/newsfirstlive-kannada/media/post_attachments/wp-content/uploads/2024/07/Prakash-Raj_Darshan.jpg)
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಆಚೆ ದರ್ಶನ್ ಹಾಗೂ ಜೈಲಿನಲ್ಲಿರುವ ಪವಿತ್ರಗೌಡ ಮತ್ತು ಐವರಿಗೆ ಇಂದು ಹೈಕೋರ್ಟ್ ಪೂರ್ಣಾವಧಿ ಜಾಮೀನು ಮಂಜೂರು ಮಾಡಿದೆ. ಇದೇ ವಿಚಾರವಾಗಿ ಅನೇಕ ನಟ ನಟಿಯರು ತಮ್ಮ ಸಂಭ್ರಮವವನ್ನು ಹಂಚಿಕೊಂಡಿದ್ದಾರೆ.ಮೈಸೂರಿನಲ್ಲಿ ಇದೇ ವಿಚಾರವಾಗಿ ಪ್ರಕಾಶ್ ರಾಜ್ ಸ್ವಲ್ಪ ಖಾರವಾಗಿ ಉತ್ತರಿಸಿದ್ದಾರೆ.
ಮೈಸೂರಿನಲ್ಲಿ ಇಂದು ಇದೇ ವಿಚಾರವಾಗಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್​, ನಾನು ಸಿನಿಮಾ ಹಾಗೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ನಾನು ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಮಾತನಾಡಲು ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಬರೋಬ್ಬರಿ 6 ತಿಂಗಳ ಬಳಿಕ ರಿಲೀಫ್; ಪವಿತ್ರ ಗೌಡ ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
ಖಾಸಗಿ ಕಾರ್ಯಕ್ರಮಕ್ಕೆ ಅಂತ ಚೆನ್ನೈನಿಂದ ಮೈಸೂರಿಗೆ ಬಂದಿದ್ದ ಪ್ರಕಾಶ್ ರಾಜ್​ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ದರ್ಶನ್ ಅವರಿಗೆ ಬೇಲ್ ಸಿಕ್ಕಿರುವ ಬಗ್ಗೆ ಪ್ರಶ್ನೆ ಬಂದಿದೆ ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್, ಸಿನಿಮಾ ರಾಜಕೀಯದ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಅಲ್ಲ ಎಂದು ಪ್ರತಿಕ್ರಿಯಿಸಿದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us