newsfirstkannada.com

ಪತ್ರ ಬರೆದು ಪ್ರಜ್ವಲ್ ರೇವಣ್ಣಗೆ ವಾರ್ನಿಂಗ್ ಕೊಟ್ಟ ದೇವೇಗೌಡ.. ಸಿಎಂ ಸಿದ್ದರಾಮಯ್ಯ ಲೇವಡಿ.. ಹೇಳಿದ್ದೇನು?

Share :

Published May 24, 2024 at 6:28am

    ಮೊಮ್ಮಗನಿಗೆ ಪತ್ರದ ಸಂದೇಶದ ಮೂಲಕ ವಾಪಸ್ ಬರುವಂತೆ ಎಚ್ಚರಿಕೆ

    ಮಾಜಿ PM ದೇವೇಗೌಡರು ಮೊಮ್ಮಗನಿಗೆ ಬರೆದಿರುವ ಪತ್ರದಲ್ಲಿ ಏನಿದೆ?

    ಬರದಿದ್ರೆ ಕುಟುಂಬದಿಂದ ಹೊರ ಹಾಕೋ ವಾರ್ನಿಂಗ್ ನೀಡಿದ HDD

ಅಶ್ಲೀಲ ವಿಡಿಯೋ ವೈರಲ್ ಬಳಿಕ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು 28 ದಿನಗಳು ಉರುಳಿವೆ. ಇದೇ ಟೈಂನಲ್ಲೇ ಅವರ ತಂದೆ ರೇವಣ್ಣ ಕೂಡ ಜೈಲಿಗೂ ಹೋಗಿ ಬರಬೇಕಾಯ್ತು. ಇಷ್ಟಾದ್ರೂ ಪ್ರಜ್ವಲ್ ವಾಪಸ್ ಬರಲೇ ಇಲ್ಲ. ಮೊನ್ನೆ ತಾನೇ ಪ್ರಜ್ವಲ್ ಎಲ್ಲಿದ್ದೀಯಾ, ಎಲ್ಲಿದ್ದರೂ ಬಂದುಬಿಡು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಕರೆ ಕೊಟ್ಟಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರು ಕೂಡ ಮೊಮ್ಮಗನಿಗೆ ಪತ್ರದ ಸಂದೇಶ ಮೂಲಕ ವಾಪಸ್ ಬರುವಂತೆ ಎಚ್ಚರಿಕೆ ರವಾನಿಸಿದ್ದಾರೆ. ಬರದೇ ಇದ್ರೆ ಕುಟುಂಬದಿಂದ್ಲೇ ಹೊರ ಹಾಕೋ ವಾರ್ನಿಂಗ್ ನೀಡಿದ್ದಾರೆ.

ಎಲ್ಲೇ ಇದ್ರೂ ಬಂದು ವಿಚಾರಣೆಗೆ ಹಾಜರಾಗುವಂತೆ ಆದೇಶ

ಪ್ರಜ್ವಲ್ ಎಲ್ಲಿದ್ದರೂ ಕೂಡಲೇ ದೇಶಕ್ಕೆ ವಾಪಸ್ ಬಂದು ಬಿಡು. ಎಸ್​​ಐಟಿ ತನಿಖೆಗೆ ಹಾಜರಾಗಿ ಬಿಡು. ಇದು ಅಶ್ಲೀಲ ಕಳಂಕ ಹೊತ್ತು ಕಣ್ಮರೆಯಾಗಿರುವ ಮೊಮ್ಮಗನ ಕುರಿತು ಜೆಡಿಎಸ್​​​ ಸುಪ್ರಿಮೋ, ಮಾಜಿ ಪ್ರಧಾನಿ ದೇವೇಗೌಡರು ಪತ್ರದ ಮೂಲಕ ಕಳುಹಿಸಿರುವ ಖಡಕ್ ಮೆಸೇಜ್. ತಪ್ಪು ಯಾರೇ ಮಾಡಿದ್ರೂ ತಪ್ಪೇ. ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿರುವ ಮೊಮ್ಮಗನ ವಿದೇಶಿಯಾತ್ರೆ ದೇವೇಗೌಡರನ್ನು ಕಣ್ಣು ಕೆಂಪಗಾಗಿಸಿದೆ. 6 ದಶಕಗಳಿಂದ ಜೊತೆಗಿರುವ ಜನರ ವಿಶ್ವಾಸ ಮರಳಿ ಪಡೆಯಲು ಮೊಮ್ಮಗ ಕಾನೂನಿಗೆ ತಲೆ ಬಾಗಬೇಕಿದೆ.  ಮೊಮ್ಮಗನಿಗೆ ಬರೆದಿರುವ ಪತ್ರವನ್ನು ದೇವೇಗೌಡರು ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್​ ಮಾಡಿದ್ದಾರೆ.

ಪ್ರಜ್ವಲ್ ಎಲ್ಲಿದ್ದರೂ ಬಂದುಬಿಡು!

ಪ್ರಜ್ವಲ್ ಎಲ್ಲಿದ್ದರೂ ಬಂದು, ಪೊಲೀಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೇ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ, ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದೂ ಕೂಡ ತಿಳಿಯಬೇಕು, ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನು ಎದುರಿಸಬೇಕಾಗುತ್ತದೆ, ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದ್ರೂ ಗೌರವವಿದ್ದಲ್ಲಿ ಅವನು ಕೂಡಲೇ ಹಿಂತಿರುಗಿ ಬರಬೇಕು.

ಇದನ್ನೂ ಓದಿ: ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಪ್ರಜ್ವಲ್ ಕಳುಹಿಸಿದ್ದೇ ಅವರು ಎಂದ ಸಿಎಂ ಸಿದ್ದರಾಮಯ್ಯ

ಇನ್ನು ಪ್ರಜ್ವಲ್ ವಾಪಸ್ ಬಂದುಬಿಡು ಅಂತ ಮಾಜಿ ಪ್ರಧಾನಿ ದೇವೇಗೌಡರ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ನನ್ನ ಪ್ರಕಾರ ಪ್ರಜ್ವಲ್​​ನನ್ನು ವಿದೇಶಕ್ಕೆ ಕಳುಹಿಸಿದ್ದೇ ದೇವೇಗೌಡರು ಅಲ್ವಾ. ಈಗ ಪತ್ರ ಬರೆದಿರೋದು ಸಾರ್ವಜನಿಕರಿಗೆ ಪಬ್ಲಿಕ್ ಕಂಜಮ್ಶನ್​ಗೆ.

ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜ್ವಲ್ ರೇವಣ್ಣಗೆ ದೇವೇಗೌಡರು ಭಾವನಾತ್ಮಕವಾಗಿ ಹಾಗೂ ಎಚ್ಚರಿಕೆ ನೀಡುವ ಮೂಲಕ ಪತ್ರ ಕಳುಹಿಸಿದ್ದಾರೆ. ಈ ಪತ್ರ ನೋಡಿದ ಮೇಲಾದ್ರೂ ದೇವೇಗೌಡರು ಹಾಗೂ ಕುಟುಂಬದ ಗೌರವಕ್ಕೆ ಬೆಲೆ ಕೊಟ್ಟು ಪ್ರಜ್ವಲ್ ವಾಪಸ್ ಬಂದು ಎಸ್​​ಐಟಿಗೆ ಶರಣಾಗ್ತಾರಾ ಅನ್ನೋದು ಕುತೂಹಲ ಉಳಿದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ರ ಬರೆದು ಪ್ರಜ್ವಲ್ ರೇವಣ್ಣಗೆ ವಾರ್ನಿಂಗ್ ಕೊಟ್ಟ ದೇವೇಗೌಡ.. ಸಿಎಂ ಸಿದ್ದರಾಮಯ್ಯ ಲೇವಡಿ.. ಹೇಳಿದ್ದೇನು?

https://newsfirstlive.com/wp-content/uploads/2024/03/Siddaramaiah-Hd-Devegowda.jpg

Load More