ಕೇಂದ್ರ ಕಾರಾಗೃಹದಲ್ಲಿರುವ ಕುಖ್ಯಾತ ಭೂಗತ ಪಾತಕಿ ಈತ!
ಇವನಿಗೆ ಛೋಟಾ ರಾಜನ್ ಮತ್ತು ದಾವೂದ್ ಜೊತೆ ನೆಟ್‌ವರ್ಕ್!
ಡಾನ್ ಅನ್ನೇ ಮಠಗಳಿಗೆ ಪೀಠಾಧಿಪತಿಯನ್ನಾಗಿ ನೇಮಿಸಿದ್ದು ಯಾಕೆ?
ಭೂಗತ ಪಾತಕಿಯೊಬ್ಬನಿಗೆ ಸಂತ ದೀಕ್ಷೆ ನೀಡಲಾಗಿದೆ. ಅಷ್ಟೇ ಅಲ್ಲ ಅವನಿಗೆ ಮಠಗಳಿಗೆ ಪೀಠಾಧಿಪತಿಯನ್ನಾಗಿಯೂ ನೇಮಿಸಲಾಗಿದೆ. ಈ ಘಟನೆ ನಡೆದಿದ್ದು ಉತ್ತರಾಖಂಡ್ದ ಅಲ್ಮೋರಾದಲ್ಲಿ.
ಅಲ್ಮೋರಾದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಭೂಗತ ಪಾತಕಿ ಪ್ರಕಾಶ್ ಪಾಂಡೆ ಅಲಿಯಾಸ್ ಪಿಪಿ ಪಾಂಡೆಗೆ ಜೈಲಿನಲ್ಲಿಯೇ ದೀಕ್ಷೆ ನೀಡಲಾಗಿದೆಯಂತೆ. ಅಲ್ಲದೇ ಜುನಾ ಅಖಾಡದ ಮಹಾಂತರನ್ನಾಗಿ ನೇಮಿಸಲಾಗಿದೆಯಂತೆ.
ಅಲ್ಮೋರಾದ ರಾಣಿಖೇತ್, ಖಾನೌಯ ಗ್ರಾಮದ ಪ್ರಕಾಶ್ ಪಾಂಡೆ ಅಲಿಯಾ ಪಿ.ಪಿ ಪಾಂಡೆ ಛೋಟಾ ರಾಜನ್ ಜೊತೆ ಗುರುತಿಸಿಕೊಂಡಿದ್ದ. ಆತನೊಂದಿಗೆ ಹಲವು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ: ಕಿಡ್ನ್ಯಾಪ್ನಿಂದ ಹತ್ಯೆವರೆಗೂ; ನಟ ದರ್ಶನ್ ಗ್ಯಾಂಗ್ ಕ್ರೌರ್ಯ ಅಷ್ಟಿಷ್ಟಲ್ಲ; ಇಲ್ಲಿದೆ 20 ಮನಕಲಕುವ ಫೋಟೋಸ್
ಭೂಗತ ಪಾತಕಿ ಪ್ರಕಾಶ್ ಪಾಂಡೆ ತಂದೆ ಓರ್ವ ಸೈನಿಕನಾಗಿದ್ದ. ತಾಯಿ ಚಿಕ್ಕಂದಿಯಲ್ಲಿಯೇ ತೀರಿಕೊಂಡಿದ್ದರಿಂದ ಚಟಗಳ ದಾಸನಾಗಿ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದ ಪ್ರಕಾಶ್ ಪಾಂಡೆ ತೊಂಬತ್ತರ ದಶಕದಲ್ಲಿ ಚೋಟಾ ರಾಜನ್ನನ್ನು ಭೇಟಿಯಾಗಿದ್ದ. ಅವನ ವಿಶ್ವಾಸ ಗಳಿಸಿ ಛೋಟಾ ರಾಜನ್ ಬಲಗೈ ಎನಿಸಿದ್ದ.
ಛೋಟಾ ರಾಜನ್ ಮತ್ತು ದಾವೂದ್ ನಡುವೆ ಮನಸ್ತಾಪ ಉಂಟಾದಾಗ ದಾವೂದ್ ಅಡಗುತಾಣಗಳ ಮಾಹಿತಿ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದ. ಅಲ್ಲದೇ ದಾವೂದ್ನನ್ನು ಕೊಲ್ಲಲು ಪಾಕಿಸ್ತಾನಕ್ಕೂ ತೆರಳಿದ್ದ ಎನ್ನಲಾಗ್ತಿದೆ.
ಕೆಲ ಸಮಯದ ನಂತರ ಛೋಟಾ ರಾಜನ್ ಜೊತೆ ಮನಸ್ತಾಪ ಉಂಟಾಗಿ ಅವನನ್ನೂ ತೊರೆದು ಪ್ರತ್ಯೇಕ ಗ್ಯಾಂಗ್ ರಚಿಸಿಕೊಂಡಿದ್ದ. ದೆಹಲಿಯ ಕ್ರೈಂ ಬ್ರ್ಯಾಂಚ್ ಎಸಿಪಿ ರಾಜ್ಬೀರ್ಸಿಂಗ್ ಹಾಡಹಗಲೇ ಕೊಲೆಯಾದಾಗ ಪ್ರಕಾಶ್ ಪಾಂಡೆ ಹೆಸರು ಕೇಳಿ ಬಂದಿತ್ತು. ಬಳಿಕ ದೇಶ ತೊರೆದು ವಿಯೆಟ್ನಾಂನಲ್ಲಿ ವಾಸಿಸುತ್ತಿದ್ದ ಪ್ರಕಾಶ್ ಪಾಂಡೆ ಅಲ್ಲಿಂದಲೇ ತನ್ನ ವ್ಯವಹಾರ ನಿಯಂತ್ರಿಸುತ್ತಿದ್ದ.
ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ವಿಯೆಟ್ನಾಂನಲ್ಲಿ ಬಂಧಿಸಿ ಅವನನ್ನು ಉತ್ತರಾಖಂಡ್ಗೆ ಕರೆತಂದಿದ್ದರು. ಆ ಬಳಿಕ ಉತ್ತರಾಖಂಡ್ನ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಸದ್ಯ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಕಾಶ್ ಪಾಂಡೆಗೆ ಆಗಸ್ಟ್ನಲ್ಲಿ ಅಲ್ಮೋರಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್ ಎಷ್ಟು? ಸ್ಪೆಷಲ್ ಫೀಚರ್ಸ್ ಏನು?
ಇತ್ತೀಚೆಗೆ ಜುನಾ ಅಖಾಡದ ಸಂತರ ಗುಂಪೊಂದು ಆತನಿಗೆ ದೀಕ್ಷೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಹಲವು ಮಠಗಳ ಉಸ್ತುವಾರಿಯನ್ನೂ ನೀಡಿದ್ದಾರಂತೆ. ಈ ವಿಚಾರ ಉತ್ತರಾಂಡ್ದಲ್ಲಿ ಬಿರುಗಾಳಿ ಎಬ್ಬಿಸಿದೆ. ಭೂಗತ ಪಾತಕಿಗೆ ಸಂತ ದೀಕ್ಷೆ ನೀಡಿದ್ದಕ್ಕೆ ಜುನಾ ಅಖಾಡಾ ಮಹಾ ಪೋಷಕ ಶ್ರೀ ಮಹಂತಗಿರಿ ಕಿಡಿಕಾರಿದ್ದಾರೆ. ಇದು ಸಂಪೂರ್ಣ ತಪ್ಪು ಈ ಬಗ್ಗೆ ತನಿಖೆ ಮಾಡಲು ಜುನಾ ಅಖಾಡಾದಿಂದ 7 ಜನರ ಸಮಿತಿ ರಚಿಸಿದ್ದಾರೆ. ಇಂತವರಿಗೆಲ್ಲ ಸನ್ಯಾಸ ದೀಕ್ಷೆ ನೀಡುವುದು ಅಂದರೆ ಬೆಕ್ಕು ಕಾಶಿ ಯಾತ್ರೆ ಮಾಡಿದ ಕಥೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ