ಬೀದಿಗೆ ಬಂತು 10 ಬಿಲಿಯನ್ ಡಾಲರ್ ಉದ್ಯಮಿ ದಾಂಪತ್ಯ ಕಲಹ; ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಕೇಸ್‌!

author-image
admin
Updated On
ಬೀದಿಗೆ ಬಂತು 10 ಬಿಲಿಯನ್ ಡಾಲರ್ ಉದ್ಯಮಿ ದಾಂಪತ್ಯ ಕಲಹ; ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಕೇಸ್‌!
Advertisment
  • 10 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಸಹ-ಸಂಸ್ಥಾಪಕ
  • 10 ವರ್ಷದ ಪ್ರಸನ್ನ ದಾಂಪತ್ಯಕ್ಕೆ ಸುಂದರವಾದ 6 ವರ್ಷದ ಮಗು
  • ಪತಿ ವಿರುದ್ಧ ಸಿಂಗಾಪೂರ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದ ಪತ್ನಿ!

ಇತ್ತೀಚೆಗೆ ಗಂಡ, ಹೆಂಡತಿ ಜಗಳ ವಿಕೋಪಕ್ಕೆ ಹೋಗಿ ಡಿವೋರ್ಸ್‌ನಲ್ಲಿ ಅಂತ್ಯವಾಗೋದು ಸಾಮಾನ್ಯವಾಗಿದೆ. ಆದರೆ ಈ ಸ್ಟೋರಿ ಸಖತ್ ಡಿಫರೆಂಟ್‌ ಆಗಿದ್ದು, ಗಂಡ, ಹೆಂಡತಿ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಅಪ್ಪ-ಅಮ್ಮನ ಜಗಳದಲ್ಲಿ 6 ವರ್ಷದ ಮಗು ಪರದಾಡುವಂತಾಗಿದೆ. ಕೊನೆಗೆ ಇವರಿಬ್ಬರ ಜಗಳ ಚೆನ್ನೈ, ಅಮೆರಿಕಾದಲ್ಲೆಲ್ಲಾ ಅಲೆದಾಡಿ ಕೊನೆಗೆ ಸಿಂಗಾಪುರದಲ್ಲೂ ಸಖತ್ ಸದ್ದು ಮಾಡಿದೆ.

ಈ ವ್ಯಕ್ತಿಯ ಹೆಸರು ಪ್ರಸನ್ನ ಶಂಕರ್. ಅಮೆರಿಕಾದಲ್ಲಿ ರಿಪ್ಪಲಿಂಗ್ ಎಂಬ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಬರೋಬ್ಬರಿ 10 ಬಿಲಿಯನ್ ಡಾಲರ್ ಮೌಲ್ಯದ ಈ ಕಂಪನಿಯ ಸಹ-ಸಂಸ್ಥಾಪಕ. ಪ್ರಸನ್ನ ಕಳೆದ 10 ವರ್ಷದ ಹಿಂದೆ ದಿವ್ಯಶ್ರೀ ಅನ್ನು ಮದುವೆಯಾಗಿದ್ದ. ಗಂಡ-ಹೆಂಡತಿ 10 ವರ್ಷದ ದಾಂಪತ್ಯಕ್ಕೆ ಸುಂದರವಾದ 6 ವರ್ಷದ ಮಗು ಸಾಕ್ಷಿಯಾಗಿದೆ.

ಪ್ರಸನ್ನ ಶಂಕರ್, ದಿವ್ಯಶ್ರೀ ದಾಂಪತ್ಯ ಜೀವನ ಈಗ ಮುರಿದು ಬಿದ್ದಿದೆ. ಪ್ರಸನ್ನ ತನ್ನ ಹೆಂಡತಿ ನನಗೆ ದ್ರೋಹ ಮಾಡಿ ಪರ ಪುರುಷನ ಮೋಹಕ್ಕೆ ಸಿಲುಕಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಯನ್ನು ಹಂಚಿಕೊಂಡಿದ್ದಾರೆ.

publive-image

ಚೆನ್ನೈನಲ್ಲಿ ಹುಟ್ಟಿ ಬೆಳೆದ ಪ್ರಸನ್ನ ಅಮೆರಿಕಾದಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಆದರೆ ಪತ್ನಿ ದಿವ್ಯಶ್ರೀ, ಅನೂಪ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರಂತೆ. ಈ ಸತ್ಯ ಅನೂಪ್‌ನ ಪತ್ನಿಯಿಂದಲೇ ಪ್ರಸನ್ನಗೆ ಗೊತ್ತಾಗಿದೆ. ಹೀಗಾಗಿ ದಿವ್ಯಶ್ರೀಯಿಂದ ಡಿವೋರ್ಸ್ ಪಡೆಯಲು ಪ್ರಸನ್ನ ಭಾರತದ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಗಂಡನ ವಿರುದ್ಧ ಪತ್ನಿ ಸುಳ್ಳು ಕೇಸ್‌?
ಪ್ರಸನ್ನ ಡಿವೋರ್ಸ್‌ಗಾಗಿ ಭಾರತದಲ್ಲಿ ಅರ್ಜಿ ಹಾಕಿದ್ರೆ ದಿವ್ಯಶ್ರೀ ಪತಿ ವಿರುದ್ಧ ಸಿಂಗಾಪೂರ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ನನ್ನ ಅಶ್ಲೀಲ ಫೋಟೋಗಳನ್ನು ಪತಿ ಪ್ರಸನ್ನ ಹರಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ದೂರಿನ ಬಗ್ಗೆ ತನಿಖೆ ನಡೆಸಿದ ಸಿಂಗಾಪೂರ ಪೊಲೀಸರು ಪ್ರಸನ್ನಗೆ ಕ್ಲೀನ್ ಚಿಟ್ ಕೊಟ್ಟಿದೆ.

ಇದನ್ನೂ ಓದಿ: ನಟಿ ನೇಹಾ ಗೌಡ ಮಗಳ ಹೆಸರೇನು? ಅದ್ಧೂರಿ ನಾಮಕರಣ ಶಾಸ್ತ್ರದ ಫೋಟೋಸ್ ಇಲ್ಲಿವೆ! 

ಇಷ್ಟಕ್ಕೆ ಸುಮ್ಮನಾಗದ ದಿವ್ಯಶ್ರೀ ಪತಿ ಪ್ರಸನ್ನ ವಿರುದ್ಧ ಅಮೆರಿಕಾದಲ್ಲಿ ಡಿವೋರ್ಸ್ ಕೇಸ್ ಹಾಕಿದ್ದಾರೆ. ಈ ವೇಳೆ ಪತ್ನಿ ವಿರುದ್ಧ ಪ್ರಸನ್ನ ತನ್ನ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾಳೆ ಎಂದು ಅಂತಾರಾಷ್ಟ್ರೀಯ ಕೋರ್ಟ್‌ನ ಮೊರೆ ಹೋಗಿದ್ದಾರೆ. ಅಂತಾರಾಷ್ಟ್ರೀಯ ಕೋರ್ಟ್ 6 ವರ್ಷದ ಮಗನನ್ನು ಪತಿ ಪ್ರಸನ್ನ ವಶಕ್ಕೆ ನೀಡಿ ಆದೇಶ ನೀಡಿದೆ.

ಕೊನೆಗೆ ಇಬ್ಬರ ನಡುವೆ ರಾಜೀ ಸಂಧಾನ ನಡೆದು ಪತಿ ಪ್ರಸನ್ನ, ಪತ್ನಿ ದಿವ್ಯಶ್ರೀಗೆ 9 ಕೋಟಿ ಹಣ ನೀಡಿ ಡಿವೋರ್ಸ್ ಪಡೆಯೋ ಒಪ್ಪಂದ ಆಗಿದೆ. ಮಗನನ್ನು ಇಬ್ಬರ ಜೊತೆಗೆ 50-50 ದಿನಗಳ ಆಧಾರದ ಮೇಲೆ ಇರಿಸಿಕೊಳ್ಳುವ ನಿರ್ಧಾರವಾಗಿದೆ.


">March 23, 2025

ಗಂಡ-ಹೆಂಡತಿ ಒಪ್ಪಂದದ ಪ್ರಕಾರ ಪತ್ನಿ ದಿವ್ಯಶ್ರೀ ಮಗನ ಪಾಸ್‌ಪೋರ್ಟ್ ಅನ್ನು ಲಾಕರ್‌ನಲ್ಲಿ ಡಿಫಾಸಿಟ್ ಇಡಬೇಕು. ಆದರೆ ಈ ಒಪ್ಪಂದಕ್ಕೆ ಒಪ್ಪದ ದಿವ್ಯಶ್ರೀ ಅಮೆರಿಕಾಕ್ಕೆ ವಾಪಸ್ ಹೋಗಿ ಮತ್ತೆ ಡಿವೋರ್ಸ್ ಕೇಸ್ ಹಾಕಲು ಯತ್ನಿಸಿದ್ದಾರೆ. ಜೊತೆಗೆ ಪ್ರಸನ್ನ ವಿರುದ್ಧ ಭಾರತದಲ್ಲೂ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಚೆನ್ನೈ ಪೊಲೀಸರಿಗೆ ದೂರು!
ಪ್ರಸನ್ನ ಸ್ನೇಹಿತ ಗೋಕುಲ್ ವಿರುದ್ಧ ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಗೋಕುಲ್ ಅವರನ್ನ ಠಾಣೆಗೆ ಕರೆಸಿದ್ದರಿಂದಾಗಿ ಪ್ರಸನ್ನ ತಮಿಳುನಾಡು ಬಿಟ್ಟು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಗೌಪ್ಯವಾದ ಜಾಗದಿಂದಲೇ ಪ್ರಸನ್ನ ವಿಡಿಯೋ ಮಾಡಿದ್ದು, ನಾನು, ನನ್ನ ಮಗ ಸೇಫ್‌ ಆಗಿದ್ದೇವೆ. ನನಗೆ ಕಿರುಕುಳ ಕೊಡಬೇಡಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ ಎಂದ ಪ್ರಸನ್ನ ಹೇಳಿದ್ದಾರೆ.

ಹೆಂಡತಿ ಕಿರುಕುಳದ ಬಗ್ಗೆ ಪ್ರಸನ್ನ ವಿಡಿಯೋ ಬಿಡುಗಡೆ ಮಾಡಿದ್ದು, ನಮ್ಮ ಇಡೀ ಕುಟುಂಬ ಸದ್ಯ ತಮಿಳುನಾಡಿನಿಂದ ಹೊರಗೆ ಇದ್ದೇವೆ ಎಂದಿದ್ದಾರೆ. ಪ್ರಸನ್ನ ಅವರ ಪರದಾಟ ಹಾಗೂ ಹೋರಾಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಚೆನ್ನೈ ಪೊಲೀಸರು ಪ್ರಸನ್ನ ಸ್ನೇಹಿತ ಗೋಕುಲ್‌ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment