newsfirstkannada.com

ಒಂದೇ ವೇದಿಕೆಯಲ್ಲಿ ಸಂಸದ ಪ್ರತಾಪ್ ಸಿಂಹ, ಯದುವೀರ್ ಒಡೆಯರ್..!

Share :

Published March 18, 2024 at 11:57am

Update March 18, 2024 at 11:59am

    ಭಾರೀ ಕುತೂಹಲ ಮೂಡಿಸಿದ ನಾಯಕರಿಬ್ಬರ ಭೇಟಿ

    ಲೋಕಸಭೆ ಚುನಾವಣೆ ವಿಚಾರದಲ್ಲಿ ಪ್ರತಾಪ್ ಸಿಂಹಗೆ ಬೇಸರ

    ಮುನಿಸು ಮರೆತು ಬಿಜೆಪಿ ಅಭ್ಯರ್ಥಿ ಬೆಂಬಲಕ್ಕೆ ನಿಂತ ಸಂಸ

ಮೈಸೂರು: ಕೊನೆಗೂ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​​​ ಹಾಗೂ ಹಾಲಿ ಸಂಸದ ಪ್ರತಾಪ್ ಸಿಂಹ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟಿಕೆಟ್ ತಪ್ಪಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದ ಪ್ರತಾಪ್ ಸಿಂಹ ಮೊದಲ ಬಾರಿಗೆ ಒಡೆಯರ್​​ರನ್ನು ಭೇಟಿ ಮಾಡಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಕೂತಿದ್ದಾರೆ. ಇವರಿಬ್ಬರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಬಾರಿಯೂ ಪ್ರತಾಪ್ ಸಿಂಹ ಅವರು ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದು ಸಹಜವಾಗಿಯೇ ಪ್ರತಾಪ್ ಸಿಂಹ ಅವರ ಕೋಪಕ್ಕೆ ಕಾರಣವಾಗಿತ್ತು. ಯದುವೀರ್ ಒಡೆಯರ್ ರಾಜಕೀಯ ಪ್ರವೇಶವನ್ನು ಪ್ರತಾಪ್ ಸಿಂಹ ಟೀಕಿಸಿ ವ್ಯಂಗ್ಯವಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಜೆಪಿ ಹೈಕಮಾಂಡ್ ಮೈಸೂರು ಒಡೆಯರ್​​ ಅವರಿಗೆ ಟಿಕೆಟ್ ಘೋಷಣೆ ಮಾಡಿತು. ಆ ಬಳಿಕ ಪ್ರತಾಪ್ ಸಿಂಹ, ಒಡೆಯರ್​​ ವಿರುದ್ಧ ಟೀಕೆ ಮಾಡೋದನ್ನು ನಿಲ್ಲಿಸಿದ್ದರು. ಅಲ್ಲದೇ, ಲೋಕಸಭೆ ಚುನಾವಣೆಯಲ್ಲಿ ಒಡೆಯರ್ ಪರ ಪ್ರಚಾರ ಮಾಡೋದಾಗಿ ತಿಳಿಸಿದ್ದರು. ಅಂತೆಯೇ ಇವತ್ತು ಒಡೆಯರ್ ಮತ್ತು ಪ್ರತಾಪ್ ಸಿಂಹ ಮುಖಾಮುಖಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ವೇದಿಕೆಯಲ್ಲಿ ಸಂಸದ ಪ್ರತಾಪ್ ಸಿಂಹ, ಯದುವೀರ್ ಒಡೆಯರ್..!

https://newsfirstlive.com/wp-content/uploads/2024/03/PRATAP-odeyar.jpg

Load More