/newsfirstlive-kannada/media/post_attachments/wp-content/uploads/2024/09/DEEPIKA-BABY-BUMPA_S-1.jpg)
ಮುಂಬೈ: ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸದ್ಯ ತಮ್ಮ ಮೊದಲ ಮಗು ಮನೆಗೆ ಬರುವ ನಿರೀಕ್ಷೆಯಲ್ಲಿದ್ದಾರೆ. ಫೆಬ್ರವರಿಯಂದೇ ಈ ಜೋಡಿ ಸೆಪ್ಟಂಬರ್ಂದು ಮನೆಗೆ ಮುದ್ದು ಮಗು ಆಗಮಿಸಲಿರುವ ಸೂಚನೆ ನೀಡಿತ್ತು. ಸೆಪ್ಟೆಂಬರ್ 28 ರಂದು ಹೆಚ್ಚು ಕಡಿಮೆ ಮರಿ ದೀಪಿಕಾ ಇಲ್ಲವೇ ತುಂಟ ರಣವೀರ್ ಬರುವ ನಿರೀಕ್ಷೆಯಲ್ಲಿದ್ದ ಜೋಡಿ ಈಗ ಅದಕ್ಕೂ ಮುನ್ನವೇ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡುವ ಸಿದ್ಧತೆಯಲ್ಲಿದ್ದಾರೆ ಅನ್ನೊ ಅನುಮಾನಗಳು ಮೂಡುತ್ತಿವೆ.
ಇದನ್ನೂ ಓದಿ:25 ವರ್ಷದ ಸುಳ್ಳು.. ಮೊದಲ ಬಾರಿ ಕಾರ್ಗಿಲ್ ಯುದ್ಧದ ಸತ್ಯ ಕಕ್ಕಿದ ಪಾಕಿಸ್ತಾನ; ಹೇಳಿದ್ದೇನು?
ಮುಂಬೈನ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ದೀಪಿಕಾ
ಇಂದು ಸಾಯಂಕಾಲದ ಸಮಯದಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಲಕ್ಸೂರಿ ಕಾರ್ನಲ್ಲಿ ಮುಂಬೈನ ಪ್ರತಿಷ್ಠಿತ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದನ್ನು ಗಮನಿಸಿರುವ ಅಭಿಮಾನಿಗಳು ರಣವೀರ್ ಹಾಗೂ ದೀಪಿಕಾಗೆ ಇಷ್ಟು ಕಂಗ್ರಾಟ್ಸ್ ಹೇಳುವ ದಿನ ಬಂದೇ ಬಿಡ್ತು ಎಂದು ಸಂತಸದಲ್ಲಿದ್ದಾರೆ.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋದು ಫಿಕ್ಸ್? ನಾನ್ ರೆಡಿ ಎಂದ ಸೀಕ್ರೆಟ್ ಏನು? VIDEO
ಇತ್ತೀಚೆಗಷ್ಟೇ ಮುಂಬೈನ ಸಿದ್ಧಿ ವಿನಾಯಕನ ಮಂದಿರಕ್ಕೆ ಈ ಜೋಡಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿತ್ತು. ತಮ್ಮ ಬಾಳಿನ ಹೊಸ ಅಧ್ಯಾಯ ಶುರುವಾಗುವುದಕ್ಕೂ ಮುನ್ನವೇ ಸಿದ್ಧಿ ವಿನಾಯಕನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಎಲ್ಲವೂ ನಿರ್ವಿಘ್ನವಾಗಿ ಸಾಗಲಿ ಎಂದು ಬೇಡಿಕೊಂಡಿದ್ದರು.
ಇದಕ್ಕಿಂತ ಕೆಲವು ದಿನಗಳ ಹಿಂದಷ್ಟೇ ದೀಪಿಕಾ ಹಾಗೂ ರಣವೀರ್ ಬೇಬಿ ಬಂಪ್ಸ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸದ್ಯದಲ್ಲಿಯೇ ಮನೆಗೆ ಮಗು ಬರುವ ಸೂಚನೆಯನ್ನು ನೀಡಿದ್ದರು.
Deepika Padukone and Ranveer Singh arrive at H.N Reliance hospital ?❤️
.
.#RanveerSingh#DeepikaPadukone#Viral#Reel#Pregnant#PapaPaparazzipic.twitter.com/MDGGfoCpdl— PapaPaparazzi (@PapaPaparazzzii)
Deepika Padukone and Ranveer Singh arrive at H.N Reliance hospital 🥹❤️
.
.#RanveerSingh#DeepikaPadukone#Viral#Reel#Pregnant#PapaPaparazzipic.twitter.com/MDGGfoCpdl— PapaPaparazzi (@PapaPaparazzzii) September 7, 2024
">September 7, 2024
ಈಗ ಏಕಾಏಕಿ ಆಸ್ಪತ್ರೆಗೆ ಬಂದಿರುವ ದೀಪಿಕಾ ಹಾಗೂ ರಣವೀರ್ ಸದ್ಯದಲ್ಲಿಯೇ ಗುಡ್ ನ್ಯೂಸ್ ಕೊಡಲಿದ್ದಾರಾ ಇಲ್ಲವೇ ಇದೊಂದು ನಿತ್ಯದ ತಪಾಸಣೆಗೆಂದು ಬಂದ ಭೇಟಿಯಾ ಅನ್ನೋದು ಸ್ಪಷ್ಟವಾಗಿಲ್ಲ. ಇದರ ನಡುವೆಯೂ ಅವರ ಫ್ಯಾನ್ಸ್ ಮಾತ್ರ ಇಬ್ಬರಿಗೂ ಕಂಗ್ರಾಟ್ಸ್ ಹೇಳುವ ಸುದ್ದಿ ಬೇಗ ಬರಲಿ ಎಂಬ ಕುತೂಹಲದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ