/newsfirstlive-kannada/media/post_attachments/wp-content/uploads/2024/08/PRANITHA.jpg)
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸಿನಿಮಾಗಳಿಗೆ ಬ್ರೇಕ್ ನೀಡಿ ಸದ್ಯ ಫ್ಯಾಮಿಲಿ ಜೊತೆ ಖುಷಿ ಖುಷಿಯಾಗಿದ್ದಾರೆ. ಮಗಳು ಅರ್ನಾ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದು ಇದರ ಜೊತೆಗೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರಣಿತಾ ಬ್ಯೂಟಿಫುಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ದರ್ಶನ್ ಇರೋ ಜೈಲಿಗೆ ₹100 ಕೋಟಿ ಖರ್ಚು ಮಾಡ್ತಾರಾ.. ಜೈಲು ಸುಧಾರಣೆ ಬಗ್ಗೆ DIG ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/08/PRANITHA_1.jpg)
ಪ್ರಣಿತಾ ಅವರು ಸದ್ಯ ತುಂಬು ಗರ್ಭಿಣಿಯಾಗಿದ್ದು ಇತ್ತೀಚೆಗಷ್ಟೇ 2ನೇ ಮಗುವಿನ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದರು. ಅವತು ನಿತಿನ್ ರಾಜು ಎನ್ನುವ ಉದ್ಯಮಿಯನ್ನು ಪ್ರಣಿತಾ ವಿವಾಹವಾಗಿದ್ದಾರೆ. ಪ್ರಣಿತಾ ಅವರ ಎರಡನೇ ಮಗುವಿನ ಬೇಬಿ ಶವರ್ ಫೋಟೋಗಳು ಸದ್ಯ ಎಲ್ಲೆಡೆ ವೈರಲ್ ಆಗಿವೆ.
ಇನ್ನೊಂದು ಸ್ಪೆಷಲ್ ಎಂದರೆ ಪ್ರಣಿತಾ ಅವರು ಇನ್​ಸ್ಟಾದಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದು ಆ ಫೋಟೋವನ್ನು ತನ್ನ ಪತಿನೇ ಕ್ಲಿಕ್ ಮಾಡಿದ್ದಂತೆ. ಫೋಟೋದಲ್ಲಿ ಬೆಡ್​ ಮೇಲೆ ಕುಳಿತಿರುವ ಪ್ರಣಿತಾ ಬಲೂನ್ ಹಿಡಿದುಕೊಂಡು ನಗುತ್ತಿದ್ದಾರೆ. ಬೆಡ್ ಮೇಲೆ ಹಾಗೂ ಕೆಳಗೆ ಬಲೂನ್​ಗಳು ಇವೆ. ಹಸ್ಬೆಂಡ್​ ಫೋಟೋ ಸ್ಕಿಲ್ ಇಂಪ್ರೂ ಆಗಿದೆಯಾ ಎಂದು ಇನ್​ಸ್ಟಾದಲ್ಲಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?
View this post on Instagram
ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಪ್ರಣಿತಾ ಆ್ಯಕ್ಟಿಂಗ್ ಮಾಡಿದ್ದಾರೆ. ಈಗ ಸಿನಿಮಾ ರಂಗದಿಂದ ದೂರು ಉಳಿದು ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ತಮ್ಮ ಮಗಳಾದ ಆರ್ನಾ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇನ್ನು ಪ್ರಣಿತಾ ಅವರು ಯಾವಾಗಲೂ ಇನ್​ಸ್ಟಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುತ್ತಾರೆ. ಹೀಗಾಗಿಯೇ ತಮ್ಮ ಹೊಸ ಹೊಸ ಫೋಟೋಗಳನ್ನು, ಕೆಲವೊಂದು ಅಪ್​ಡೇಟ್​​ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us