/newsfirstlive-kannada/media/post_attachments/wp-content/uploads/2025/06/baba-vanga.jpg)
ಸುನಾಮಿ, ಭೂಕಂಪ, ಭಯೋತ್ಪಾದಕ ದಾಳಿ, ಯುದ್ಧಗಳ ಬಗ್ಗೆ ಭವಿಷ್ಯ ನುಡಿಯುವ ಬಾಬಾ ವಂಗಾ 2025ರ ಬಗ್ಗೆ ಕೆಲ ಭವಿಷ್ಯಗಳು ಸಂಚಲನ ಸೃಷ್ಟಿಸಿವೆ. ಇದುವರೆಗೂ ಬಾಬಾ ವಂಗಾರ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ ಅನ್ನೋ ನಂಬಿಕೆ ಇದೆ. ಸದ್ಯ ಈ 4 ಭವಿಷ್ಯ ಭಾರೀ ವಿನಾಶಕ್ಕೆ ಕಾರಣವಾಗಬಹುದು ಎಂದಿದೆ.
ಬಾಬಾ ವಂಗಾ 4 ಭವಿಷ್ಯ!
1. 2025ರಲ್ಲಿ ಏಷ್ಯಾದಲ್ಲಿ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತವೆ ಎನ್ನಲಾಗಿದೆ.
2. ಜಾಗತಿಕ ಆರ್ಥಿಕತೆಯ ಕುಸಿತ ಸಂಭವಿಸುತ್ತೆ.
3. ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಸಂಶೋಧನೆ ಆಗುವುದರ ಜೊತೆಗೆ ಹೊಸ ಜಗತ್ತಿನ ಸಂಪರ್ಕ ಏರ್ಪಡುತ್ತೆ.
4. ಹೊಸ ಕಾಯಿಲೆ, ರೋಗಗಳು ಬರುತ್ತವೆ. ವೈದ್ಯಕೀಯ ಜಗತ್ತಿನಲ್ಲೂ ಅವಿಷ್ಕಾರಗಳು ಆಗುತ್ತವೆ.
ಇದನ್ನೂ ಓದಿ: 35 ವರ್ಷದ ಹಳೆಯ ಷೇರುಗಳಿಂದ 85 ಕೋಟಿ ರೂಪಾಯಿ; ರಾತ್ರೋರಾತ್ರಿ ಶ್ರೀಮಂತನಾದ ಲಕ್ಕಿ ಮ್ಯಾನ್!
ಯಾರು ಈ ಬಾಬಾ ವಂಗಾ?
ಬಾಬಾ ವಂಗಾ ಅವರು 20ನೇ ಶತಮಾನದ ಬಲ್ಗೇರಿಯಾದ ಪ್ರಸಿದ್ಧ ಕುರುಡು ಪ್ರವಾದಿಯಾಗಿದ್ದರು. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಇವರು ಪ್ರಸಿದ್ಧರಾಗಿದ್ದರು. ಅಕ್ಟೋಬರ್ 3, 1911 ರಂದು ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಸಲೋನಿಕಾ ವಿಲಾಯೆಟ್‌ನಲ್ಲಿರುವ ಸ್ಟ್ರುಮಿಕಾದಲ್ಲಿ ಜನಿಸಿದರು.
12ನೇ ವಯಸ್ಸಿನಲ್ಲಿ ಬಾಬಾ ವಂಗಾ ಅವರು ತನ್ನ ದೃಷ್ಟಿಯನ್ನು ಕಳೆದುಕೊಂಡರು. ಆದರೆ ಇವರಿಗಿರುವ ದಿವ್ಯ ದೃಷ್ಟಿಯಲ್ಲಿ ಭವಿಷ್ಯ ಹೇಳುತ್ತಿದ್ದು ಅಂತಾರಾಷ್ಟ್ರೀಯ ಮನ್ನಣೆಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ