/newsfirstlive-kannada/media/post_attachments/wp-content/uploads/2025/02/PRAMOD_MARAVANTHE.jpg)
ಸ್ಯಾಂಡಲ್‌ವುಡ್‌ನ ಯುವ ಬರಹಗಾರ ಪ್ರಮೋದ್ ಮರವಂತೆ ಅವರು ಕಾಂತಾರ ಮೂವಿಯ ಸಿಂಗಾರ ಸಿರಿಯೇ ಹಾಡಿನ ಮೂಲಕ ಎಲ್ಲರಿಗೂ ಪರಿಚಿತರು. ತಮ್ಮ ಹೊಸ ಹೊಸ ಬರಹಗಳ ಮೂಲಕ ಸಿನಿ ಪ್ರೇಕ್ಷಕರಿಗೆ, ಹಾಡು ಕೇಳುವವರಿಗೆ ಹೊಸತನದ ಅನುಭವ ಕೊಡುತ್ತಾರೆ. ಹೀಗಾಗಿ ಫೆಬ್ರುವರಿ 14, ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ನ್ಯೂಸ್ಫಸ್ಟ್ ಜೊತೆ ವಿಶೇಷ ಕವಿತೆಯೊಂದನ್ನ ಹಂಚಿಕೊಂಡಿದ್ದಾರೆ.
ಮನಗಳ ಕದಡುವಂತೆ ಪ್ರಮೋದ್ ಮರವಂತೆ ಅವರ ಬರಹ ಇರುತ್ತವೆ. ಇದರಿಂದಲೇ ಸ್ಯಾಂಡಲ್ವುಡ್ನಲ್ಲಿ ಇವರ ಬರಹಕ್ಕೆ ಬೇಡಿಕೆ ಹೆಚ್ಚು ಇದೆ. ಕೇವಲ ಕಾಂತಾರ ಸಿನಿಮಾಕ್ಕೆ ಮಾತ್ರವಲ್ಲ, ಪ್ರಭಾಸ್ ಮೂವಿಗೂ ಪ್ರಮೋದ್ ಮರವಂತೆ ಅವರು ಎರಡು ಹಾಡುಗಳನ್ನು ಬರೆದಿದ್ದಾರೆ. ಧಾರಾವಾಹಿಗಳಲ್ಲೂ ಇವರ ಟೈಟಲ್ ಟ್ರ್ಯಾಕ್ ಸದ್ದು ಮಾಡುತ್ತಿವೆ. ಪ್ರೇಮಿಗಳ ದಿನಕ್ಕೆ ನ್ಯೂಸ್ಫಸ್ಟ್ಗೆ ಕಳುಹಿಸಿದ ಕವಿತೆ ಹೀಗಿದೆ.
"ಪ್ರೇಮಿಗಳ ದಿನ"
ಭಾವನೆಗಳ ತೋಟದಲ್ಲಿ
ಬಾಡದ ಹೂ ಪ್ರೇಮ
ಅರಳುವುದು ಮಿನುಗುವುದು
ಘಮಲು ನೀಡುವುದು
ಅಮಲು ನೀಡುವುದು
ಮನ ಬಂದಂತೆ ಕುಣಿಸುವುದು
ನಗಿಸುವುದು ಅಳಿಸುವುದು..ಮಾತು ಮರೆಸುವುದು
ಮೌನ ಕಲಿಸುವುದು
ಸೋಲಿನೊಳಗಿರುವ
ಖುಷಿಗೆ ಗೆಲುವೆಂದು ಹೆಸರಿಡುವುದು
ಬೆರಳು ಬೆರಳು ಹೆಣೆದು ಕೂತಾಗ
ಸತ್ತರೂ ಜೊತೆಯಾಗೆ ಸಾಯೋಣ
ಎಂಬ ಪ್ರಾಮಾಣಿಕತೆಯ ಪಿಸುದನಿಯೊಂದ
ನುಡಿಸುವುದು ಮಿಡಿಸುವುದು..ಒಬ್ಬರನೊಬ್ಬರು ಪ್ರೀತಿಸಲು
ಇರಬಾರದು ಕಾರಣ
ಪ್ರೀತಿಸುವುದೆ ಜೀವನ
ಪ್ರೀತಿಸುವುದೆ ಪ್ರೇರಣ
ಪವಿತ್ರ ಪ್ರೇಮಕ್ಕೆ ಅನುದಿನವೂ
ಪ್ರೇಮಿಗಳ ದಿನ..ಎಲ್ಲಾ ಮುದ್ದು ಜೋಡಿಗಳಿಗೆ
ಪ್ರೇಮಿಗಳ ದಿನದ ಶುಭಾಶಯ-- ಪ್ರಮೋದ್ ಮರವಂತೆ
ಇದನ್ನೂ ಓದಿ:IPLನ ಮೊದಲ ಪಂದ್ಯ RCB ವಿರುದ್ಧ ಅಖಾಡಕ್ಕೆ ಇಳಿಯೋ ಟೀಮ್ ಯಾವುದು.. ಉದ್ಘಾಟನೆ ಪಂದ್ಯ ನಡೆಯುವುದೆಲ್ಲಿ?
ಯುವ ಬರಹಗಾರ ಪ್ರಮೋದ್ ಮರವಂತೆ ಅವರು ಕಾಂತಾರ, ಯುವ, ಮುಂದಿನ ನಿಲ್ದಾಣ, ಕಬ್ಜ, ಸಖತ್, ಆದಿಪುರುಷ್ ಹೀಗೆ ಹಲವಾರು ಸಿನಿಮಾಗಳಿಗೆ ಸುಂದರವಾದ, ಮನಸಿಗೆ ಇಷ್ಟವಾಗುವ 100 ಹಾಡುಗಳನ್ನು ಬರೆದಿದ್ದಾರೆ. ಅಲ್ಲದೇ ಕನ್ನಡದ ಸೀತಾರಾಮ ಸೀರಿಯಲ್‌ಗೆ ಪ್ರಮೋದ್ ಅವರು ಟೈಟಲ್ ಟ್ರ್ಯಾಕ್ ಬರೆದಿದ್ದಾರೆ. ಆದರೆ ಕಾಂತಾರದ ಸಿಂಗಾರ ಸಿರಿಯೇ ಹಾಡಿನ ಮೂಲಕವೇ ಪ್ರಮೋದ್ರನ್ನು ಜನ ಗುರುತಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ