newsfirstkannada.com

ಟಾಯ್ಲೆಟ್​ ಸರಿಯಿಲ್ಲ ಎಂದ ಪ್ರಜ್ವಲ್​ ರೇವಣ್ಣ.. ಅದೇ ರೂಮ್​ ಕೊಟ್ಟು ಸೇಡು ತೀರಿಸಿಕೊಳ್ತಾ ಎಸ್​ಐಟಿ?

Share :

Published June 2, 2024 at 6:21am

    ಸಿರಿ ಸಂಪತ್ತು ಉಂಡ ಗೌಡರ ಕುಡಿಗೆ ಸಂಕಷ್ಟದ ಸರಮಾಲೆ

    ಎಸ್​ಐಟಿ ಕಸ್ಟಡಿ ಸಂಕಟದಿಂದ ನರಳುವಂತೆ ಮಾಡುತ್ತಿದೆ

    ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್​ಗೆ ಕಾಡ್ತಿದೆಯಾ?

ಚಿಂತೆ ಅನ್ನೋದು ಯಾರಿಗೆ ಇರಲ್ಲ ಹೇಳಿ.. ಸಂತೆಯಲ್ಲಿ ಕೂತವನಿಗೂ ಚಿಂತೆ ಸಹಜ. ಎಸ್​​​ಐಟಿ ಅಧೀನದಲ್ಲಿರುವ ಪ್ರಜ್ವಲ್​ಗೆ ಕಾಡದೇ ಇರುತ್ತಾ? ಆದ್ರೆ, ಪ್ರಜ್ವಲ್​​​ಗೆ ಕಾಡ್ತಿರೋದು ಒಂದೇ ಒಂದು ಚಿಂತೆಯಂತೆ. ಪಾಪಪ್ರಜ್ಞೆಗಿಂತ ಟಾಯ್ಲೆಟ್​​ನದ್ದೆ ದೊಡ್ಡ ಚಿಂತೆನಾ ಅಂತ ಎಸ್​​​ಐಟಿ ಪರಾಮರ್ಶೆಗೆ ನಿಂತಿದೆ.

ಸುಪ್ಪತ್ತಿಗೆಯಲ್ಲಿ ಸಿರಿ ಸಂಪತ್ತು ಉಂಡ ಪ್ರಜ್ವಲ್​​ಗೆ ಸಂಕಷ್ಟದ ಸರಮಾಲೆಯೇ ಸುತ್ಕೊಂಡಿದೆ. ತಿಂಗಳುಗಳ ಕಾಲ ರೆಕ್ಕೆ ಬಿಚ್ಚಿ ಹಾಡಿದ ಈ ಹಕ್ಕಿ, ಈಗ ಎಸ್​​ಐಟಿಯ ಪಂಜರದ ಬಂಧಿ. ಜರ್ಮನಿಯಲ್ಲಿ ಜಗಮಗಿಸಿದ ರೇವಣ್ಣನ ಮಗ ಮೊನ್ನೆ ರಾತ್ರಿ ಬೆಂಗಳೂರಿನಲ್ಲಿ ಸೆರೆ ಸಿಕ್ಕು ಸಿರುಂಡೆ ಆಗಿದ್ದಾರೆ.

ಎಸ್​​​ಐಟಿ ಕೊಟ್ಟ ಹಾಸಿಗೆಯಲ್ಲಿ ಸಂಕಟದ ನಿದ್ರೆ!

ಈ ಬಂಧನಕ್ಕೆ ಕಾರಣ ಏನು ಅನ್ನೋದು ಬಲ್ಲದವರೇ ಇಲ್ಲ ಬಿಡಿ. ಸಿಕ್ಕಲ್ಲೆಲ್ಲ ತನ್ನ ಕಬಂಧಬಾಹು ಚಾಚಿದ ಈ ಪ್ರಜ್ವಲ್​​, ಅಸಂಖ್ಯಾತ ಹೆಣ್ಣುಗಳ ಆರ್ಥನಾದಕ್ಕೆ ಕಾರಣಿಕರ್ತ ಅನ್ನೋ ಆರೋಪ ಹೊತ್ತಿದ್ದಾರೆ. ಆ ಕಂಟಕವೇ ಈಗ ಎಸ್​ಐಟಿ ಕಸ್ಟಡಿಯಲ್ಲಿ ಸಂಕಟದಿಂದ ನರಳುವಂತೆ ಮಾಡ್ತಿದೆ. ತಳ್ಬಂದಿಯಲ್ಲಿ ಸುಖಾಸೀನ ಅನುಭವಿಸಿದ್ದ ರೇವಣ್ಣ ಪುತ್ರ, ಅಕ್ರಮ ನಂಟುಗಳೇ ಒಂಟಿ ಆಗಿದೆ. ಜಂಟಿ ಯಾರು ಇಲ್ಲದೇ ಗಂಟಲಿನ ಪಸೆ ಆರುವಂತೆ ಮಾಡಿದೆ.

ಲಕ್ಷುರಿಯಸ್​​ ಲೈಫ್​ ಲೀಡ್​​ ಮಾಡ್ತಿದ್ದ ಪ್ರಜ್ವಲ್​​, ಪಂಜರದ ಪಕ್ಷಿಯಾದ ಬಳಿಕ ಎಸ್​ಐಟಿ ಕಸ್ಟಡಿಯಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ. ಎಸ್​​​ಐಟಿ ಕಸ್ಟಡಿಯಲ್ಲಿ ಇರಲಾಗದೇ ವಿಲವಿಲ ಅಂತ ಒದ್ದಾಡಿದ್ದಾರೆ. ಇದಕ್ಕೆ ಕಾರಣ ಎಸ್​ಐಟಿ ಕಚೇರಿಯಲ್ಲಿ ಶುಚಿತ್ವದ ಕೊರತೆ. ಇದೇ ವಿಚಾರವನ್ನ ಸ್ವತಃ ಜಡ್ಜ್​​ ಮುಂದೆನೇ ಅಳಲು ತೋಡ್ಕೊಂಡಿದ್ರು.

ಜಡ್ಜ್​​​ : ನಿಮ್ಮ ಹೆಸರೇನು?
ಪ್ರಜ್ವಲ್ : ಪ್ರಜ್ವಲ್ ರೇವಣ್ಣ
ಜಡ್ಜ್​​​ : ಎಲ್ಲಿ ನಿಮ್ಮನ್ನ ವಶಕ್ಕೆ ಪಡೆಯಲಾಯಿತು?
ಪ್ರಜ್ವಲ್​​ : ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ
ಜಡ್ಜ್​​​ : ನಿಮ್ಮ ಮನೆಗೆ ತಿಳಿಸಿದ್ದಾರಾ?
ಪ್ರಜ್ವಲ್​​​ : ನಮ್ಮ ತಂದೆಗೆ ಹೇಳಲು ಹೇಳಿದೆ
ಜಡ್ಜ್​​ : ಏನಾದ್ರೂ ಟಾರ್ಚರ್ ಆಯ್ತಾ?
ಪ್ರಜ್ವಲ್​​ : ಇಲ್ಲ ಟಾರ್ಚರ್ ಏನು ಆಗಿಲ್ಲ
ಜಡ್ಜ್​​ : ಏನಾದ್ರೂ ಹೇಳಕ್ಕಿದ್ಯಾ?
ಪ್ರಜ್ವಲ್​​​ : ಎಸ್ಐಟಿ ಶೌಚಾಲಯದ ತುಂಬಾ ವಾಸನೆ

ಹೀಗೆ ನಿನ್ನೆ ಶೌಚಾಲಯ ಸಮಸ್ಯೆ ಹೇಳ್ಕೊಂಡಿದ್ದ ಪ್ರಜ್ವಲ್​​​ಗೂ ಸಾಮಾನ್ಯ ಆರೋಪಿಗೆ ನೀಡುವ ಕನಿಷ್ಟ ಸೌಲಭ್ಯ ಸಿಕ್ಕಿದೆ.. ಹಾಗಾದ್ರೆ, ಇಲ್ಲಿ ಇರೋದು ಹೇಗೆ ಅನ್ನೋ ಚಿಂತೆ ಪ್ರಜ್ವಲ್​ಗೆ ಇನ್ನಿಲ್ಲದಂತೆ ಕಾಡ್ತಿದೆ.. ಸೌಲಭ್ಯ ಕೊಡ್ತೀವಿ, ಆದ್ರೆ, ಕೆಲ ಅನುಮತಿ ಬೇಕಾಗುತ್ತೆ ಅನ್ನೋದು ಎಸ್​​ಐಟಿ ಹೇಳ್ತಿದೆ.

‘ನನಗೆ ಇಲ್ಲಿ ಇರೋಕ್ಕಾಗ್ತಿಲ್ಲ!’

  • ಕಸ್ಟಡಿಯಲ್ಲಿ ರೂಮ್​ ಕ್ಲೀನ್ ಇಲ್ಲ, ಸ್ಮೆಲ್ ಬರ್ತಿದೆ ಎಂದ ಪ್ರಜ್ವಲ್​
  • ಹೆಚ್ಚುವರಿ ಸೌಲಭ್ಯ ಬೇಕು ಅಂದ್ರೆ ಕೋರ್ಟ್​ನ ಅನುಮತಿ ಬೇಕು
  • ಮೇಲಾಧಿಕಾರಿಗಳ ಸೂಚನೆ ನೀಡಬೇಕು ಎಂದಿರುವ ಎಸ್​​ಐಟಿ
  • ಹಾಗಾಗಿ ಸಾಮಾನ್ಯ ಸೌಲಭ್ಯದಲ್ಲೇ ಕಸ್ಟಡಿ ವಾಸ ಮುಗಿಸಬೇಕಿದೆ
  • ಪ್ರಜ್ವಲ್​ಗೆ ಯಾವುದೇ ರೂಮ್​ ಚೇಂಜ್​​ ಮಾಡದ ಅಧಿಕಾರಿಗಳು
  • ಅದೇ ಕೊಠಡಿಯಲ್ಲೇ ರಾತ್ರಿ ಮಲಗುವಂತೆ ಮಾಡಿದ ಎಸ್​​ಐಟಿ
  • ಪ್ರಜ್ವಲ್​​​​ ದೂರಿದ್ದ ಅದೇ ಕೊಠಡಿ ಟಾಯ್ಲೆಟ್​​ ಬಳಕೆಗೆ ಸೂಚನೆ

ಎಸ್​ಐಟಿ ಅಧಿಕಾರಿಗಳ ನಡೆಯಿಂದ ಕಂಗೆಟ್ಟ ಪ್ರಜ್ವಲ್​ಗೆ ಗಂಟಲು ಬಿರಿಯುವಂತೆ ಮಾಡಿದೆ. ಇದು ಕೇವಲ ಒಂದು ದಿನದ ಮಾತಲ್ಲ, ಇನ್ನಷ್ಟು ದಿನ ಇಲ್ಲೇ ಕಾಲ ಕಳೆಯಬೇಕಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಯ್ಲೆಟ್​ ಸರಿಯಿಲ್ಲ ಎಂದ ಪ್ರಜ್ವಲ್​ ರೇವಣ್ಣ.. ಅದೇ ರೂಮ್​ ಕೊಟ್ಟು ಸೇಡು ತೀರಿಸಿಕೊಳ್ತಾ ಎಸ್​ಐಟಿ?

https://newsfirstlive.com/wp-content/uploads/2024/06/PRAJWAL.jpg

Load More