/newsfirstlive-kannada/media/post_attachments/wp-content/uploads/2025/07/pregnant-lady-bangalore.jpg)
ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ವಿವಾಹಿತ ಗರ್ಭಿಣಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಭಾರೀ ಅನುಮಾನಗಳಿಗೆ ಕಾರಣವಾಗಿದೆ. ಸುಮನ (22) ಮೃತ ದುರ್ದೈವಿ.
ಸುಮನಾ, ಉತ್ತರಪ್ರದೇಶ ಮೂಲದವರು. ಪತಿ ಶಿವಂ ಎಂಬಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಸುಮನ ನಿಗೂಢವಾಗಿ ಜೀವ ಕಳೆದುಕೊಂಡಿದ್ದಾಳೆ. ಮೃತದೇಹ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳಿಯರ ಗಮನಕ್ಕೆ ಬಂದಿದೆ. ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ಅನುಮಾನಗಳು ಏನು..?
ಮಹಿಳೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮೂಗಿನಲ್ಲಿ ರಕ್ತ ಬಂದಿರೋದು ಗೊತ್ತಾಗಿದೆ. ಪತ್ನಿಯ ಮೃತದೇಹದ ಜೊತೆ ಪತಿ ಶಿವಂ ಎರಡು ದಿನ ಕಳೆದಿದ್ದಾನೆ. ಸ್ಥಳೀಯರು ವಾಸನೆ ಹಿನ್ನೆಲೆಯಲ್ಲಿ ಭೇಟಿ ನೀಡಿದಾಗ ಆತ, ಏಕಾಏಕಿ ಪರಾರಿ ಆಗಿದ್ದಾರೆ.
ಪತಿ ಶಿವಂ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಪತ್ನಿ ನಿಧನದ ನಂತರ ಮೊದಲ ದಿನ ಪೇಂಟಿಂಗ್ ಕೆಲಸಕ್ಕೆ ಹೋಗಿದ್ದ. ನಂತರ ಎರಡನೇ ದಿನ ರಾತ್ರಿ ಪತ್ನಿ ಮೃತದೇಹದ ಮುಂದೆಯೇ ಮದ್ಯಪಾನ ಮಾಡಿ ಊಟ ಮಾಡಿದ್ದಾನೆ. ಮನೆಯಲ್ಲಿಯೇ ಎಗ್ ಬುರ್ಜಿ ಮಾಡ್ಕೊಂಡು ಮೃತದೇಹ ಮುಂದೆ ಊಟ ಮಾಡಿ ನಿದ್ರೆಗೆ ಜಾರಿರೋದು ಗೊತ್ತಾಗಿದೆ. ಸದ್ಯ ನಾಪತ್ತೆಯಾಗಿರೋ ಪತಿ ಶಿವಂಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದ ಪೋಸ್ಟರ್ ವಿರುದ್ಧ ಕೆರಳಿದ ಕನ್ನಡಿಗರು.. ಬೆಂಗಳೂರಿನ ಥಿಯೇಟರ್ನಲ್ಲಿ ಫ್ಯಾನ್ಸ್ ಹುಚ್ಚಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ