Netflix, ಅಮೇಜಾನ್​ಗೆ ಪ್ರಸಾರ ಭಾರತಿ ಕೌಂಟರ್.. OTT ಸೇವೆಯಲ್ಲಿ 60 ಚಾನೆಲ್​​ಗಳು..!

author-image
Ganesh
Updated On
Netflix, ಅಮೇಜಾನ್​ಗೆ ಪ್ರಸಾರ ಭಾರತಿ ಕೌಂಟರ್.. OTT ಸೇವೆಯಲ್ಲಿ 60 ಚಾನೆಲ್​​ಗಳು..!
Advertisment
  • ಒಟಿಟಿ ಸೇವೆ ಯಾವಾಗಿಂದ ಆರಂಭ ಆಗಲಿದೆ?
  • ಒಂದು ಲಕ್ಷ ಜನರು ಇರುವ ಪಟ್ಟಣದಲ್ಲಿ ಖಾಸಗಿ FM
  • ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟ

OTT ಎಂದಾಕ್ಷಣ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನಂತಹ ಖಾಸಗಿ ಆನ್​ಲೈನ್ ಪ್ಲಾಟ್​ಫಾರ್ಮ್​​ಗಳು ನೆನಪಿಗೆ ಬರುತ್ತವೆ. ಇದೀಗ ಸರ್ಕಾರಿ ಸಂಸ್ಥೆಯಾದ ಪ್ರಸಾರ ಭಾರತಿ ಕೂಡ ಈ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಶೀಘ್ರದಲ್ಲೇ ಪ್ರಸಾರ ಭಾರತಿಯಿಂದಲೂ OTT ಸೇವೆ ಸಿಗಲಿದೆ.

ಪ್ರಸಾರ ಭಾರತಿಯ OTT ಸೇವೆಗಳು ನವೆಂಬರ್ 20 ರಿಂದ ಲಭ್ಯವಿರುತ್ತವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಮಾಹಿತಿ ನೀಡಿದ್ದಾರೆ. ನವೆಂಬರ್ 20 ರಿಂದ ಪ್ರಾರಂಭವಾಗುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಾರ ಭಾರತಿ OTT ಸೇವೆಗೆ ಚಾಲನೆ ನೀಡಲಾಗುತ್ತದೆ.

ಇದನ್ನೂ ಓದಿ:50 MLAಗಳಿಗೆ ತಲಾ ₹50 ಕೋಟಿ ಆಫರ್.. ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ

publive-image

ದೂರದರ್ಶನ ಸೇರಿ ಒಟ್ಟು 60 ಚಾನಲ್‌ಗಳು OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರಲಿದೆ. ಈ ಒಟಿಟಿ ಮೂಲಕ ಹಳೆಯ ಸಿನಿಮಾಗಳು ಮತ್ತು ಸಾರ್ವಕಾಲಿಕ ಹಿಟ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹೈದರಾಬಾದ್‌ನ ಹೆಚ್‌ಐಸಿಸಿಯಲ್ಲಿ ಮೂರು ದಿನಗಳ ಕಾಲ ಇಂಡಿಯಾ ಗೇಮ್ ಡೆವಲಪರ್ಸ್ ಸಮ್ಮೇಳನ ನಡೆಯಿತು. ಈ ವೇಳೆ ಸಂಜಯ್ ಜಾಜು ಅವರು ಮಾಹಿತಿ ನೀಡಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒಟ್ಟು 237 ಸ್ಥಳೀಯ ಖಾಸಗಿ ಎಫ್‌ಎಂ ರೇಡಿಯೊ ಚಾನೆಲ್​ಗಾಗಿ ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಸಲಿದೆ. ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಖಾಸಗಿ FM ಸ್ಟೇಷನ್​ಗೆ ಅನುಮತಿ ನೀಡಲು ಮುಂದಾಗಿದೆ.

ಇದನ್ನೂ ಓದಿ:Smartphone ಜೀವಿತಾವಧಿ ಗೊತ್ತೇ..? ನೀವು ಒಂದು ಫೋನ್​ ಎಷ್ಟು ವರ್ಷ ಬಳಸಬಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment