/newsfirstlive-kannada/media/post_attachments/wp-content/uploads/2025/01/cow-owner-1.jpg)
ಕಾರವಾರ: ಇತ್ತೀಚೆಗೆ ರಾಜ್ಯದಲ್ಲಿ ಗೋಮಾತೆ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಅನಾಗರಿಕ, ಕ್ರೌರ್ಯ ಮೆರೆದಿರುವ ಘಟನೆ ತೀವ್ರ ವೇದನೆ ಸೃಷ್ಟಿಸಿತ್ತು. ಆದ್ರೆ ಈ ಘಟನೆ ಮಾಸುವ ಬೆನ್ನಲ್ಲೇ ಹೊನ್ನಾವರದ ಸಾಲ್ಕೋಡಿನ ಕೊಂಡಕುಳಿಯಲ್ಲಿ ದುರುಳರು ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ವಿಕೃತಿ ಮರೆದಿದ್ದಾರೆ.
ಇದನ್ನೂ ಓದಿ:ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. ಈ ಕಾರ್ಯಾಚರಣೆಯಲ್ಲಿ ಕನ್ನಡಿಗನ ವಿಶೇಷ ಪಾತ್ರ..
ಹೌದು, ಗಾವೋ ವಿಶ್ವಸ್ಯ ಮಾತರಃ ಎಂದು ನಂಬಿದ ನಾಡಿನಲ್ಲಿ ಮತ್ತೊಂದು ಗೋಮಾತೆ ಮೇಲೆ ಕೌರ್ಯ ಮೆರೆದಿದ್ದಾರೆ. ಕೊಂಡಕುಳಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸು ನಿನ್ನೆ ದಿನ ಮೇವಿಗಾಗಿ ಹೊರಗಡೆ ಹೋಗಿತ್ತು. ಆದ್ರೆ ರಾತ್ರಿ ಹಸು ಬಾರದ ಹಿನ್ನೆಲೆಯಲ್ಲಿ ಮಾಲೀಕ ಹುಡುಕಾಟ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2025/01/cow-owner.jpg)
ಆಗ ಹಸು ಹುಡುಕಲು ಹೋದ ಮಾಲೀಕನಿಗೆ ಶಾಕ್ ಕಾದಿತ್ತು. ಕಿರಾತಕರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ, ತನ್ನ ಹಸುವಿನ ರುಂಡ ನೋಡಿದ ಮಾಲೀಕ ಆಘಾತಕ್ಕೊಳಗಾಗಿದ್ದಾನೆ. ಆ ಕೂಡಲೇ ಮಾಲೀಕ ಹೊನ್ನಾವರ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us