newsfirstkannada.com

‘ಹೊಟ್ಟೆನೋವು ಅಂತ ಪ್ರಜ್ವಲ್ ರೇವಣ್ಣ ಬಾಯೇ ಬಿಟ್ಟಿಲ್ಲ’- ಬಿಗ್‌ ಶಾಕ್‌ ಕೊಟ್ಟ ಕೋರ್ಟ್; ಮಹತ್ವದ ಆದೇಶ

Share :

Published June 6, 2024 at 4:44pm

Update June 6, 2024 at 4:45pm

    ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ ಕೇಸ್​​ಗೆ ದಿನಕ್ಕೊಂದು ಟ್ವಿಸ್ಟ್​

    ಮೊಬೈಲ್ ಬಗ್ಗೆ ಮಾಹಿತಿ ಕೊಟ್ಟಿಲ್ಲ.. ಏನಾಯ್ತು ಅಂತ ಹೇಳಿಲ್ಲ ಎಂದ SIT

    ಎಸ್‌ಐಟಿ ಕಸ್ಟಡಿಯಲ್ಲಿರುವ ಹೆಚ್​ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ

ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಹಾಗೂ ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಅತ್ಯಾಚಾರದ ಆರೋಪದಡಿ ಎಸ್‌ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಿತ್ತು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ: ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ?

ಅತ್ಯಾಚಾರ ಆರೋಪಿ ಸ್ಥಾನದಲ್ಲಿರೋ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಎಸ್ಐಟಿ ಪರ ವಕೀಲ ಅಶೋಕ್ ನಾಯ್ಕ್​​ ಅವರು ಆರೋಪಿಯ ಕಸ್ಟಡಿ ವಿಸ್ತರಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಇನ್ನೂ 4 ದಿನಗಳ ಕಾಲ ಪ್ರಜ್ವಲ್​ ರೇವಣ್ಣ ಅವರನ್ನು ಎಸ್​​ಐಟಿ ಕಸ್ಟಡಿಗೆ ನೀಡಲಾಗಿದೆ.

ಎಸ್ಐಟಿ ಪರವಾಗಿ ಎಸ್ಪಿಪಿ ಅಶೋಕ್ ನಾಯ್ಕ್ ಅವರು ಆರೋಪಿ ಪ್ರಜ್ವಲ್ ರೇವಣ್ಣರನ್ನು ಕೋರ್ಟ್​ನಲ್ಲಿ ಹಾಜರು ಪಡಿಸಿದ್ದರು. ಈ ವೇಳೆ ಕಸ್ಟಡಿಯಲ್ಲಿ ಸಮಸ್ಸೆ ಆಯ್ತಾ ಎಂದು ಪ್ರಜ್ವಲ್​ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ಆಗ ಇಲ್ಲ ಎಂದು ಪ್ರಜ್ವಲ್ ರೇವಣ್ಣ ಉತ್ತರ ನೀಡಿದ್ದಾರೆ. ಬಳಿಕ ಆರೋಪಿ ತನಿಖೆಗೆ ಸಹಕಾರ ನೀಡಿಲ್ಲ. ಆರೋಪಿ ಮೊಬೈಲ್ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಏನಾಯ್ತು ಅಂತ ಹೇಳಿಲ್ಲ. ಆರೋಪಿಗೆ ಫಂಡಿಂಗ್ ಆಗಿರುವ ಬಗ್ಗೆ ಹೇಳಿಲ್ಲ. ಆದರ ಬಗ್ಗೆ ಮಾಹಿತಿ ಪಡೆಯಬೇಕಿದೆ. ಆರೋಪಿ ಯಾವ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ಸಂತ್ರಸ್ತೆ ಗೊತ್ತಿಲ್ಲ. ನಾನು ನೋಡಿಲ್ಲ ಅಂತಿದ್ದಾರೆ. ಇತರ ಆರೋಪಿಗಳ ಮುಂದೆ ಮುಖಾಮುಖಿ ಪ್ರಶ್ನಿಸಬೇಕಿದೆ. 7 ದಿನ ಕಷ್ಟಡಿ ಮುಗಿದ್ರೂ ಆತ ಸಹಕಾರ ಹೊಟ್ಟೆನೋವು ಅಂತಾ ಅಸಹಕಾರ ತೋರುತ್ತಿದ್ದಾರೆ. ಹೀಗಾಗಿ ಮತ್ತೆ ಕಸ್ಟಡಿಗೆ ಬೇಕು ಅಂತಾ ಎಸ್ಐಟಿ ಕೋರ್ಟ್​ಗೆ ಮನವಿ ಮಾಡಿಕೊಂಡಿದೆ. ಆಯ್ತು ಈಗ ಎಷ್ಟು ದಿನ ಬೇಕು ಹೇಳಿ ಎಂದು ಜಡ್ಜ್ ಕೇಳಿದ್ದಾರೆ. ಜೂನ್​​ 10ರವರೆಗೆ ಕಸ್ಟಡಿಗೆ ನೀಡಿ ಅಂತ ಎಸ್ಐಟಿ ಮನವಿ ಮಾಡಿಕೊಂಡಿದೆ. ಹೀಗಾಗಿ 4 ದಿನಗಳ ಕಾಲ ಪ್ರಜ್ವಲ್​ ರೇವಣ್ಣ ಅವರು ಎಸ್​​ಐಟಿ ಕಸ್ಟಡಿಗೆ ಅಂತ ಕೋರ್ಟ್​ ಆದೇಶ ಹೊರಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೊಟ್ಟೆನೋವು ಅಂತ ಪ್ರಜ್ವಲ್ ರೇವಣ್ಣ ಬಾಯೇ ಬಿಟ್ಟಿಲ್ಲ’- ಬಿಗ್‌ ಶಾಕ್‌ ಕೊಟ್ಟ ಕೋರ್ಟ್; ಮಹತ್ವದ ಆದೇಶ

https://newsfirstlive.com/wp-content/uploads/2024/05/PRAJWAL_REVANNA_2.jpg

Load More