newsfirstkannada.com

ಡಾ.ಯತೀಂದ್ರ ಸಿದ್ದರಾಮಯ್ಯ ಎದುರಾಳಿಯಾದರೆ ಒಳ್ಳೆಯದು -ಸಂಸದ ಪ್ರತಾಪ್ ಸಿಂಹ

Share :

Published January 13, 2024 at 1:39pm

Update January 13, 2024 at 1:41pm

    ಮೋದಿ ಮುಂದೆ ಎದುರಾಳಿ ಹೆಸರು ನಡೆಯಲ್ಲ

    ನಂಗೆ 2 ಪಕ್ಷದ ನಾಯಕರ ಆಶೀರ್ವಾದ ಇದೆ

    ಲೋಕಸಭೆ ಫೈಟ್ ಬಗ್ಗೆ ಸಂಸದರು ಹೇಳಿದ್ದೇನು?

ಮೈಸೂರು: ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ. ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿಯ ಹೆಸರು ನಡೆಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಗೆ ಪ್ರತಾಪ್ ಸಿಂಹ ಎದುರಾಳಿ ಡಾ.ಯತೀಂದ್ರ ಸಿದ್ದರಾಮಯ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.. ಕಾಂಗ್ರೆಸ್​ಗೆ ನಮ್ಮ ಚಿಂತೆ ಯಾಕೆ? ಕಾಂಗ್ರೆಸ್​ಗೆ ಊರ ಉಸಾಬರಿ ಯಾಕೆ? ತಮ್ಮ ಅಭ್ಯರ್ಥಿ ಯಾರು ಎಂಬುವುದನ್ನು ನೋಡಿಕೊಳ್ಳಲಿ. ಲೋಕಸಭೆಗೆ ಅಭ್ಯರ್ಥಿಗಳು ಇಲ್ಲದೆ ಮಂತ್ರಿಗಳ ನಿಲ್ಲಿಸುವ ದೈನಾಸಿ ಸ್ಥಿತಿ ಕಾಂಗ್ರೆಸ್​ಗೆ ಬಂದಿದೆ.

ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಗೊಂದಲ ಇಲ್ಲ. ಈ ಕ್ಷೇತ್ರದಲ್ಲಿ ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದ ಇದೆ. ಡಾ.ಯತೀಂದ್ರ ಸಿದ್ದರಾಮಯ್ಯ ತಮ್ಮ ಎದುರಾಳಿಯಾದರೆ ಒಳ್ಳೆಯದು. ಡಾ.ಯತೀಂದ್ರ ಸಿದ್ದರಾಮಯ್ಯ ಸನ್ ಆಫ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ನಡುವೆ ಫೈಟ್ ನಡೆಯುತ್ತದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಯತೀಂದ್ರ ಸಿದ್ದರಾಮಯ್ಯ ಎದುರಾಳಿಯಾದರೆ ಒಳ್ಳೆಯದು -ಸಂಸದ ಪ್ರತಾಪ್ ಸಿಂಹ

https://newsfirstlive.com/wp-content/uploads/2024/01/PRATAP-SIMHA-4.jpg

Load More