/newsfirstlive-kannada/media/post_attachments/wp-content/uploads/2024/07/GOLD.jpg)
ಎಲ್ಲರೂ ಚಿನ್ನ ಖರೀದಿ ಮಾಡೇ ಮಾಡುತ್ತಾರೆ. ಇದಕ್ಕೆ ಕಾರಣ ಯಾವುದಾದ್ರೂ ಕಷ್ಟ ಕಾಲಕ್ಕೆ ಚಿನ್ನ ಆಗುತ್ತದೆ ಎನ್ನುವ ನಂಬಿಕೆ. ಅದು ನಿಜ ಕೂಡ ಹೌದು. ತುರ್ತು ಅಗತ್ಯಗಳಿಗೆ ಚಿನ್ನ ಅಡ ಇಟ್ಟು ಸಾಲ ಪಡೆಯಬಹುದು.
ವೈಯಕ್ತಿಕ ಸಾಲಕ್ಕಿಂತ ಚಿನ್ನದ ಸಾಲ ಅಗ್ಗ. ಪರ್ಸನಲ್​ ಲೋನ್​ ಸಿಗೋದು ಕಷ್ಟ. ಆದರೆ ಗೋಲ್ಡ್​ ಲೋನ್​​ ಸಿಗೋದು ಬಹಳ ಸುಲಭ. ಆದರೆ, ಜನ ಗೋಲ್ಡ್​ ಲೋಕ್​ ತೆಗೆದುಕೊಳ್ಳೋ ಆತುರದಲ್ಲಿ ಬಹಳ ತಪ್ಪುಗಳು ಮಾಡುತ್ತಾರೆ. ಹೀಗಾಗಿ ನೀವು ಚಿನ್ನದ ಸಾಲ ಪಡೆಯೋ ಮುನ್ನ ಈ ಸ್ಟೋರಿ ಓದಿ.
ಗೋಲ್ಡ್​ ಲೋನ್​ ಯಾವಾಗ ತೆಗೆದುಕೊಳ್ಳಬೇಕು?
ಚಿನ್ನದ ಮೇಲೆ ಸಾಲು ಸುಲಭವಾಗಿ ಪಡೆಯಬಹುದು ನಿಜ. ಆದರೆ, ಯಾವಾಗ ಗೋಲ್ಡ್​ ಲೋನ್​ ಮಾಡಬೇಕು ಅನ್ನೋ ಪರಿಜ್ಞಾನ ಇರಬೇಕು. ಇಲ್ಲದೆ ಹೋದಲ್ಲಿ ಗೋಲ್ಡ್​ ಲೋನ್​ ಪಡೆಯೋದು ವೇಸ್ಟ್​​. ಯಾರಿಗಾದ್ರೂ ತೀರ ಅನಾರೋಗ್ಯ ಕಾಡಿದರೆ, ಚಿಕಿತ್ಸೆಗೆ ಹಣದ ಅಗತ್ಯ ಇದ್ದರೆ, ಎಜುಕೇಷನ್​​ ಫೀಸ್ ಕಟ್ಟಬೇಕು ಎಂದರೆ ಮಾತ್ರ ಗೋಲ್ಡ್​ ಲೋನ್​ ಮೊರೆ ಹೋಗಬೇಕು. ಮದುವೆ ಮಾಡಲು ಕೂಡ ಗೋಲ್ಡ್​ ಲೋನ್​ ಪಡೆಯಬಹುದು. ಒಂದು ವೇಳೆ ಐಷಾರಾಮಿ ಜೀವನಕ್ಕಾಗಿ ಅನಗತ್ಯ ಗೋಲ್ಡ್​ ಲೋನ್​ ಮಾಡಿದರೆ ಉಪಯೋಗವಿಲ್ಲ.
ಬಡ್ಡಿದರ ಪರಿಶೀಲಿಸಬೇಕು
ಎಲ್ಲಾ ಬ್ಯಾಂಕ್​ಗಳು ಗೋಲ್ಡ್​ ಲೋನ್​​ ಕೊಡುತ್ತವೆ. ಅದರ ಜೊತೆಗೆ ಕೆಲವು ಹಣಕಾಸು ಕಂಪನಿಗಳು ಚಿನ್ನದ ಸಾಲು ನೀಡುತ್ತವೆ. ಬ್ಯಾಂಕ್ ಬಡ್ಡಿ ದರಗಳು ಕಡಿಮೆ. ಹಾಗಾಗಿ ಕಡಿಮೆ ರೇಟ್​ ಆಫ್​ ಇಂಟರೆಸ್ಟ್​ ಇರೋ ಕಡೆ ಲೋನ್​ ಪಡೆಯೋದು ಉತ್ತಮ. ಯಾವುದೇ ಕಾರಣಕ್ಕೂ ಆತುರದಲ್ಲಿ ಲೋನ್​ ಮಾಡಬಾರದು.
ಅವಧಿ ಮೀರಬಾರದು
ನಿಗದಿತ ಸಮಯದೊಳಗೆ ಲೋನ್​​ ರೀಪೇಮೆಂಟ್​​ ಮಾಡದಿದ್ರೆ ಚಿನ್ನ ಮಾರುವ ಹಕ್ಕು ಬ್ಯಾಂಕ್​ಗೆ ಇರುತ್ತದೆ. ಬ್ಯಾಂಕುಗಳು ಸಾಮಾನ್ಯವಾಗಿ 3 ತಿಂಗಳಿಂದ 3 ವರ್ಷಗಳ ಅವಧಿಗೆ ಚಿನ್ನದ ಸಾಲ ನೀಡುತ್ತವೆ. ಸರಿಯಾದ ಸಮಯಕ್ಕೆ ಸಾಲ ತೀರಿಸಿ ಚಿನ್ನ ಬಿಡಿಸಿಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ