Advertisment

‘ನಮ್ಮನ್ನು ಶತ್ರುವಿನ ರೀತಿ ನೋಡ್ತಿರಾ’- ಸಿದ್ದು ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಶಾಕಿಂಗ್ ರಿಯಾಕ್ಷನ್‌!

author-image
admin
Updated On
‘ನಮ್ಮನ್ನು ಶತ್ರುವಿನ ರೀತಿ ನೋಡ್ತಿರಾ’- ಸಿದ್ದು ಸರ್ಕಾರದ ವಿರುದ್ಧ ಪ್ರಮೋದಾ ದೇವಿ ಶಾಕಿಂಗ್ ರಿಯಾಕ್ಷನ್‌!
Advertisment
  • ಬೇರೆಯವರು ಕಳೆದುಕೊಂಡಿದ್ದು ಭೂಮಿ, ನಮ್ಮದು ಭೂಮಿಯಲ್ಲವೇ
  • ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ರಾಜಮಾತೆ ಪ್ರಮೋದಾ ದೇವಿ
  • ಎಲ್ಲ ಸರ್ಕಾರಗಳು ತೊಂದರೆ ಕೊಟ್ಟಿವೆ ಎಂದಿದ್ದೇಕೆ ಪ್ರಮೋದಾ ದೇವಿ?

ಮೈಸೂರು: ಚಾಮುಂಡಿ ಬೆಟ್ಟಕ್ಕೆ ರಿಟ್ ಅರ್ಜಿ ಸಲ್ಲಿಸಿರುವ ವಿಚಾರವಾಗಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ಭೂಮಿ ಕಳೆದುಕೊಂಡವರಿಗೆ ಭೂಮಿ ನೀಡುವ ವಿಚಾರವಾಗಿ ಮಾತನಾಡಿದೆ ಪ್ರಮೋದಾ ದೇವಿ, ಕೆಲವರು ಭೂಮಿ ಕಳೆದುಕೊಂಡರೆ ಅದು ಭೂಮಿ ನಾವು ಕಳೆದುಕೊಂಡದ್ದು ಭೂಮಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ನಮಗೂ ಭೂಮಿಗೆ ಪರ್ಯಾಯ ಭೂಮಿ ಕೊಡಬೇಕು ಅಲ್ವಾ? ಬೇರೆಯವರು ಕೇಳಿದಾಗ ಕೊಡುವವರು ನಾವು ಕೇಳಿದಾಗ ಏಕೆ ಕೊಡುವುದಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ.

Advertisment

publive-image

ಇದನ್ನೂ ಓದಿ:ಚಾಮುಂಡಿ ಬೆಟ್ಟಕ್ಕಾಗಿ ರಿಟ್​ ಅರ್ಜಿ ಸಲ್ಲಿಸಿದ ಪ್ರಮೋದಾ ದೇವಿ; ಸರ್ಕಾರಕ್ಕೆ ಬರೋಬ್ಬರಿ 13 ಪ್ರಶ್ನೆಗಳು; ಏನದು?

ಸರ್ವೇ ನಂಬರ್​ 4 ಕುರುಬರಹಳ್ಳಿ ಸಿದ್ಧಾರ್ಥ್​ ಲೇಔಟ್​, ವಿಜಯಶ್ರೀಪುರ ಬಡಾವಣೆಗಳೆಲ್ಲವೂ ಕೂಡ ನಮ್ಮದೇ ಭೂಮಿ ಮುಡಾ ನಮ್ಮ ಹೆಸರಿನಲ್ಲಿರುವ ಹಲವು ಭೂಮಿಯನ್ನು ವಶಪಡಿಸಿಕೊಂಡಿದೆ.ಅದು 1 ಎಕರೆ, 100 ಎಕರೆ, ಸಾವಿರ ಎಕರೆಯೇ ಆಗಿರಬಹುದು, ನಮಗೂ ಸರ್ಕಾರ ಪರಿಹಾರ ಕೊಡಬೇಕು ಅಲ್ಲವೇ, ರಾಜ್ಯ ಸರ್ಕಾರ ನಮ್ಮನ್ನು ಶತ್ರುವಿನಂತೆ ನೋಡುತ್ತಿದೆ  ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಭೂಮಿಗೆ ಭೂಮಿ ನೀಡಿ ಎಂದು ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ

Advertisment

ಇಷ್ಟು ಮಾತ್ರವಲ್ಲದೇ ಆಸ್ತಿ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ, ನನ್ನ ಮಗ ರಾಜಕಾರಣಿಯಾದರೂ ಕೂಡ ಪ್ರಭಾವ ಬೀರಲ್ಲ, ನಮ್ಮ ಯಜಮಾನ್ರು ನಾಲ್ಕು ಬಾರಿ ಎಂಪಿ ಆಗಿದ್ರು, ಅವ್ರು ಒಂದು ಬಾರಿಯೂ ಕೂಡ ಅಧಿಕಾರಿಗಳನ್ನು ಕರೆದು ನನ್ನ ಜಾಗ ನಮಗೆ ಕೊಡಿ ಎಂದು ಕೇಳಿಲ್ಲ. ಯಾವ ಜಾಗವನ್ನು ನಾವು ಮಾಡಿಕೊಂಡಿಲ್ಲ. ಈಗ ನನ್ನ ಪುತ್ರ ಎಂಪಿಯಾಗಿದ್ದಾರೆ, ಅವ್ರು ಜನರ ಸೇವೆ ಮಾಡಲು ಸಂಸದರಾಗಿದ್ದಾರೆ. ನಾನು ಕೂಡ ಅವರನ್ನು ಈ ಬಗ್ಗೆ ಕೇಳಲ್ಲ. ನಾವು ಕಾನೂನು ರೀತಿಯಲ್ಲಿಯೇ ಹೋರಾಟ ಮಾಡುತ್ತೆವೆ ನಮ್ಮ ಆಸ್ತಿ ವಿವಾದವನ್ನು ನಾವು ಕಾನೂನು ಮೂಲಕವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದ ಪ್ರಮೋದಾ ದೇವಿಯವರು. ಆ ಸರ್ಕಾರ ಈ ಸರ್ಕಾರ ಅಂತ ಏನಿಲ್ಲಾ ನಮಗೆ ಎಲ್ಲಾ ಸರ್ಕಾರಗಳು ತೊಂದರೆ ಕೊಟ್ಟಿವೆ. ಈಗಲೂ ಕೊಡುತ್ತಲೇ ಇವೆ ಎಂದು ಮೈಸೂರಿನಲ್ಲಿ ಪ್ರಮೋದಾ ದೇವಿ ಬೇಸರ ವ್ಯಕ್ತಪಡಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment