/newsfirstlive-kannada/media/post_attachments/wp-content/uploads/2024/05/prajwal-revanna-4.jpg)
ಬೆಂಗಳೂರು: ಪ್ರಜ್ವಲ್​ ರೇವಣ್ಣ ಎಸ್ಐಟಿ ತನಿಖೆಗೆ ಸ್ಪಂದಿಸುತ್ತಾರೆ ಎಂದು ಅವರ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ. ಹೊಳೆನರಸೀಪುರ ಟೌನ್ ಠಾಣೆ ಪ್ರಕರಣದಲ್ಲಿ ಬಂಧನವಾಗಿದೆ ಎಂದಿದ್ದಾರೆ.
ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೆನ್ ಬೇಡ. ನಾವು ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತೆ. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕ್ತೀವಿ ಎಂದು ವಕೀಲ ಅರುಣ್ ಹೇಳಿದ್ದಾರೆ.
ಪ್ರಜ್ವಲ್​ ರೇವಣ್ಣ ಅವರನ್ನು ಭೇಟಿ ಮಾಡಿ ಬಂದು ಮಾತನಾಡಿದ ವಕೀಲ ಅರುಣ್​, ರಾತ್ರಿ ಬಂದಿದ್ದೀನಿ, ಇಲ್ಲಿದ್ದೀನಿ. ತನಿಖೆಗೆ ಸಹಕಾರ ಕೊಟ್ಟಿದ್ದೀನಿ. ನಾನು ಸ್ವಯಂ ಪ್ರೇರಿತವಾಗಿಯೇ ಬಂದಿದ್ದೀನಿ ಎಂದು ಪ್ರಜ್ವಲ್​ ರೇವಣ್ಣ ಹೇಳಿದ್ದಾರೆ ಎಂದು ಅರುಣ್​ ಮಾಧ್ಯಮದ ಮುಂದೆ ಹೇಳಿದ್ದಾರೆ.
ಬೇಲ್ ಅಪ್ಲಿಕೇಶನ್ ಪೆಂಢಿಂಗ್ ಇದೆ. ಅದರ ಬಗ್ಗೆ ಮಾತಾಡಲ್ಲ. ತನಿಖೆಗೆ ಸಹಕಾರ ಕೊಡ್ತಾರೆ ಎಂದು ಪ್ರಜ್ವಲ್ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us