/newsfirstlive-kannada/media/post_attachments/wp-content/uploads/2024/04/PREGNET.jpg)
ಗರ್ಭಿಣಿಯರು ಟೀ ಕಾಫಿ ಕುಡಿಯುವುದಕ್ಕೆ ಮೊದಲು ಸ್ವಲ್ಪ ಎಚ್ಚರವಿರಬೇಕು. ಟೀ ಕಾಫಿ ಕುಡಿಯುವ ಅಭ್ಯಾಸವಿದ್ದವರು ಈಗಲೇ ಬಿಟ್ಟು ಬಿಡುವುದು ಒಳ್ಳೆಯದು. ಯಾಕೆಂದರೆ ನಿಮ್ಮ ಈ ಅಭ್ಯಾಸ ನಿಮ್ಮನ್ನು ಬಲಹೀನರನ್ನಾಗಿ ಹಾಗೂ ರಕ್ತಹೀನರನ್ನಾಗಿ ಮಾಡುವುದಂತೂ ಸತ್ಯ.
ಇದನ್ನೂ ಓದಿ:ಚಳಿಗಾಲದಲ್ಲಿ ಪುಟ್ಟ ಮಕ್ಕಳನ್ನ ರೋಗಗಳಿಂದ ರಕ್ಷಿಸುವುದು ಹೇಗೆ? ಪೋಷಕರು ಓದಲೇಬೇಕಾದ ಸ್ಟೋರಿ!
ಬಾಣಂತಿಯರ ಸಾವಿನ ಬಗ್ಗೆ ಸ್ಟಡಿ ಮಾಡಿದ ಆರೋಗ್ಯ ಇಲಾಖೆಗೆ ಒಂದು ಅಚ್ಚರಿಯ ಅಂಶ ಕಂಡುಬಂದಿದೆ. ಊಟ ಮಾಡಿದ ಒಂದು ಗಂಟೆಯೊಳಗೆ ಟೀ ಇಲ್ಲವೇ ಕಾಫಿ ಕುಡಿಯುವುದರಿಂದ ಅನೇಕ ಸಮಸ್ಯೆಗಳು ಆಗಲಿವೆ. ನೀವು ತೆಗೆದುಕೊಂಡ ಮಾತ್ರೆ ಅಂಶ ಹಾಗೂ ತರಕಾರಿಯ ಪ್ರೊಟೀನ್ ನಿಷ್ಕ್ರೀಯಗೊಂಡು ಗರ್ಭಿಣಿಯರಲ್ಲಿ ರಕ್ತಹೀನತೆಗೆ ಕಾರಣವಾಗುತ್ತದೆ. ಹೆರಿಗೆ ಸಮಯದಲ್ಲಿ ಈ ರಕ್ತದ ಸಮಸ್ಯೆಯಿಂದಾಗಿಯೇ ಗರ್ಭಿಣಿಯರು ಸಾವಿನ ಮನೆ ಸೇರುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.
ಈ ಬಗ್ಗೆ ವೈದ್ಯರು ಹೇಳೋದ್ಹೇನು?
ಗರ್ಭಿಣಿಯರು ಟೀ ಕಾಫಿ ಕುಡಿಯುವ ವಿಚಾರದಲ್ಲಿ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಟೀ ಮತ್ತು ಕಾಫಿಯಲ್ಲಿ ಕೆಫಿನ್ ಮತ್ತು ಟ್ಯಾನಿನ್ ಅನ್ನೋ ಎರಡು ಅಂಶಗಳು ಇರುತ್ತವೆ. ಇದು ಕಾಂಪ್ಲೆಕ್ಸ್ ಫಾರ್ಮೆಷನ್ನಲ್ಲಿ ಬರುತ್ತದೆ. ಆಹಾರದಲ್ಲಿರುವ ಐರನ್ ಅಥವಾ ಮಾತ್ರೆಯಲ್ಲಿರುವ ಪ್ರೋಟಿನ್ ಅಂಶ ಕೆಲಸ ಮಾಡುದಂತೆ ತಡೆಯುತ್ತದೆ.
ಗರ್ಭಿಣಿಯರು ಪ್ರೋಟಿನ್ಯುಕ್ತ ಆಹಾರರವನ್ನು ಸೇವಿಸಿದರೂ ಸಹ ಆಹಾರ ಸೇವಿಸಿದ ಅಥವಾ ಮಾತ್ರೆ ತೆಗೆದುಕೊಂಡ ಒಂದು ಗಂಟೆಯೊಳಗೆ ನೀವು ಚಹಾ ಅಥವಾ ಕಾಫಿಯನ್ನು ಸೇವಿಸಿದರೆ ಅದು ಪ್ರೋಟಿನ್ ಅಂಶವನ್ನು ಹೊಟ್ಟೆಯಲ್ಲಿಯೇ ನಾಶ ಮಾಡುತ್ತದೆ ಇದನ್ನು ವೈದ್ಯಕೀಯ ಭಾಷೆಯಲ್ಲಿ ಮಾಲ್ ಆಬ್ಸರ್ವ್ ಎನ್ನುತ್ತಾರೆ.
ಇದನ್ನೂ ಓದಿ:ಚಳಿಗಾಲ ಮತ್ತು ಹೃದಯದ ಆರೋಗ್ಯ; ಋತುಮಾನದ ಸವಾಲುಗಳನ್ನು ಎದುರಿಸುವುದು ಹೇಗೆ?
ಇದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರು ಐರನ್ ಟ್ಯಾಬ್ಲೆಟ್ ತೆಗೆದುಕೊಂಡ್ರೂ ಸಹ ಅವು ಆಬ್ಸರ್ವ್ ಆಗುವುದಿಲ್ಲ, ಅದನ್ನು ನಿಷ್ಕ್ರೀಯ ಮಾಡುತ್ತವೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ. ಸವಿತಾ ಸಿ ಅವರು ಹೇಳುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ