/newsfirstlive-kannada/media/post_attachments/wp-content/uploads/2025/07/PRASHANTH_NEEL_PRABHAS.jpg)
ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸದ್ಯ ಸಿನಿಮಾ ಶೂಟಿಂಗ್ನಲ್ಲಿ ಫುಲ್ ಬ್ಯುಸಿ ಇರೋ ನಿರ್ದೇಶಕರು. ಕೆಜಿಎಫ್ ಸಿನಿಮಾ ಮಾಡಿ ಇಡೀ ವಿಶ್ವಕ್ಕೆ ಗೊತ್ತಾದ ಡೈರೆಕ್ಟರ್. ಪ್ರಭಾಸ್ ಜೊತೆ ಬಿಗ್ ಬಜೆಟ್ನಲ್ಲಿ ಸಲಾರ್ ಮೂವಿ ಮಾಡಿ ಸಕ್ಸಸ್ ಕಂಡಿದ್ದಾರೆ. ಸಲಾರ್- 2, ಡ್ರ್ಯಾಗನ್ ಸಿನಿಮಾಗಳ ಬಿಡುವಿಲ್ಲದ ಕೆಲಸದ ನಡುವೆ ಪ್ರಶಾಂತ್ ನೀಲ್ ಇನ್ನೊಬ್ಬ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಲಿವುಡ್ನ ಸ್ಟಾರ್ಗಳಾದ ಪ್ರಭಾಸ್, ಜೂನಿಯರ್ ಎನ್ಟಿಆರ್ ಜೊತೆ ಸಿನಿಮಾ ಮಾಡುತ್ತಿರುವ ಸ್ಯಾಂಡಲ್ವುಡ್ನ ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಮತ್ತೊಂದು ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಸದ್ಯ ಪ್ರಶಾಂತ್ ನೀಲ್ ಅವರು ಸಾಲು ಸಾಲು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇದರ ಮಧ್ಯೆ ಇನ್ನೊಂದು ಸಿನಿಮಾನಾ ಎಂದು ಯೋಚಿಸಬೇಡಿ.
ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲು ಟಾಲಿವುಡ್ ಹೀರೋಗಳು ಕ್ಯೂ ನಿಂತಿದ್ದಾರೆ. ಹೀಗಾಗಿಯೇ ಮುಂದಿನ ತಮ್ಮ ಸಿನಿಮಾಗಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಸಲಾರ್-2 ಶೂಟಿಂಗ್ ಕ್ಯೂನಲ್ಲಿದೆ. ಡ್ರ್ಯಾಗನ್ ಜೊತೆನೂ ಪ್ರಶಾಂತ್ ನೀಲ್ ಫೈಟ್ ಮಾಡ್ತಿದ್ದಾರೆ. ಇದರ ನಡುವೆ ಟಾಲಿವುಡ್ನ ಮತ್ತೊಬ್ಬ ಬಿಗ್ ಸ್ಟಾರ್ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಟಾಲಿವುಡ್ನ ಐಕಾನ್ ಸ್ಟಾರ್, ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ಅವರು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಪ್ರಶಾಂತ್ ನೀಲ್ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.
ಇದನ್ನೂ ಓದಿ:ಇನ್ನೊಬ್ಬ ವ್ಯಕ್ತಿ ಜತೆ ಮಾತಾಡಿದ್ದೇ ತಪ್ಪು.. ಮಹಿಳಾ ಕೌನ್ಸಿಲರ್ ಜೀವ ತೆಗೆದ ಪಾಪಿ ಗಂಡ!
2026 ಜೂನ್ 25ಕ್ಕೆ ಡ್ರ್ಯಾಗನ್ ಸಿನಿಮಾ ರಿಲೀಸ್ ಆಗುತ್ತದೆ. ಇದೇ ಸಮಯಕ್ಕೆ ಅತ್ತ ಡೈರೆಕ್ಟರ್ ಅಟ್ಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮುಗಿದು ಹೋಗಿರುತ್ತದೆ. ಇದಾದ ಮೇಲೆ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಕಾಂಬೋದಲ್ಲಿ ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ನಿರ್ಮಾಪಕ ದಿಲ್ರಾಜು ಅವರು ಹಣ ಹಾಕುತ್ತಿದ್ದು ರಾವಣಂ ಎನ್ನುವ ಟೈಟಲ್ ಕನ್ಫರ್ಮ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಆಗಲಿ, ಅಲ್ಲು ಅರ್ಜುನ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ