/newsfirstlive-kannada/media/post_attachments/wp-content/uploads/2025/06/prashanth-neel.jpg)
ಈ ಸಲ ಕಪ್​ ನಮ್ದೇ ಅಲ್ಲ, ಈ ಸಲ ಕಪ್​ ನಮ್ದು. 2008 ರಿಂದ 2025 ಅಂದರೆ 18 ವರ್ಷ. ಈ ಸುದೀರ್ಘ 18 ವರ್ಷಗಳ ಪ್ರಯಾಣದಲ್ಲಿ ನಮ್ಮ ಆರ್​​ಸಿಬಿ ತಂಡ, ಕೋಟ್ಯಂತರ ಅಭಿಮಾನಿಗಳ​ ಕನಸು ನನಸಾಗಿದೆ. ಆರ್​ಸಿಬಿ ಐಪಿಎಲ್​ ಟ್ರೋಫಿಗೆ ಮುತ್ತಿಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಅಂತೂ ನೆಕ್ಸ್ಟ್​ ಲೆವೆಲ್​ನಲ್ಲಿತ್ತು.
ಇದನ್ನೂ ಓದಿ: RCB ಆಟಗಾರರಿಗೆ ವಿಧಾನಸೌಧದ ಗ್ರ್ಯಾಂಡ್​ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಸನ್ಮಾನ.. ಅನುಮತಿ ಸಿಗುತ್ತಾ?
/newsfirstlive-kannada/media/post_attachments/wp-content/uploads/2025/06/prashanth-neel1.jpg)
ಒಂದು ಕಡೆ ಐಪಿಎಲ್ ಟ್ರೋಫಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈ ಸೇರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿತ್ತು. ಇತ್ತ ಸ್ಯಾಂಡಲ್​ವುಡ್​ ಸ್ಟಾರ್​ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಮಕ್ಕಳಂತೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಈ ಬಾರಿಯ ಹುಟ್ಟು ಹಬ್ಬಕ್ಕೆ ಆರ್​ಸಿಬಿ ಗೆಲವನ್ನು ಗಿಫ್ಟ್​ ಆಗಿ ಸ್ವೀಕರಿಸಿದ್ದಂತೆ ಆಗಿದೆ.
/newsfirstlive-kannada/media/post_attachments/wp-content/uploads/2025/06/prashanth-neel2.jpg)
​ಹೌದು, ಬರೋಬ್ಬರಿ 18 ವರ್ಷಗಳ ಬಳಿಕ ಕನಸು ನನಸಾಗಿದೆ. ಆರ್‌ಸಿಬಿ ಕೊನೆಗೂ ಕಪ್ ಗೆದ್ದಿದೆ. ಅಭಿಮಾನಿಗಳು ಹೆಮ್ಮೆಯಿಂದ ಈ ಸಲ ಕಪ್​ ನಮ್ದೇ ಅಲ್ಲ​ ನಮ್ದು ಅಂತ ಹೇಳುತ್ತಿದ್ದಾರೆ. ಇದರ ಮಧ್ಯೆ ಪ್ರಶಾಂತ್​ ನೀಲ್​ ಅವರು ಆರ್​ಸಿಬಿ ಮ್ಯಾಚ್​ ಗೆಲ್ಲುತ್ತಿದ್ದಂತೆ ಓಡಿ ಹೋಗಿ ಕುಣಿದು ಸಂಭ್ರಮಿಸಿದ್ದಾರೆ.
View this post on Instagram
ಜೊತೆಗೆ ಆ ಸಂಭ್ರಮದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಈ ಸಲ ಕಪ್ ನಮ್ದೇ ಅಂತ ಬರೆದುಕೊಂಡಿದ್ದಾರೆ. ಇದನ್ನೇ ನೋಡಿದ ಆರ್​ಸಿಬಿ ಅಭಿಮಾನಿಗಳು ಇದೇ ಖುಷಿಯಲ್ಲಿ ಕೆಜಿಎಫ್​ 3 ಅನೌನ್ಸ ಮಾಡಿ ಅಂತ ಕಾಮೆಂಟ್ಸ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us