/newsfirstlive-kannada/media/post_attachments/wp-content/uploads/2025/01/PRASIDH_KRISHANA.jpg)
ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯ ಕೊನೆ ಹಂತಕ್ಕೆ ಬಂದು ತಲುಪಿದ್ದು ಟೀಮ್ ಇಂಡಿಯಾ 2ನೇ ಇನ್ನಿಂಗ್ಸ್ ಪ್ರಾರಂಭಿಸಿದೆ. ಇದರ ಜೊತೆ 52 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಸ್ಟಿವ್ ಸ್ಮಿತ್ ಸೇರಿದಂತೆ ಪ್ರಮುಖ ವಿಕೆಟ್ಗಳನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐದನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮಾರಕ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ 15 ಓವರ್ಗಳನ್ನು ಮಾಡಿ ಕೇವಲ 42 ರನ್ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ ಇದರಲ್ಲಿ 3 ಓವರ್ಗಳನ್ನು ಮೇಡಿನ್ ಮಾಡಿದ್ದಲ್ಲದೇ ಆಸ್ಟ್ರೇಲಿಯಾದ ಪ್ರಮುಖ 3 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದು ಭಾರತ ತಂಡಕ್ಕೆ ಬಹುದೊಡ್ಡ ತಿರುವು ತಂದುಕೊಟ್ಟಿದೆ. ಹೀಗಾಗಿಯೇ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ನೆರವಾಗಿದೆ.
ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್.. ಖ್ಯಾತ ಮೂಳೆತಜ್ಞ ಹೇಳಿರುವುದು ಏನು?
33 ರನ್ ಗಳಿಸಿ ಅರ್ಧಶತಕದೆಡೆಗೆ ಮುಖ ಮಾಡಿದ್ದ ಸ್ಟಿವ್ ಸ್ಮಿತ್ ಅವರನ್ನು ಪ್ರಸಿದ್ಧ್ ಕೃಷ್ಣ ಬಲೆಗೆ ಕೆಡವಿದರು. ಕೃಷ್ಣ ಹಾಕಿದ್ದ ಬಾಲ್ ಸ್ಮಿತ್ ಬ್ಯಾಟ್ಗೆ ಟಚ್ ಆಗಿ ಸ್ಲಿಪ್ನಲ್ಲಿದ್ದ ಕೆ.ಎಲ್ ರಾಹುಲ್ ಅವರ ಕೈ ಸೇರಿತು. ಈ ಮೂಲಕ ಕನ್ನಡಿಗರ ಕೈಯಲ್ಲಿ ಸ್ಮಿತ್ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯೂ ವೆಬ್ಸ್ಟರ್ 57 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಈ ವೇಳೆ ಬೌಲಿಂಗ್ ಮಾಡಲು ಬಂದ ಕೃಷ್ಣ, ವೆಬ್ಸ್ಟರ್ನನ್ನ ಔಟ್ ಮಾಡಿದರು. ಇವರ ನಂತರ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಯನ್ನ ಕ್ಲೀನ್ ಬೋಲ್ಡ್ ಮಾಡುವ ಮೂಲಕ ತಂಡದ ಪ್ರಮುಖ 3 ವಿಕೆಟ್ಗಳನ್ನು ಪ್ರಸಿದ್ಧ್ ಕೃಷ್ಣ ಪಡೆದು ಸಂಭ್ರಮಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 185 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನುಹತ್ತಿದ್ದ ಆಸ್ಟ್ರೇಲಿಯಾ ತಂಡ 181 ರನ್ಗಳಿಸಿ ಆಲೌಟ್ ಆಗಿದೆ. ಬೂಮ್ರಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ನಡೆದರು. ನಂತರ ಬುಮ್ರಾ ಅವರ ಸ್ಥಾನವನ್ನು ತುಂಬುವಲ್ಲಿ ಸಿರಾಜ್, ಪ್ರಸಿದ್ಧ್ ಕೃಷ್ಣ ಮಾಡಿದ್ದಾರೆ. ತಲಾ ಮೂರು ವಿಕೆಟ್ ಪಡೆದು ಭಾರತಕ್ಕೆ ನೆರವಾದರು. ಸದ್ಯ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ 78 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿದೆ. ಜೈಸ್ವಾಲ್, ಕೆ.ಎಲ್ ರಾಹುಲ್, ಗಿಲ್ ಹಾಗೂ ಕೊಹ್ಲಿ ಔಟ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ