ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪ್ರವೀಣ್​ ನೆಟ್ಟಾರು ಪ್ರಕರಣ ಲಿಂಕ್..?

author-image
Ganesh
Updated On
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪ್ರವೀಣ್​ ನೆಟ್ಟಾರು ಪ್ರಕರಣ ಲಿಂಕ್..?
Advertisment
  • ಮಂಗಳೂರಲ್ಲಿ ನಿನ್ನೆ ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ
  • ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಬರ್ಬರ ಕೊಲೆ
  • 6 ಮಂದಿ ದುಷ್ಕರ್ಮಿಗಳಿಂದ ಭೀಕರ ಕೊಲೆ ಆಗಿದೆ

ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನಿನ್ನೆ ಮಂಗಳೂರು ಹೊರವಲಯದ ಕಿನ್ನಿಪದವು ಬಳಿ 6 ಜನರ ದುಷ್ಕರ್ಮಿಗಳ ತಂಡ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ.. ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್

publive-image

ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಲಿಂಕ್..

ಸುಹಾಸ್ ಶೆಟ್ಟಿ, ಹಿಂದೂ ಕಾರ್ಯಕರ್ತನಾಗಿದ್ದ. ಈತನ ಕೊಲೆಗೂ ಪ್ರವೀಣ್ ನೆಟ್ಟಾರು ಹತ್ಯೆಗೂ ಸಂಬಂಧವಿದೆ ಎನ್ನಲಾಗ್ತಿದೆ. ಪ್ರವೀಣ್​ ನೆಟ್ಟಾರು ಹತ್ಯೆ ಕೇಸ್​ನ ಆರೋಪಿಯಾಗಿದ್ದ. ಪ್ರವೀಣ್​ ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಸುಹಾಸ್ ಶೆಟ್ಟಿ ಸುರತ್ಕಲ್‌ನ ಫಾಜಿಲ್​ನನ್ನ ಹತ್ಯೆ ಮಾಡಿದ ಆರೋಪ ಇತ್ತು. ಈ ಸಂಬಂಧ ಸುಹಾಸ್ ಮೇಲೆ ಮಂಗಳೂರು ಪೊಲೀಸರು ರೌಡಿ ಶೀಟರ್​ ಓಪನ್​ ಮಾಡಿದ್ರು. ಇದೇ ಸೇಡಿನ ಮುಂದುವರೆದ ಭಾಗವಾಗಿ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ.

publive-image

ಇದನ್ನೂ ಓದಿ: ಸುಹಾಸ್ ಶೆಟ್ಟಿ ಪ್ರಕರಣ.. ಮಂಗಳೂರು ಕಮಿಷನರ್ ನೀಡಿದ ಮಾಹಿತಿ ಏನು..?

ಇದೇ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಕಮಿಷನರ್​ ಅನುಪಮ್​ ಅಗರ್ವಾಲ್, 2022ರಲ್ಲಿ ಫಾಸಿಲ್ ಎಂಬಾತನ ಹತ್ಯೆ ಆಗಿತ್ತು. ಈ ಪ್ರಕರಣದ ಆರೋಪಿಯೇ ಸುಹಾಸ್ ಶೆಟ್ಟಿ. ಸುಹಾಸ್ ಶೆಟ್ಟಿ ಮೇಲೆ ಸುಮಾರು ಐದು ಕೇಸ್​ಗಳಿದ್ದವು. ಒಂದು ವರ್ಷದ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದ. ನಿನ್ನೆಯ ಪ್ರಕರಣ ಸಂಬಂಧ ಬಜ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಲಾಗಿದೆ. ಆರೋಪಿಗಳ ಪತ್ತೆಗಾಗಿ ತಂಡ ರಚಿಸುತ್ತೇವೆ. ಇನ್ನು ಪೊಲೀಸ್​ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಮಂಗಳೂರು ನಗರದಲ್ಲಿ ಹೆಚ್ಚಿನ ಬಂದೋಬಸ್ತ್​ ಕಲ್ಪಿಸಲಾಗುತ್ತೆ. ಇದು ಪ್ರತೀಕಾರದ ಹತ್ಯೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಅಂತಾ ತಿಳಿಸಿದರು.

ಇದನ್ನೂ ಓದಿ: ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನ ಕೊಚ್ಚಿ ಕೊಂದ 6 ದುಷ್ಕರ್ಮಿಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment