ಶಿಕ್ಷಣ ಇಲಾಖೆ ಹೊಸ ನಿಯಮ.. ರಾಜ್ಯದ ಸಾವಿರಾರು ಪ್ರೀ-ಸ್ಕೂಲ್​ಗಳಿಗೆ ಸಂಕಷ್ಟ..

author-image
Ganesh
Updated On
ಶಿಕ್ಷಣ ಇಲಾಖೆ ಹೊಸ ನಿಯಮ.. ರಾಜ್ಯದ ಸಾವಿರಾರು ಪ್ರೀ-ಸ್ಕೂಲ್​ಗಳಿಗೆ ಸಂಕಷ್ಟ..
Advertisment
  • ನಿಯಮ ಸಡಿಲಕ್ಕೆ ಪ್ರೀ-ಸ್ಕೂಲ್ ಅಸೋಸಿಯೇಶನ್ ಆಗ್ರಹ
  • ಗಲ್ಲಿ ಗಲ್ಲಿಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಪ್ರೀ-ಸ್ಕೂಲ್​ಗಳು ಓಪನ್
  • ಅನಧಿಕೃತ ಪ್ರೀ-ಸ್ಕೂಲ್​ಗಳಿಗೆ ಮೂಗುದಾರಕ್ಕೆ ಕ್ರಮ

ಬೆಂಗಳೂರು: ರಾಜ್ಯದಲ್ಲಿರುವ ಸಾವಿರಾರು ಪ್ರೀ-ಸ್ಕೂಲ್​ಗೆ ಶಿಕ್ಷಣ ಇಲಾಖೆ ತಂದಿರುವ ಹೊಸ ನಿಯಮ ಸಂಕಷ್ಟ ತಂದೊಟ್ಟಿದೆ. ಹೀಗಾಗಿ ನಿಯಮದಲ್ಲಿ ಬದಲಾವಣೆ ಮಾಡಬೇಕು ಅಂತಾ ಪ್ರೀ-ಸ್ಕೂಲ್ ಅಸೋಸಿಯೇಶನ್ ಆಗ್ರಹ ಮಾಡಿದೆ. ಮತ್ತೊಂದು ಕಡೆ ಶಿಕ್ಷಣ ಇಲಾಖೆ ನಿಯಮ ಸ್ವಾಗತಾರ್ಹ ಅಂತಾ ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿದೆ.

ಇದನ್ನೂ ಓದಿ: ಕಡಿಮೆ ಅವಧಿಯಲ್ಲಿ 5 ಸರ್ಟಿಫೈಡ್​ ಕೋರ್ಸ್.. ಕೈ ತುಂಬಾ ಸಂಬಳ..!

ಅನಧಿಕೃತ ಪ್ರೀ-ಸ್ಕೂಲ್​ಗಳಿಗೆ ಮೂಗುದಾರ ಹಾಕಲು ಸರ್ಕಾರ ತಂದಿರುವ ಈ ನಿಯಮ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಪ್ರೀ-ಸ್ಕೂಲ್​ಗಳು ಓಪನ್ ಆಗಿವೆ. ಇಂಥ ಪ್ರೀ-ಸ್ಕೂಲ್​ಗೆ ಮೂಗುದಾರ ಹಾಕಲು ಇಲಾಖೆ ನಿರ್ಧಾರ ತೆಗೆದುಕೊಂಡಿದೆ.

ಹೊಸ ನಿಯಮದಲ್ಲಿ ಏನಿದೆ?

  • ಪ್ರೀ ಸ್ಕೂಲ್ ತೆರೆಯಲು 30 ವರ್ಷ ಲೀಸ್ ಅಗ್ರಿಮೆಂಟ್ ಪಡೆದಿರಬೇಕು
  • 18*20 ಅಳತೆ ಕೊಠಡಿ ಇರಬೇಕು
  • ಒಂದೇ ಸ್ಥಳದಲ್ಲಿ ಫ್ರೀ ಸ್ಕೂಲ್ 30 ವರ್ಷ ರನ್ ಆಗಬೇಕು
  • ಈಗಿರುವ ಎರಡು ಸಾವಿರ ಚದರ ಅಡಿಯಿಂದ 3000 ಚದರ ಅಳತೆಯಲ್ಲಿ ಕಟ್ಟಡ ಇರಬೇಕು
  • ನೆಲ ಮಹಡಿಯಲ್ಲಿ ಪ್ರೀ-ಸ್ಕೂಲ್ ನಡೆಸಬೇಕು

ಈಗಾಗಲೇ ಪ್ರೀ-ಸ್ಕೂಲ್ ತೆರೆಯಲು ಶಿಕ್ಷಣ ಇಲಾಖೆಗೆ ಸಾವಿರಾರು ಅರ್ಜಿ ಬಂದಿವೆ. ಹೊಸ ಆದೇಶ ಜಾರಿಯಿಂದ ನಮಗೆ ತೊಂದರೆ ಆಗಿದೆ. ಸ್ವಂತ ಕಟ್ಟಡದಲ್ಲಿ ಪ್ರೀ-ಸ್ಕೂಲ್​ ನಡೆಸುವಂತ್ತಿಲ್ಲ. 30 ವರ್ಷ ಅಗ್ರಿಮೆಂಟ್ ಲೀಸ್ ಕೇಳಿದ್ದಾರೆ. ಇದು ಕೊಡಲು ಸಾಧ್ಯವಿಲ್ಲ. ಕಾರ್ಪೋರೆಟ್ ಶಾಲೆಗಳಿಗೆ ಅನುಕೂಲ ಮಾಡಲು ಈ ರೀತಿ ಆದೇಶವನ್ನ ಜಾರಿಗೆ ತಂದಿದ್ದಾರೆ. ಕೂಡಲೇ ಸರ್ಕಾರ ಪ್ರೀ-ಸ್ಕೂಲ್​ಗೆ ಹೊರಡಿಸಿರುವ ಸುತ್ತೋಲೆಯನ್ನ ವಾಪಸ್ ಪಡೆದುಕೊಳ್ಳಬೇಕು ಎಂದು ಪ್ರೀ-ಸ್ಕೂಲ್ ಅಸೋಸಿಯೇಷನ್​​ ಪ್ರಮುಖ ಪ್ರಸನ್ನ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: 2, 4, 6, 7, 9ನೇ ತರಗತಿ ಮಕ್ಕಳಿಗೆ ಟ್ರಾಫಿಕ್ ಬಗ್ಗೆ ಪಾಠ; ಶಿಕ್ಷಣ ಇಲಾಖೆ ಮಾಡಿರೋ ಪ್ಲಾನ್ ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment