಿಜೆಪಿ ಮುಖಂಡನಿಗೆ ಜೈಲೂಟ ಫಿಕ್ಸ್ ಆಗಿದೆ.

ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ

ರಾಜ್ಯದಲ್ಲಿ ಪೆನ್​ಡ್ರೈವ್​ ಪ್ರಕರಣ ಟ್ವೀಸ್ಟ್​ ಮೇಲೆ ಟ್ವಿಸ್ಟ್​ ಪಡೀತಿದ್ರೆ ದೇವರಾಜೇಗೌಡ ತನ್ನ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಹೊರಟಿದ್ರು. ಆದ್ರೆ ದೇವಸ್ಥಾನಕ್ಕೆ ಹೊರಟ ವಕೀಲ ಸಾಹೇಬರಿಗೆ ದೇವರ ಬದಲು ಪೊಲೀಸರ ದರ್ಶನವಾಗಿತ್ತು. ಕಳೆದ ಏ.01 ರಂದು ವಕೀಲ ದೇವರಾಜೇಗೌಡ ವಿರುದ್ಧ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸ್​ ಒಂದು ದಾಖಾಲಾಗಿತ್ತು.. ಇದೇ ಕೇಸ್‌ನಲ್ಲಿ ಹಿರಿಯೂರು ಪೊಲೀಸರ ಬಲೆಗೆ ದೇವರಾಜೇಗೌಡ ಬಿದ್ದಿದ್ರು. ಬಳಿಕ ಹಿರಿಯೂರಿನಿಂದ ಹೊಳೆನರಸೀಪುರ ಠಾಣೆಗೆ ದೇವರಾಜೇಗೌಡರನ್ನ ಶಿಫ್ಟ್ ಮಾಡಲಾಗಿತ್ತು. ಇದೀಗ ಬಿಜೆಪಿ ಮುಖಂಡ ಜಿಲ್ಲಾ ಕಾರಾಗೃಹದಲ್ಲಿ ಕಂಬಿ ಎಣಿಸುವಂತಾಗಿದೆ.

ದೇವರಾಜೇಗೌಡಗೆ ಜೈಲುವಾಸ

  • ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ದೇವರಾಜೇಗೌಡನ ಬಂಧನ
  • ಬಂಧನದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದ ಪೊಲೀಸರು
  • 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೊಟ್ಟ ಹಾಸನ ಕೋರ್ಟ್‌
  • ಸೋಮವಾರದಂದು ಅರ್ಜಿ ಹಾಕಿ ಕಸ್ಟಡಿಗೆ ಪಡೆಯಲು ಸೂಚನೆ
  • ಓಪನ್ ಕೋರ್ಟ್‌ನಲ್ಲಿ ಕಸ್ಟಡಿಗೆ ಪಡೆಯಲು ಕೋರ್ಟ್‌ ಸೂಚನೆ
  • ಇನ್ನೂ 14 ದಿನ ಹಾಸನ ಕಾರಾಗೃಹದಲ್ಲಿ ದೇವರಾಜೇಗೌಡ ವಾಸ

ಹಾಸನ ಜಿಲ್ಲಾ ಕಾರಾಗೃಹಕ್ಕೆ ದೇವರಾಜೇಗೌಡ ಶಿಫ್ಟ್‌

ಇನ್ನೂ ನ್ಯಾಯಾಂಗ ಬಂಧನವಾಗ್ತಿದ್ದಂತೆ ದೇವರಾಜೇಗೌಡನನ್ನ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್‌ ಮಾಡಿದ್ರು. ಹೊಳೆನರಸೀಪುರ ನಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ ಸಮ್ಮುಖದಲ್ಲಿ ದೇವರಾಜೇಗೌಡನನ್ನ ಕಾರಾಗೃಹಕ್ಕೆ ಕಳುಹಿಸಲಾಯ್ತು. ಕಾರಾಗೃಹದೊಳಗೆ ಹೋಗುವ ಮುನ್ನ ಮಾತನಾಡಿದ ದೇವರಾಜೇಗೌಡ, ಇನ್ನು ಎಂಟು ದಿನದಲ್ಲಿ ಬರುತ್ತೇನೆ ತಲೆಕೆಡಿಸಿಕೊಳ್ಳಬೇಡಿ. ಸತ್ಯಕ್ಕೆ ಜಯವಿದೆ ಎನ್ನುತ್ತಾ ಜೈಲಿನೊಳಗೆ ಪದಾರ್ಪಣೆ ಮಾಡಿದ್ರು.

ಇದನ್ನೂ ಓದಿ: ದೇವರಾಜೇಗೌಡ; ಪೊಲೀಸ್ರ ಕೈಯಲ್ಲಿ ಲಾಕ್​ ಆಗಿದ್ಹೇಗೆ?

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸದ್ಯ ದೇವರಾಜೇಗೌಡ ಪೊಲೀಸರ ಅತಿಥಿಯಾಗಿದ್ದಾರೆ. ಇನ್ನೂ 14 ದಿನಗಳ ಕಾಲ ಜೈಲಿನಲ್ಲಿ ಕಂಬಿ ಎಣಿಸೋದು ಫಿಕ್ಸ್ ಆಗಿದೆ.. ಈ ಮೂಲಕ ಪೆನ್‌ಡ್ರೈವ್ ಪೀಕಲಾಟದಲ್ಲಿ ಆಡಿಯೋ ಅಲೆ ಎಬ್ಬಿಸಿದ್ದ ವಕೀಲ ಅದರ ಸುಳಿಯೊಳಗೆ ಸಿಲುಕಿ ಜೈಲುಪಾಲಾಗಿದ್ದು ನಿಜಕ್ಕೂ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

https://newsfirstlive.com/wp-content/uploads/2024/05/DEVERAJEGOWDA.jpg

Load More