50 ಅಲ್ಲ 60 ಕೋಟಿ ಭಕ್ತರು.. ಪ್ರಯಾಗ್‌ರಾಜ್‌ನಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಎಲ್ಲಾ ಪ್ಲ್ಯಾನ್‌ಗಳು ಫೇಲ್!

author-image
Gopal Kulkarni
Updated On
50 ಅಲ್ಲ 60 ಕೋಟಿ ಭಕ್ತರು.. ಪ್ರಯಾಗ್‌ರಾಜ್‌ನಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಎಲ್ಲಾ ಪ್ಲ್ಯಾನ್‌ಗಳು ಫೇಲ್!
Advertisment
  • ಮಹಾಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ
  • 50 ಅಲ್ಲ 60 ಕೋಟಿ ಭಕ್ತಾದಿಗಳಿಂದ ಪುಣ್ಯಸ್ನಾನ ಆಗುವ ನಿರೀಕ್ಷೆಯಿದೆ
  • ನಾಳೆ ಮುಗಿಯಲಿದೆ ಕಲ್ಪವಾಸ ಆಚರಿಸುತ್ತಿರುವವರ ಒಂದು ತಿಂಗಳ ವ್ರತ

ಕುಂಭಮೇಳದ ಪ್ರಯುಕ್ತ ಪ್ರಯಾಗರಾಜ್​ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾದಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. ನಿನ್ನೆ ಸಂಜೆಯವರೆಗೂ ಸುಮಾರು 44 ಕೋಟಿ 74 ಲಕ್ಷ ಭಕ್ತಾದಿಗಳಿಂದ ಪವಿತ್ರ ಸ್ನಾನವಾದ ಅಂಕಿಸಂಖ್ಯೆಗಳು ದೊರೆಯುತ್ತಿವೆ. ಮಹಾಕುಂಭಮೇಳ ಮುಗಿಯುವ ಹೊತ್ತಿಗೆ ಭಕ್ತಾದಿಗಳ ಪುಣ್ಯಸ್ನಾನ ಮಾಡಿದ ಸಂಖ್ಯೆ 60 ಕೋಟಿಗೂ ದಾಟಬಹುದು ಎಂದು ಅಂದಾಜಿಸಲಾಗಿದೆ. ನಿನ್ನೆಯಷ್ಟೇ ಇದರ ಸಂಖ್ಯೆ 50 ಕೋಟಿ ಮೀರಬಹುದು ಎನ್ನಲಾಗಿತ್ತು. ಆದ್ರೆ ಈಗ ಹರಿದು ಬರುತ್ತಿರುವ ಭಕ್ತಸಾಗರ ನೋಡಿದರೆ ಇದು 60 ಕೋಟಿ ದಾಟಿದರು ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ಉತ್ತರಪ್ರದೇಶದ ಸರ್ಕಾರ ಸುಮಾರು 45 ಕೋಟಿ ಜನರಿಂದ ಪುಣ್ಯಸ್ನಾನ ಆಗಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ತಯಾರಿ ಮಾಡಿತ್ತು. ಆ ನಿರೀಕ್ಷೆಯನ್ನು ಮೀರಿ ಭಕ್ತಾದಿಗಳು ಪುಣ್ಯಸ್ನಾನಕ್ಕೆ ಆಗಮಿಸುತ್ತಿದ್ದಾರೆ. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿರುವುದರಿಂದ ಪ್ರಯಾಗರಾಜ್​ನಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿದೆ. ಜನದಟ್ಟಣೆ ನಿಯಂತ್ರಣಕ್ಕೆ ಮಾಡಿಕೊಂಡ ಎಲ್ಲಾ ಪ್ಲ್ಯಾನ್​​ಗಳು ವಿಫಲಗೊಳ್ಳುತ್ತಿವೆ.

publive-image

ಇದನ್ನೂ ಓದಿ:VIDEO: ತುಂಬಿ ತುಳುಕುತ್ತಿರುವ ರೈಲುಗಳು.. ಪ್ರಯಾಗ್‌ರಾಜ್‌ಗೆ ತೆರಳುವ ರೈಲಿನ ಕಿಟಕಿ ಗಾಜು ಪುಡಿ, ಪುಡಿ!

ಇಂದು ಕೂಡ ಕೋಟ್ಯಾಂತರ ಸಂಖ್ಯೆಯಲ್ಲಿ ಪ್ರಯಾಗರಾಜ್​ಗೆ ಭಕ್ತರು ಹರಿದು ಬರುತ್ತಿದ್ದಾರೆ. ನಾಳೆ ಪವಿತ್ರ ಮಾಘಿ ಪೂರ್ಣಿಮೆಯಿರುವುದರಿಂದ ಕೋಟಿಗಟ್ಟಲೇ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಯಾಗರಾಜ್​​ನತ್ತ ಮುಖ ಮಾಡಿದ್ದಾರೆ. ಜನದಟ್ಟಣೆ ನಿಯಂತ್ರಣಕ್ಕಾಗಿ ನೋ ವೆಹಿಕಲ್ ಝೋನ್ ಘೋಷಣೆ ಮಾಡಲಾಗಿದೆ. ಅಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂದು ಮುಂಜಾನೆ 4 ಗಂಟೆಯಿಂದಲೇ ನೋ ವೆಹಿಹಲ್ ಝೋನ್ ನಿಯಮ ಜಾರಿಯಾಗಿದ್ದು. ಪ್ರಯಾಗರಾಜ್ ಸಿಟಿಯೊಳಗೆ ವಾಹನಗಳಿಗೆ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಇನ್ನು ಪ್ರಯಾಗರಾಜ್​ಗೆ ಹರಿದು ಬರುವ ಭಕ್ತರ ಸಂಖ್ಯೆಯ ವಿಹಂಗಮ ನೋಟ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ನಾಗಾಸಾಧುಗಳು ಉದ್ದನೆಯ ಜಡೆ ಬಿಡುವುದು ಏಕೆ? ಇಲ್ಲಿದೆ ಅದರ ಅಸಲಿ ರಹಸ್ಯ

ಪ್ರಯಾಗರಾಜ್​ಗೆ ಆಗಮಿಸುವವರು ಸಿಟಿ ಹೊರಗಿನ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನ ಪಾರ್ಕಿಂಗ್ ಮಾಡಿ, ನಡೆದುಕೊಂಡು ಹೋಗಬೇಕು. ನಾಳೆ ಮಾಘಿ ಪೂರ್ಣಿಮೆ ಸ್ನಾನ ಮುಗಿಸಿಕೊಂಡು ಭಕ್ತಾದಿಗಳು ಹೋಗುವವರೆಗೂ ನಿರ್ಬಂಧ ಜಾರಿಯಲ್ಲಿದೆ.

publive-image

ನಾಳೆ ಕಲ್ಪವಾಸ ಅಂತ್ಯಗೊಳಿಸುವ ಭಕ್ತಾದಿಗಳು
ಇನ್ನು ಈಗಾಗಲೇ ಒಂದು ತಿಂಗಳಿನಿಂದ ಕಲ್ಪವಾಸದಲ್ಲಿರುವ ಭಕ್ತಾದಿಗಳಿಗೆ ನಾಳೆ ಪವಿತ್ರ ಸ್ನಾನದೊಂದಿಗೆ ಅವರ ಕಲ್ಪವಾಸ ಅಂತ್ಯಗೊಳ್ಳಲಿದ್ದು, ಪ್ರಯಾಗರಾಜ್​ನಲ್ಲಿ ಸುಮಾರು 10 ಲಕ್ಷ ಭಕ್ತಾದಿಗಳು ಕಲ್ಪವಾಸದಲ್ಲಿದ್ದಾರೆ. ನಿರಂತರ ಒಂದು ತಿಂಗಳು ದಿನಕ್ಕೆ ಒಂದು ಹೊತ್ತು ಊಟ ಮಾಡಿ ದಿನಕ್ಕೆ 3 ಬಾರಿ ಪುಣ್ಯಸ್ನಾನ ಮಾಡಿ ಕಲ್ಪವಾಸ ಆಚರಣೆ ಮಾಡುತ್ತಾರೆ. ನಾಳೆ ಪೂರ್ಣಿಮಾ ತಿಥಿಯಲ್ಲಿ ಸ್ನಾನ ಮಾಡಿ ಕಲ್ಪವಾಸ ಮುಗಿಸಲಿದ್ದಾರೆ ಕಲ್ಪವಾಸಿಗಳು. ಕಲ್ಪವಾಸದ ಬಗ್ಗೆ ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಆಧುನಿಕ ಜೀವನದ ಸೌಲಭ್ಯವಿಲ್ಲದೇ, ಟೆಂಟ್​ಗಳಲ್ಲಿ ವಾಸಿಸಿ ಭಕ್ತಾದಿಗಳು ಕಲ್ಪವಾಸ ಆಚರಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment