/newsfirstlive-kannada/media/post_attachments/wp-content/uploads/2024/11/Pregnancy-Job-Scam-in-India.jpg)
ಸಾಮಾಜಿಕ ಜಾಲತಾಣಗಳ ಮೂಲಕ ಆಗುವ ವಂಚನೆಗೆ ಹೊಸದೊಂದು ಸೇರ್ಪಡೆಯಾಗಿದೆ. ಇಲ್ಲಿ ದೇಶದಲ್ಲಿನ ನಿರುದ್ಯೋಗಿ ಯುವಕರನ್ನೇ ನೇರ ಟಾರ್ಗೆಟ್ ಮಾಡಲಾಗಿದೆ. ನಿರ್ದಿಷ್ಟ ಗುಂಪುಗಳಲ್ಲಿ ಪೋಸ್ಟ್ ಮಾಡುವ ಮಹಿಳೆಯರು ಅಥವಾ ಮಹಿಳೆಯರ ಹೆಸರಿನ ಅಕೌಂಟ್‌ನಿಂದ ‘ನನ್ನನ್ನು 3 ತಿಂಗಳಲ್ಲಿ ಗರ್ಭಿಣಿಯನ್ನಾಗಿ ಮಾಡಿದ್ರೆ ದೊಡ್ಡ ಮೊತ್ತದ ಹಣ ನೀಡಲಾಗುತ್ತದೆ’ ಎಂದು ಪೋಸ್ಟ್ ಮಾಡುತ್ತಾರೆ. ಇದಕ್ಕೆ ಅಡ್ವಾನ್ಸ್ ಕೊಡುವ ಭರವಸೆ ಕೂಡ ನೀಡುತ್ತಾರೆ. ಹಣದ ಆಮಿಷ ಮತ್ತೊಂದರ ಮೋಹಕ್ಕೆ ಬಿದ್ದು ಹೋದ್ರೆ ಮೋಸ ಹೋಗೋದು ಗ್ಯಾರಂಟಿ. ಈಗಾಗಲೇ ಇಂತಹ ವಂಚನೆಯ ಜಾಲಕ್ಕೆ ಸಿಲುಕಿ ಹಲವಾರು ಜನ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ವರದಿಯಾಗಿದೆ.
ಹೊಸ ವಂಚನೆ ಜಾಲವು ಆಕರ್ಷಕ, ಸುಂದರವಾಗಿರುವ ಮಹಿಳೆಯರ ಫೋಟೋ ಕದ್ದು ಮಹಿಳೆಯರ ಹೆಸರಿನ ಅಕೌಂಟ್‌ನಿಂದ ಪೋಸ್ಟ್ ಹಾಕುತ್ತಾರೆ. ಆಫರ್ನಲ್ಲಿ ಶ್ರೀಮಂತ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ಹೊಂದಬಹುದು. ಜೊತೆಗೆ ದೊಡ್ಡ ಮೊತ್ತದ ಹಣ, ದೊಡ್ಡ ಉಡುಗೊರೆ ನೀಡುವ ಭರವಸೆ ನೀಡುತ್ತಾರೆ.
ಇದು ಬಹುಪಾಲು ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕವೇ ನಡೆಯುತ್ತಿದೆ. ಈ ವಂಚಕರು ‘ಶ್ರೀಮಂತ ಮಹಿಳೆಯನ್ನು ಗರ್ಭಧಾರಣೆ ಮಾಡಿದರೆ 20 ರಿಂದ 50 ಲಕ್ಷ ರೂ. ಹಣ, ಜೊತೆ ಕಾರು ಉಡುಗೊರೆ ನೀಡುತ್ತೇವೆ’ ಅಂತ ಭರವಸೆ ನೀಡುತ್ತಾರೆ. ಹೀಗೆ ಬಲಿಪಶುಗಳನ್ನು ಸೆಳೆಯಲು ವಿಡಿಯೋಗಳನ್ನೂ ಅಪ್ಲೋಡ್ ಮಾಡುತ್ತಾರೆ. ಅಷ್ಟೇ ಅಲ್ಲ. ಇದಕ್ಕೆ ಅಡ್ವಾನ್ಸ್ ಸಹ ಕೊಡ್ತೀವಿ ಅಂತಾರೆ. ಇಂತಹ ವಿಡಿಯೋಗಳು ಪುರುಷರನ್ನು ಮೋಹದ ಜಾಲಕ್ಕೆ ಸಿಲುಕಿಸುವಂತೆ ರೂಪಿಸಲಾಗಿದೆ. ಒಮ್ಮೆ ಆಸಕ್ತರು ಏನಾದರೂ ಸಂಪರ್ಕಿಸಿದರೆ ಮುಗೀತು. ಇದಕ್ಕೆ ನಿರ್ದಿಷ್ಟ ಶುಲ್ಕವಿದೆ ಅಂತ ಹೇಳುತ್ತಾರೆ. ಮುಂದುವರೆದಿರೋ ಮುಗೀತು. ನೀವು ಮೋಸ ಹೋಗೋದು ಗ್ಯಾರಂಟಿ. ಈಗಾಗಲೇ ಇಂತಹ ಸಾಕಷ್ಟು ಜನ ಪುರುಷರು ಈ ವಂಚಕರ ಜಾಲಕ್ಕೆ ಬಿದ್ದಿದ್ದಾರೆ. ಇದರಿಂದ ಹಣ, ಮರ್ಯಾದೆ ಎರಡೂ ಕಳೆದುಕೊಂಡು ಮುಜುಗರದಿಂದ ಯಾರ ಮುಂದೆಯೂ ಹೇಳದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಎಂಥಾ ಕಾಲ ಬಂತು.. ಗಿಡದ ಜೊತೆ ಡೇಟಿಂಗ್, ರೊಮ್ಯಾನ್ಸ್; ಈ ಹುಡುಗಿ ಕಥೆ ಕೇಳಿದ್ರೆ ಕಳೆದೇ ಹೋಗ್ತೀರಾ!
ಇಂತಹ ವಂಚಕರ ಒಂದು ವಿಡಿಯೋ ಒಂದರಲ್ಲಿ ಮಹಿಳೆಯೊಬ್ಬಳು ತನ್ನನ್ನು ಗರ್ಭಧಾರಣೆ ಮಾಡುವ ಯಾವುದೇ ಪುರುಷನಿಗೆ 50 ಲಕ್ಷ ನೀಡುವ ಭರವಸೆ ನೀಡುತ್ತಿರುವುದು ಕಂಡು ಬಂದಿದೆ. ಅಲ್ಲದೆ ಮುಂಗಡವಾಗಿ 10 ಲಕ್ಷ ರೂ. ನೀಡುವುದಾಗಿ ಹೇಳುತ್ತಾಳೆ. ಯಾವುದೇ ಜನಾಂಗದ ಪುರುಷರು ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಅಂತಲೂ ಹೇಳಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬಳು ‘ತನ್ನನ್ನು 3 ತಿಂಗಳಲ್ಲಿ ಗರ್ಭಿಣಿಯನ್ನಾಗಿ ಮಾಡಿದ್ರೆ 20 ಲಕ್ಷ ರೂ. ನೀಡುವುದಾಗಿ’ ಹೇಳಿದ್ದಾಳೆ.
ಇದು ಹರಿಯಾಣ, ಉತ್ತರಪ್ರದೇಶ ಸೇರಿ ಹಲವೆಡೆ ಇಂತಹ ಜಾಲವಿರುವುದು ಪತ್ತೆಯಾಗಿದೆ. ಇಂತಹದ್ದೇ ಘಟನೆಯೊಂದರಲ್ಲಿ ಬಿಹಾರದ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. ಆದರೂ ಇಂತಹ ಪೋಸ್ಟ್ಗಳು ಫೇಸ್ಬುಕ್ನಲ್ಲಿ ನಿರಂತರವಾಗಿ ಬರುತ್ತಲೇ ಇವೆ. ಇದು ಪುರುಷರು ವಿಶೇಷವಾಗಿ ಯುವಕರನ್ನು ಆರ್ಥಿಕವಾಗಿ ಶೋಷಣೆ ಮಾಡುವುದಲ್ಲದೇ ಅವರ ದೌರ್ಬಲ್ಯಗಳನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ, ಬಲಿಯಾಗಿಸುವ ಅಮಾನುಷ ಘಟನೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರು ಎಚ್ಚರ ವಹಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ