newsfirstkannada.com

ಹಿಮಾಲಯದ ತಪ್ಪಲಿನಲ್ಲಿ ಕರ್ನಾಟಕದ ಹಲವು ಮಠಾಧೀಶರಿಂದ ಪ್ರಾರ್ಥನೆ; ಏನಿದರ ವಿಶೇಷ?

Share :

Published May 14, 2024 at 6:38pm

Update May 14, 2024 at 6:31pm

    ತಪಸ್ಸಿನ ಮೂಲಕ ದೇವಗಂಗೆ, ಬ್ರಹ್ಮದೇವ, ಪರಮೇಶ್ವರರನ್ನು ಒಲಿಸಿಕೊಂಡವರು

    ತನ್ನ ಪೂರ್ವಜರಿಗೆ ಮುಕ್ತಿಗೊಳಿಸಿ ಶಾಪ ವಿಮೋಚನೆಗೊಳಿಸಿದ ಮಹಾತಪಸ್ವಿ

    ಹಿಮಾಲಯದ ತಪ್ಪಲಿನಲ್ಲಿ ರಾಜ್ಯದ ಹಲವು ಮಠಾಧೀಶರು ಹೇಳಿದ್ದೇನು?

ಹಿಮಾಲಯದ ತಪ್ಪಲಿನಲ್ಲಿ ರಾಜ್ಯದ ಹಲವು ಮಠಾಧೀಶರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಜ ಋಷಿ ಭಗೀರಥ ಮಹರ್ಷಿಗಳ ಜಯಂತೋತ್ಸವದಲ್ಲಿ ಪರಮಪೂಜ್ಯ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ಮಠಾಧೀಶರು ಹಾಗೂ ವಿವಿಧ ಮಠಗಳ ಮಠಾಧೀಶರು ಭಾಗಿಯಾಗಿದ್ದಾರೆ.

ಶ್ರೀ ರಾಜಋಷಿ ಭಗೀರಥ ಮಹರ್ಷಿಗಳು ಕಠಿಣ ತಪಸ್ಸಿನ ಮೂಲಕ ದೇವಗಂಗೆ, ಬ್ರಹ್ಮದೇವ, ಪರಮೇಶ್ವರರನ್ನು ಒಲಿಸಿಕೊಂಡವರು. ದೇವಗಂಗೆಯನ್ನು ಧರೆಗಿಳಿಸಿ ಸಗರ ಮಹಾಚಕ್ರವರ್ತಿಯ 60,000 ಮಕ್ಕಳನ್ನು ಅಂದರೆ ತನ್ನ ಪೂರ್ವಜರಿಗೆ ಮುಕ್ತಿಗೊಳಿಸಿ ಶಾಪ ವಿಮೋಚನೆಗೊಳಿಸಿದ ಮಹಾತಪಸ್ವಿ.

ಶ್ರೀ ಭಗೀರಥ ಮಹರ್ಷಿಗಳು ಸಕಲ ಜೀವಕೋಟಿ ಹಾಗೂ ಮನುಕುಲದ ಉದ್ದಾರ ಮಾಡಿದವರು. ಮಹರ್ಷಿಗಳ ಅನುಗ್ರಹ ಆಶೀರ್ವಾದ ಸಕಲ ಭಕ್ತರಿಗೂ ಸಿಗಬೇಕು. ಭೀಕರ ಬರಗಾಲ ಇರುವುದರಿಂದ ಮಳೆ, ಬೆಳೆ ಸಮೃದ್ಧಿ ದೊರೆಯಲೆಂದು ಕರ್ನಾಟಕದ ಈ ಎಲ್ಲಾ ಮಠಾಧೀಶರು ಹಿಮಾಲಯದ ಶ್ರೇಣಿಯ ಪುಣ್ಯಕ್ಷೇತ್ರದಲ್ಲಿ ಪ್ರಾರ್ಥಿಸಿ, ಸಕಲ ಭಕ್ತರಿಗೂ ಶುಭಾಶಯಗಳನ್ನು ಹಾರೈಸಿದ್ದಾರೆ.

ಇದನ್ನೂ ಓದಿ: ಸಂಗೀತಾ ಬರ್ತ್​ ಡೇಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಸಮ್ಮಿಲನ; ಯಾರೆಲ್ಲಾ ಬಂದಿದ್ರು? ಡ್ರೋನ್ ಪ್ರತಾಪ್ ಗಿಫ್ಟ್ ಏನು? 

ಜಯಂತೋತ್ಸವದಲ್ಲಿ ಭಾಗಿಯಾದವರು ಯಾರು?
ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು
ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳು
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು
ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು
ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು
ಮಡಿವಾಳ ಗುರು ಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು
ನಾರಾಯಣ ಗುರುಪೀಠದ ಶ್ರೀ ರೇಣುಕಾನಂದ ಮಹಾಸ್ವಾಮಿಗಳು
ಕುಂಬಾರ ಗುರು ಪೀಠದ ಶ್ರೀ ಕುಂಬಾರಗುಂಡಯ್ಯ ಮಹಾಸ್ವಾಮಿಗಳು
ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀಯ ಅಪ್ಪಣ್ಣ ಸ್ವಾಮಿಗಳು
ವೇದಾರ ಗುರು ಪೀಠದ ಶ್ರೀ ಕೇತೇಶ್ವರ ಮಹಾಸ್ವಾಮಿಗಳು
ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು
ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು
ಶಿಕಾರಿಪುರದ ಶ್ರೀ ಚನ್ನಬಸವ ಮಹಾಸ್ವಾಮಿಗಳು
ಇರುಕಲ್ಲ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಮಾಲಯದ ತಪ್ಪಲಿನಲ್ಲಿ ಕರ್ನಾಟಕದ ಹಲವು ಮಠಾಧೀಶರಿಂದ ಪ್ರಾರ್ಥನೆ; ಏನಿದರ ವಿಶೇಷ?

https://newsfirstlive.com/wp-content/uploads/2024/05/Rajarushi-Bhagiratha-Swamijis-1.jpg

Load More