/newsfirstlive-kannada/media/post_attachments/wp-content/uploads/2024/12/JOBS_CWC.jpg)
ಸಾರ್ವಜನಿಕ ಸೇವಾ ಪ್ರಸಾರಕವಾಗಿರುವ ಪ್ರಸಾರ ಭಾರತಿ ಉದ್ಯೋಗಗಳನ್ನು ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈಗಾಗಲೇ ನೋಟಿಫಿಕೇಶನ್ ಅನ್ನು ಸಂಸ್ಥೆಯು ಬಿಡುಗಡೆ ಮಾಡಿದ್ದು ಅರ್ಜಿ ಕೂಡ ಆರಂಭವಾಗಿವೆ. ಉದ್ಯೋಗಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಸಾರ ಭಾರತಿ ಟೆಕ್ನಿಕಲ್ ಇಂಟರ್ನ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು ಒಟ್ಟು 63 ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಜುಲೈ 1 ರಂದೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕ ಕೊನೆಗೊಂಡಿತ್ತು. ಆದರೆ ಪ್ರಸಾರ ಭಾರತಿ ಈಗ ದಿನಾಂಕವನ್ನು ವಿಸ್ತರಣೆ ಮಾಡಿದ್ದು ಜುಲೈ 09ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದೆ. ಇತರೆ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಗಮನಿಸಬಹುದು.
ಒಟ್ಟು ಉದ್ಯೋಗಗಳು- 63
ಉದ್ಯೋಗದ ಹೆಸರು- ಟೆಕ್ನಿಕಲ್ ಇಂಟರ್ನ್
ಮಾಸಿಕ ವೇತನ ಶ್ರೇಣಿ- 25,000 ರೂಪಾಯಿ
ಇದನ್ನೂ ಓದಿ:Open AIಗೆ ಭಾರತೀಯ ಟ್ರಾಪಿಟ್ ಬನ್ಸಾಲ್ ಗುಡ್ಬೈ.. ಮೆಟಾದ 800 ಕೋಟಿ ರೂಪಾಯಿಗಳ ಬಿಗ್ ಡೀಲ್?
ಕೆಲಸ ಮಾಡುವ ಸ್ಥಳ-
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ
ಶೈಕ್ಷಣಿಕ ಅರ್ಹತೆ-
ಬಿಇ, ಬಿಟೆಕ್, ಈ ಪದವಿಗಳಲ್ಲಿ ಪಿಜಿ
ವಯೋಮಿತಿ-
30 ವರ್ಷದ ಒಳಗಿನ ಅಭ್ಯರ್ಥಿಗಳು
ಅರ್ಜಿ ಶುಲ್ಕ- ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ-
ಲಿಖಿತ ಪರೀಕ್ಷೆ
ಸಂದರ್ಶನ
ಸಂಸ್ಥೆಯ ವೆಬ್ಸೈಟ್-https://prasarbharati.gov.in/
ಅರ್ಜಿ ಸಲ್ಲಿಕೆಗೆ-https://avedan.prasarbharati.org/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ