Advertisment

ರೇವಣ್ಣ ಅರೆಸ್ಟ್.. ಭಾರತದತ್ತ ಪ್ರಜ್ವಲ್​ ಮುಖ.. ಇಂದು​ ಬೆಂಗಳೂರಿಗೆ ​ರಿಟರ್ನ್​?

author-image
AS Harshith
Updated On
ಅಶ್ಲೀಲ ವಿಡಿಯೋ ಕೇಸ್​ನಲ್ಲಿ SIT ಸ್ಮಾರ್ಟ್​ ವರ್ಕ್​.. ಆ 4 ವಿಚಾರದ ಮೇಲೆಯೇ ಹೆಚ್ಚು ಫೋಕಸ್​..!
Advertisment
  • ಅಪ್ಪನ ಬಂಧನದ ಬಳಿಕ ಭಾರತಕ್ಕೆ ಬರ್ತಾರ ಪ್ರಜ್ವಲ್ ರೇವಣ್ಣ?
  • ಏರ್​ಪೋರ್ಟ್​ನಿಂದ ನೇರವಾಗಿ ಎಸ್ಐಟಿ ಮುಂದೆ ಪ್ರಜ್ವಲ್
  • ಸಿಐಡಿ ಪಂಜರದಲ್ಲಿ ಸಿಲುಕಿರುವ ಮಾಜಿ ಸಚಿವ ರೇವಣ್ಣ

ಇಂದು ಅಥವಾ ನಾಳೆ ಪ್ರಜ್ವಲ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮತ್ತೊಂದು ಕಡೆ ಈ ಅಶ್ಲೀಲ ವಿಡಿಯೋ ಕೇಸ್​ ಸಂಬಂಧ ಮತ್ತಷ್ಟು ಪ್ರಕರಣ ದಾಖಲಾಗೋ ಭಯ ರೇವಣ್ಣರನ್ನ ನಿದ್ದೆಗೆಡಿಸಿದೆ. ಪ್ರಜ್ವಲ್​ ಬಂಧನವಾದ್ರೆ ಮುಂದಿನ ತನಿಖೆ ಹಾದಿ ಹೇಗೆ? ಸೆರೆವಾಸದಲ್ಲಿರೋ ರೇವಣ್ಣನ ಮುಂದಿನ ನಡೆ ಏನು? ಇನ್ನಷ್ಟು ಕೇಸ್​​ಗಳು ದಾಖಲಾದ್ರೆ ಭವಿಷ್ಯವೇ ಮಂಕಾಗುವ ಆತಂಕವೂ ಕಾಡ್ತಿದೆ.

Advertisment

ಒಂದ್ಕಡೆ ರೇವಣ್ಣ ಬಂಧನವಾಗಿ ದೊಡ್ಡಗೌಡರ ಫ್ಯಾಮಿಲಿ ಮೌನಕ್ಕೆ ಜಾರಿದೆ. ಮತ್ತೊಂದು ಕಡೆ ಪ್ರಜ್ವಲ್​ಗಾಗಿ ಎಸ್​ಐಟಿ ಟೀಂ ಹುಡುಕಾಡ್ತಿದೆ. ಸಾಲು ಸಾಲು ಆರೋಪಗಳನ್ನು ಹೊತ್ತಿರೋ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಹೆಗಲೇರುತ್ತಿದ್ದು ಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಣಮಿಸಿದೆ.

publive-image

ಇಂದು ಅಥವಾ ನಾಳೆ ಪ್ರಜ್ವಲ್​ ಬೆಂಗಳೂರಿಗೆ ಬರೋ ಸಾಧ್ಯತೆ

ಮಾಜಿ ಸಚಿವ ಹೆಚ್​.ಡಿ. ರೇವಣ್ಣ, ಎಸ್​​ಐಟಿ ಪೊಲೀಸರಿಂದ ಬಂಧನಕ್ಕೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪ್ಪನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಅತ್ತ ವಿದೇಶದಲ್ಲಿ ಠಿಕಾಣಿ ಹೂಡಿರೋ ಪ್ರಜ್ವಲ್ ರೇವಣ್ಣ, ಭಾರತದತ್ತ ಮುಖ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ವಿದೇಶದಿಂದ ಇಂದು ಅಥವಾ ನಾಳೆ ಪ್ರಜ್ವಲ್ ರೇವಣ್ಣ ನೇರವಾಗಿ ಬೆಂಗಳೂರಿಗೆ ಬಂದಿಳಿಯೋ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಲ್ಲಿ 3 ವಾರಗಳ ಕಾಲ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

Advertisment

publive-image

ಪ್ರಜ್ವಲ್ ಹಾಜರಾಗೋ ಬಗ್ಗೆ ಸಿ.ಎಸ್​ ಪುಟ್ಟರಾಜು ಮಾಹಿತಿ

ವಿದೇಶದಿಂದ ಇಂದು ಅಥವಾ ನಾಳೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರೋ ಪ್ರಜ್ವಲ್​ಗೆ ಇರೋದು ಒಂದೇ ದಾರಿ. ಅದು ಶರಣಾಗತಿ. ಹೀಗಾಗಿ ಬೆಂಗಳೂರಿಗೆ ಆಗಮಿಸ್ತಿದ್ದಂತೆ ನೇರವಾಗಿ ಎಸ್​ಐಟಿ ಅಧಿಕಾರಿಗಳ ಮುಂದೆ ಪ್ರಜ್ವಲ್​​​ ಹಾಜರಾಗಲಿದ್ದಾಂತೆ. ಈ ಬಗ್ಗೆ ಮಾಹಿತಿ ನೀಡಿರೋ ಮಾಜಿ ಸಚಿವ ಸಿ.ಎಸ್​ ಪುಟ್ಟರಾಜು, ಈ ಬಗ್ಗೆ ಸುಳಿವು ನೀಡಿದ್ದಾರೆ.. ಪ್ರಜ್ವಲ್​ ಶರಣಾಗ್ತಾರೆ ಅಂತ ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್​ ಹಾಕಿಸಿಕೊಂಡೋರು ಐಸ್​ಕ್ರೀಂ, ಕೋಲ್ಡ್​ ವಾಟರ್​ ಸೇವಿಸಿದ್ರೆ ರಕ್ತ ಹೆಪ್ಪುಗಟ್ಟುತ್ತಾ? ನಿಜನಾ?

publive-image

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ದಾಖಲಾಗುತ್ತಾ ಮತ್ತಷ್ಟು ಕೇಸ್​?

ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿರೋ ಹಾಸನ ಅಶ್ಲೀಲ ವಿಡಿಯೋಗಳ ಹರಿದಾಟ ಪ್ರಕರಣ ಸಂಬಂಧ ಎರಡು ಕೇಸ್​ ದಾಖಲಾಗಿದೆ. ಸಂತ್ರಸ್ತೆಯಿಂದಲೇ ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಕೇಸ್​ ದಾಖಲಾದ್ರೆ, ಸಂತ್ರಸ್ತೆ ಕಿಡ್ನ್ಯಾಪ್ ಮಾಡಿರೋ ಆರೋಪದಡಿ ಮೈಸೂರಿನ ಕೆ.ಆರ್​ ನಗರದಲ್ಲಿ ಎರಡನೇ ಕೇಸ್​ ದಾಖಲಾಗಿ ರೇವಣ್ಣ ಬಂಧನವೂ ಆಗಿದೆ. ಹೀಗಾಗಿ ಅಶ್ಲೀಲ ವಿಡಿಯೋ ಹರಿದಾಟ ಪ್ರಕರಣ ಸಂಬಂಧ ಮತ್ತಷ್ಟು ಕೇಸ್​ ದಾಖಲಾಗೋ ಸಾಧ್ಯತೆ ಇದೆ. ಸರ್ಕಾರ ಕಠಿಣ ನಿರ್ಧಾರಗಳ ಕಾರಣಕ್ಕೆ ಇನ್ನಷ್ಟು ಸಂತ್ರಸ್ತೆಯರು ಪ್ರಕರಣ ದಾಖಲಿಸಲು ಮುಂದಾಗಬಹುದು. ಒಂದು ವೇಳೆ ಈ ಸಂಬಂಧ ಇನ್ಯಾವುದೇ ಕೇಸ್​ ದಾಖಲಾದ್ರು ರೇವಣ್ಣ ಹಾಗೂ ಪ್ರಜ್ವಲ್​ ರೇವಣ್ಣಗೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ.

Advertisment

ಒಟ್ನಲ್ಲಿ ಕವಲು ದಾರಿಯಿಂದ ಹೆದ್ದಾರಿ ತಲುಪಿರೋ ಅಶ್ಲೀಲ ವಿಡಿಯೋ ಪ್ರಕರಣ ಇನ್ಯಾವ ಹಂತಕ್ಕೆ ಹೋಗಲಿದೆ ಅಂತ ಕಾದು ನೋಡಬೇಕಿದೆ. ವಿದೇಶದಲ್ಲಿರೋ ಪ್ರಜ್ವಲ್​ ಭಾರತಕ್ಕೆ ಮರಳಿ ಎಸ್​ಐಟಿ ಮುಂದೆ ಹಾಜರಾದ್ರೆ ಮುಂದಿನ ಬೆಳವಣಿಗಳೇನು ಅನ್ನೋದೆ ಸದ್ಯದ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment