/newsfirstlive-kannada/media/post_attachments/wp-content/uploads/2025/01/Prasidh_Krishna_KOHLI.jpg)
ಆಸ್ಟ್ರೇಲಿಯಾದ ಸಿಡ್ನಿ ಅಂತರಾಷ್ಟ್ರೀಯ​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿ ರೋಚಕ ಹಂತಕ್ಕೆ ತಲುಪಿದೆ. ಭಾರತ ಕೊನೆಯ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಬೌಲರ್​ಗಳ ದಾಳಿಗೆ ಆಸ್ಟ್ರೇಲಿಯಾ ತಂಡ ತತ್ತರಿಸಿ ಹೋಗಿದೆ. ಅದರಲ್ಲೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಪರಾಕ್ರಮಕ್ಕೆ ಆಸಿಸ್ ಟೀಮ್ ಥಂಡಾ ಹೊಡೆದಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್ ಮಾಡುತ್ತಿದ್ದು ಮೊದಲ ಇನ್ನಿಂಗ್ಸ್​ನಲ್ಲೇ 3 ವಿಕೆಟ್​ಗಳನ್ನು ಕಬಳಿಸಿ ತಂಡಕ್ಕೆ ನೆರವಾಗಿದ್ದರು. ಇದರ ಬೆನ್ನಲ್ಲೇ ಇದೀಗ 2ನೇ ಇನ್ನಿಂಗ್ಸ್​ನಲ್ಲೂ ಪ್ರಸಿದ್ಧ್ ಕೃಷ್ಣ ಸೂಪರ್ ಬೌಲಿಂಗ್ ಮಾಡುವಲ್ಲಿ ಮತ್ತೆ ಯಶಸ್ವಿಯಾಗಿದ್ದಾರೆ. ಟೆಸ್ಟ್​ನ 3ನೇ ದಿನವಾದ ಇಂದು ಊಟದ ಸಮಯಕ್ಕೆ ಕಾಂಗರೂಗಳ ಮುಖ್ಯವಾದ 3 ವಿಕೆಟ್​ ಕಬಳಿಸಿ ಶಾಕ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/01/Prasidh_Krishna-1.jpg)
ಆಸಿಸ್​​ನ ಯುವ ಬ್ಯಾಟ್ಸ್​ಮನ್ ಸ್ಯಾಮ್​ ಕಾನ್​ಸ್ಟಾಸ್​ ವಿಕೆಟ್ ಪಡೆಯುವ ಮೂಲಕ 2ನೇ ಇನ್ನಿಂಗ್ಸ್​ನಲ್ಲಿ ಪ್ರಸಿದ್ಧ್ ಕೃಷ್ಣ ಮೊದಲ ಬಲಿ ಕೆಡವಿದರು. ಪ್ರಸಿದ್ಧ ಕೃಷ್ಣ ಅವರು ಹಾಕಿದ ಬಾಲ್ ಅನ್ನು ಸ್ಯಾಮ್ ಹೊಡೆದರು. ಆದರೆ ಚೆಂಡು ನೇರ ವಾಷಿಂಗ್ಟನ್ ಸುಂದರ್ ಕೈ ಸೇರಿತು. ಇದಾದ ಮೇಲೆ ಪ್ರಸಿದ್ಧ್ ಕೃಷ್ಣ ಹಾಕಿದ ಬಾಲ್ ಅನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ ಹೊಡೆಯಲು ಹೋಗಿ ಕ್ಯಾಚ್ ಕೊಟ್ಟು ಮೈದಾನದಿಂದ ನಿರ್ಗಮಿಸಿದರು. ಊಟಕ್ಕೆ ಹೋಗುವುದಕ್ಕೂ ಸ್ವಲ್ಪ ಮುಂಚೆ ಸ್ಟಿವ್ ಸ್ಮಿತ್ ಅವರನ್ನು ಪ್ರಸಿದ್ಧ್ ಕೃಷ್ಣ ಬಲೆಗೆ ಕೆಡವಿದರು. ಈ ಮೂಲಕ ಎದುರಾಳಿಯ ತಂಡದ ಪ್ರಮುಖ 3 ವಿಕೆಟ್​ ಪಡೆಯುವಲ್ಲಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾಗಿದ್ದಾರೆ.
2 ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿರುವ ಟೀಮ್ ಇಂಡಿಯಾ ಕೇವಲ 162 ರನ್​ಗಳ ಟಾರ್ಗೆಟ್ ಅನ್ನು ನೀಡಿದೆ. ಈ ಗುರಿಯನ್ನು ಬೆನ್ನತ್ತಿರುವ ಕಾಂಗರೂಗಳ ಪಡೆ ಈಗಾಗಲೇ 71 ರನ್​ಗೆ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಹೀಗಾಗಿ 5ನೇ ಟೆಸ್ಟ್​ ರೋಚಕ ಹಂತಕ್ಕೆ ತಲುಪಿದ್ದು ಗೆಲ್ಲುವುದು ಯಾರೆಂದು ಊಹಿಸುವುದು ಕಷ್ಟ ಎನ್ನಬಹುದು. ಗೆಲುವು ಸಾಧಿಸಬೇಕು ಎಂದರೆ ಆಸ್ಟ್ರೇಲಿಯಾ ಇನ್ನು 91 ರನ್​ಗಳನ್ನು ಗಳಿಸಬೇಕಿದೆ. ಒಂದು ವೇಳೆ 90 ರನ್​ ಒಳಗೆ ಆಸಿಸ್ ಆಲೌಟ್ ಆದರೆ, ಭಾರತ ಗೆಲುವು ಪಡೆಯಲಿದೆ. ಇದಕ್ಕೆ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us