ಕನ್ನಡಿಗನ ಸಾರಥ್ಯದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳ; ವಿಜಯ ಕಿರಣ್ ಆನಂದ್ ಯಾರು?

author-image
admin
Updated On
ಕನ್ನಡಿಗನ ಸಾರಥ್ಯದಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳ; ವಿಜಯ ಕಿರಣ್ ಆನಂದ್ ಯಾರು?
Advertisment
  • ಕನ್ನಡಿಗ ಅಧಿಕಾರಿಯೇ ಮಹಾಕುಂಭ ಮೇಳದ ಮೇಳಾಧಿಕಾರಿ
  • 2021ರ ಕುಂಭ ಮೇಳಕ್ಕೂ ಕನ್ನಡಿಗ ಐಎಎಸ್ ಅಧಿಕಾರಿಯೇ ನೇಮಕ
  • ಕನ್ನಡಿಗ ಅಧಿಕಾರಿಗಳ ಮೇಲೆ ಸಿಎಂ ಯೋಗಿ ಆದಿತ್ಯನಾಥ್‌ಗೆ ಭರವಸೆ

ಪ್ರಯಾಗರಾಜ್‌ ಮಹಾಕುಂಭ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಮ್ಮ ದೇಶದಲ್ಲಿ 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತೆ. ಪ್ರಯಾಗರಾಜ್, ಹರಿದ್ವಾರ, ನಾಸಿಕ್, ಉಜ್ಜೈನಿಯಲ್ಲಿ 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತೆ. ಈ ಬಾರಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಪ್ರಯಾಗರಾಜ್‌ನಲ್ಲಿ ನಡೆಯುತ್ತಿದೆ.

ಕನ್ನಡಿಗನ ಸಾರಥ್ಯದಲ್ಲಿ ಮಹಾಕುಂಭ ಮೇಳ!
ಈ ಬಾರಿಯ ಪ್ರಯಾಗರಾಜ್‌ ಮಹಾಕುಂಭ ಮೇಳ ಕನ್ನಡಿಗರ ಸಾರಥ್ಯದಲ್ಲಿ ನಡೆಯುತ್ತಿದೆ. ಮಹಾಕುಂಭ ಮೇಳದ ಮೇಳಾಧಿಕಾರಿಯಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕನ್ನಡಿಗ IAS ಅಧಿಕಾರಿಯನ್ನೇ ನೇಮಕ ಮಾಡಿದ್ದಾರೆ. ಬೆಂಗಳೂರು ಮೂಲದ ವಿಜಯ ಕಿರಣ್ ಆನಂದ್ ಅವರು ಮಹಾಕುಂಭಮೇಳದ ಸಾರಥ್ಯವಹಿಸಿದ್ದಾರೆ.

publive-image

ವಿಜಯ ಕಿರಣ್ ಆನಂದ್ ಯಾರು?
ದಕ್ಷ IAS ಅಧಿಕಾರಿ ವಿಜಯ ಕಿರಣ್ ಆನಂದ್ ಅವರು ಬೆಂಗಳೂರಿನ ಇಂದಿರಾನಗರದ ನಿವಾಸಿ. ವಿಜಯ ಕಿರಣ್ ಆನಂದ್ ಅವರು ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿ ಆಗಿದ್ದಾರೆ.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ 45 ಕೋಟಿ ಭಕ್ತರು.. ಬೆಳಗ್ಗೆ 8 ಗಂಟೆಯೊಳಗೆ 65 ಲಕ್ಷ ಮಂದಿ ಪವಿತ್ರ ಸ್ನಾನ 

ವಿಜಯ ಕಿರಣ್ ಆನಂದ್ ಈ ಹಿಂದೆ ಗೋರಖ್‌ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ವಿಜಯ ಕಿರಣ್ ದಕ್ಷತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ. ವಿಜಯ ಕಿರಣ್ ಆನಂದ್ ಅವರನ್ನು ಮಹಾಕುಂಭಮೇಳದ ಮೇಳಾಧಿಕಾರಿಯಾಗಿ ನೇಮಕ ಮಾಡಿದ್ದಾರೆ.

publive-image

2021ರ ಕುಂಭ ಮೇಳಕ್ಕೆ ಮೇಳಾಧಿಕಾರಿಯಾಗಿ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಅವರನ್ನು ನೇಮಿಸಲಾಗಿತ್ತು. ಇದೀಗ ಮತ್ತೊಬ್ಬ ಕನ್ನಡಿಗರ ನೇತೃತ್ವದಲ್ಲಿ ಪ್ರಯಾಗರಾಜ್‌ನ ಮಹಾಕುಂಭಮೇಳ ನಡೆಯುತ್ತಿದೆ. ಇದು 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಆಗಿದೆ. ಮುಂದಿನ ಮಹಾಕುಂಭಮೇಳ 2,169ನೇ ವರ್ಷಕ್ಕೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment