/newsfirstlive-kannada/media/post_attachments/wp-content/uploads/2025/02/PRAKASH-RAJ.jpg)
ಮಂಗಳೂರಿನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿ.. ಮಹಾಕುಂಭ ಮೇಳಕ್ಕೆ ಹೋಗಲು ನನ್ನ ಗೆಳೆಯರು ಪರ್ಮಿಷನ್ಗಾಗಿ ಫೋನ್ ಮಾಡಿದ್ದರು. ನಾನು ಯಾವತ್ತೂ ಧರ್ಮ ವಿರೋಧಿ ಅಲ್ಲ, ಅವರವರ ನಂಬಿಕೆಗಳು ಅದು. ನನಗೆ ಧರ್ಮದ ಮೇಲೆ ನಂಬಿಕೆ ಇಲ್ಲ, ನಾನು ಸೌಹಾರ್ದಕ್ಕೆಗೆ ಬೆಲೆ ಕೊಡೋನು ಎಂದರು.
ಎಲ್ಲರಿಗೂ ಅವರದ್ದೇ ಆದ ಅನಿಸಿಕೆಗಳಿರುತ್ತವೆ. ಅದನ್ನು ಪ್ರಶ್ನೆ ಮಾಡೋಕೆ ಆಗಲ್ಲ. ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎನ್ನುತ್ತೇನೆ. ಒಂದು ಧಾರ್ಮಿಕ ಆಚರಣೆ, ಪುಣ್ಯಸ್ನಾನ, ಪೂಜೆಯಲ್ಲಿಯೂ ರಾಜಕಾರಣ ಎಳೆದು ತಂದಿದ್ದಾರೆ. ಒಂದು ಸರ್ಕಾರವನ್ನು, ಒಬ್ಬ ವ್ಯಕ್ತಿಯನ್ನ ಪ್ರಶ್ನಿಸಿದ್ದಾನೆ ಎಂದ ಮಾತ್ರಕ್ಕೆ ವಾಟ್ಸ್ಆ್ಯಪ್ ಯುನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಅಂತಾ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: IAS ಅಧಿಕಾರಿ ಪೋಸ್ಟ್ಗೆ ಕಮೆಂಟ್ ಮಾಡಿ ಫಜಿತಿ.. ಅದೇ ಕಮೆಂಟ್ಗೆ ಸ್ಮೈಲಿ ಇಮೋಜಿ ಹಾಕಿದವನನ್ನೂ ಬಿಡಲಿಲ್ಲ!
ಸಂಬರ್ಗಿ ವಿರುದ್ಧ ವಾಗ್ದಾಳಿ
ನಾನು ಕುಂಭಮೇಳಕ್ಕೆ ಹೋಗಿದ್ದೇನೆ, ಕುಂಭ ಸ್ನಾನ ಮಾಡಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂಥ ಕೆಲಸವನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮಾಡುತ್ತಿದ್ದಾರೆ. ಅವರ ಮೇಲೆ ಕೇಸ್ ಫೈಲ್ ಮಾಡಿದ್ದೇವೆ. AI ಮೂಲಕ ತಪ್ಪನ್ನು ಹರಡಲಾಗುತ್ತಿದೆ, ಅದು ಅಕ್ಷಮ್ಯ. ಅದೆಲ್ಲ ಅವರ ಮಾನಸಿಕತೆಯನ್ನು ಬಿಂಬಿಸುತ್ತದೆ ಅಂತಾ ಕಿಡಿಕಾರಿದರು.
AI ಒಂದು ತಂತ್ರಜ್ಞಾದ ಅದ್ಭುತ ಆವಿಸ್ಕಾರ. ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು. ಕೆಲವರು ಅದನ್ನು ದುರುಪಯೋಗ ಪಡಿಸಿಕೊಳ್ತಿದ್ದಾರೆ. ಅಂತಹ ಅಕ್ಷಮ್ಯಗಳು ನಿಲ್ಲಬೇಕಿದೆ. ನಾನು ಕುಂಭ ಮೇಳಕ್ಕೆ ಹೋಗಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ನನ್ನ ಬಗ್ಗೆ ಮಾತ್ರವಲ್ಲ, ಅಖಿಲೇಶ್ ಯಾದವ್ ಬಗ್ಗೆಯೂ ಕಿಡಿಗೇಡಿಗಳು ಹಾಗೆ ಮಾಡಿದ್ದಾರೆ ಎಂದರು.
ಏನಾಗಿತ್ತು..?
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಕುಂಭಮೇಳ ನಡೆಯುತ್ತಿದೆ. ಈ ಮೇಳಕ್ಕೆ ಪ್ರಕಾಶ್ ರಾಜ್ ಹೋಗಿದ್ದಾರೆ. ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಹೇಳುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೊನೆಗೆ ಅವುಗಳನ್ನು ಪರಿಶೀಲನೆ ಮಾಡಿದಾಗ AI ತಂತ್ರಜ್ಞಾನದಿಂದ ಮಾಡಿರೋದು ಅನ್ನೋದು ದೃಢವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ