Advertisment

ಕೇಂದ್ರದ ಸಚಿವರಾಗಿ ಕುಮಾರಣ್ಣ.. ಮಣ್ಣಿನ ಮಗನಿಗೆ ಸಿಗೋ ಖಾತೆ ಯಾವುದು?

author-image
Veena Gangani
Updated On
ಕೇಂದ್ರದ ಸಚಿವರಾಗಿ ಕುಮಾರಣ್ಣ.. ಮಣ್ಣಿನ ಮಗನಿಗೆ ಸಿಗೋ ಖಾತೆ ಯಾವುದು?
Advertisment
  • ಕೃಷಿ ಖಾತೆ ಮೇಲೆಯೇ ಕಣ್ಣಿಟ್ಟ ಹೆಚ್. ಡಿ ಕುಮಾರಸ್ವಾಮಿ
  • ಕರ್ನಾಟಕದಲ್ಲಿ ರೈತ ಪಕ್ಷವಾಗಿ ಗುರುತಿಸಿಕೊಂಡಿರುವ JDS
  • ಕರುನಾಡ ಮಣ್ಣಿನ ಮಗನಿಗೆ ಕೇಂದ್ರದಲ್ಲಿ ಸಿಗುತ್ತಾ ಕೃಷಿ ಖಾತೆ?

ಹೆಚ್​ಡಿಕೆ ಬೆಂಗಳೂರು ಆಡಳಿತದಿಂದ ದೆಹಲಿ ಆಡಳಿತಕ್ಕೆ ತೆರಳಿದ್ದಾರೆ. ನಿನ್ನೆ ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದ್ರೆ ಹೆಚ್​ಡಿಕೆಗೆ ಯಾವ ಖಾತೆ ಅನ್ನೋದು ಇನ್ನೂ ಫಿಕ್ಸ್​ ಆಗಿಲ್ಲ. ಮಣ್ಣಿನ ಮಗ ಮಾತ್ರ ಕೃಷಿ ಖಾತೆ ಮೇಲೆಯೇ ಕಣ್ಣಿಟ್ಟಿದ್ದಾರೆ.

Advertisment

ಇದನ್ನೂ ಓದಿ:ಬರೋಬ್ಬರಿ 155 ನಿಮಿಷ.. ಪ್ರಧಾನಿ ಮೋದಿ 3.O ಸಂಪುಟ ಸೇರಿದ ಒಟ್ಟು ಕೇಂದ್ರ ಸಚಿವರು ಎಷ್ಟು?

publive-image

30 ವರ್ಷ. ಸರಿಸುಮಾರು ಮೂವತ್ತು ವರ್ಷಗಳ ಬಳಿಕ ದಳಪತಿಗಳು ಮತ್ತೆ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದ ಅಖಾಡಕ್ಕೆ ಹೆಚ್​.ಡಿ ಕುಮಾರಸ್ವಾಮಿ ಕಾಲಿಟ್ಟಿದ್ದಾರೆ. ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದುವರೆಗೆ ರಾಜ್ಯದ ವಿಧಾನಸಭೆಯಲ್ಲಿ ಅಬ್ಬರಿಸುತ್ತಿದ್ದ ಕುಮಾರಸ್ವಾಮಿ ಇನ್ಮುಂದೆ ಸಂಸತ್ತಿನಲ್ಲಿ ಘರ್ಜಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಭಾಗವಾಗಿ ಕೆಲಸ ಮಾಡಲಿದ್ದಾರೆ.

ಕೃಷಿ ಖಾತೆ ಮೇಲೆಯೇ ಕಣ್ಣಿಟ್ಟಿರುವ ಕುಮಾರಸ್ವಾಮಿ

ಕೇಂದ್ರ ಸಚಿವರಾಗಿ ಹೆಚ್​ಡಿ ಕುಮಾರಸ್ವಾಮಿ ತಮ್ಮ ಹೊಸ ಅಧ್ಯಾಯದ ಪುಟ ಆರಂಭಿಸಿದ್ದಾರೆ. ಮೋದಿ ಸೇನೆಯಲ್ಲಿ ಸೇನಾನಿಯಾಗಿದ್ದಾರೆ. ಆದ್ರೆ ಹೆಚ್​ಡಿಕೆಗೆ ಯಾವ ಖಾತೆ ನೀಡಲಾಗುತ್ತದೆ ಅನ್ನೋದೇ ರಾಜ್ಯದ ಕೋಟಿ ಕೊಟಿ ಜನರ ಕದನ ಕುತೂಹಲ. ಖುದ್ದು ಕುಮಾರಸ್ವಾಮಿಯೇ ನನಗೆ ಬೇಱವುದೇ ದೊಡ್ಡ ದೊಡ್ಡ ಖಾತೆ ಬೇಡ. ಕೃಷಿ ಖಾತೆ ಬೇಕು. ಅದನ್ನು ಕೊಟ್ರೆ ಚೆನ್ನಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.

Advertisment

publive-image

ಹೆಚ್​ಡಿಕೆಗೆ ಕೃಷಿ ಖಾತೆಯೇ ಯಾಕೆ!?

ಜೆಡಿಎಸ್ ಮೊದಲಿನಿಂಲೂ ರೈತರ ಪರವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ ಅಂತ ಗುರುತಿಸಿಕೊಂಡಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ಇಸ್ರೇಲ್​ ಮಾದರಿಯಲ್ಲಿ ಕೃಷಿಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಇಸ್ರೇಲ್​ಗೂ ತೆರಳಿ ಅಧ್ಯಯನ ಮಾಡಿದ್ದರು. ಹೀಗಾಗಿ ಮತ್ತೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡುವ ಅವಕಾಶ ಸಿಕ್ಕರೆ, ರಾಷ್ಟ್ರಮಟ್ಟದಲ್ಲಿ ಕೃಷಿಯನ್ನು ತಂತ್ರಜ್ಞಾನ ಆಧರಿತ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಫಸಲು ಪಡೆಯುವ ಬಗ್ಗೆ ಪ್ರಯೋಗ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಕೃಷಿ ವಲಯದಲ್ಲಿ ಸುಧಾರಣೆ ತಂದ್ರೆ ಹೆಚ್ಚಿನ ರೈತರು ಇರುವ ದೇಶದಲ್ಲಿ ಉತ್ತಮ ಹೆಸರು ಮಾಡುವ ಲೆಕ್ಕಾಚಾರವೂ ಇದರ ಹಿಂದಿದೆ.

publive-image

ಒಟ್ಟಾರೆ ಪ್ರಧಾನಿ ಮೋದಿ ಸಂಪುಟದಲ್ಲಿ ಹೆಚ್​ಡಿ ಕುಮಾರಸ್ವಾಮಿಗೆ ಅವಕಾಶ ಸಿಕ್ಕಿದೆ. ಕೃಷಿ ಖಾತೆ ಸಿಗುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ರು. ಈಗ ಕುಮಾರಸ್ವಾಮಿಗೆ ಮತ್ತೆ ಸಚಿವ ಸ್ಥಾನ ಸಿಕ್ರೆ ಅವರು ಕೂಡ ಉತ್ತಮ ಕೆಲಸ ಮಾಡುವ ನಂಬಿಕೆ ಅವರಲ್ಲಿದೆ. ಕೊನೆಯದಾಗಿ ಮಣ್ಣಿನ ಮಗನಿಗೆ ಕೃಷಿ ಖಾತೆ ಸಿಗುತ್ತಾ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment