ಈ ಗ್ರಾಮಕ್ಕೆ ಸೇತುವೆಯೇ ಇಲ್ಲ.. ಗರ್ಭಿಣಿಗೆ ಹೆರಿಗೆ ನೋವು, ಎತ್ತಿನ ಗಾಡಿಯಲ್ಲಿ ಸಾಗಿಸಿದ ಜನ

author-image
Ganesh
Updated On
ಈ ಗ್ರಾಮಕ್ಕೆ ಸೇತುವೆಯೇ ಇಲ್ಲ.. ಗರ್ಭಿಣಿಗೆ ಹೆರಿಗೆ ನೋವು, ಎತ್ತಿನ ಗಾಡಿಯಲ್ಲಿ ಸಾಗಿಸಿದ ಜನ
Advertisment
  • ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದ ಘಟನೆ
  • ಮಹಿಳೆಗೆ ಗಂಡು ಮಗ ಜನಿಸಿದ್ದು, ಆರೋಗ್ಯವಾಗಿದೆ
  • ಗ್ರಾಮಕ್ಕೆ ಸೇತುವೆ ಕಲ್ಪಿಸಿ ಕೊಡಿ ಅಂತ ಗ್ರಾಮಸ್ಥರು ಅಳಲು

ಗ್ರಾಮಕ್ಕೆ ಸೇತುವೆ ವ್ಯವಸ್ಥೆ ಇಲ್ಲದೆ ಗರ್ಭಿಣಿಯನ್ನ ಎತ್ತಿನ ಗಾಡಿಯಲ್ಲಿ ಕೂರಿಸಿ ನದಿ ದಾಟಿಸಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಚಿಚೋಲಿ ಬ್ಲಾಕ್‌ನ ಬೋಡ್ ರಯಾತ್ ಗ್ರಾಮದಲ್ಲಿ ನಡೆದಿದೆ.

ಭಾರೀ ಮಳೆಯ ನಡುವೆ ಸ್ಥಳೀಯ ನಿವಾಸಿ ಸುನೀತಾ ಉಯಿಕೆ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗ್ರಾಮದ ಬಳಿ ಇರೋ ಭಾಜಿ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಎತ್ತಿನ ಬಂಡಿಯಲ್ಲಿ ನದಿ ದಾಟಲು ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: 8.8 ತೀವ್ರತೆಯಲ್ಲಿ ಭೂಕಂಪ.. ಭಯಾನಕ ಸುನಾನಿ ಎಚ್ಚರಿಕೆ.. ರಷ್ಯಾ ಕರಾವಳಿ ಅಕ್ಷರಶಃ ಪ್ರಕ್ಷುಬದ್ಧ..!

ಸುನೀತಾ ಅವರನ್ನ ಚಿರಪಟ್ಲಾ ಆಸ್ಪತ್ರೆಗೆ ದಾಖಲಿಸಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಇಬ್ಬರೂ ಸೇಪ್​ ಆಗಿದ್ದು, ನಮ್ಮ ಗ್ರಾಮಕ್ಕೆ ಸೇತುವೆ ಕಲ್ಪಿಸಿ ಕೊಡಿ ಅಂತ ಗ್ರಾಮಸ್ಥರು ಬೇಡಿಕೊಳ್ತಿದ್ದಾರೆ. ಕಳೆದ 7 ದಶಕಗಳಿಂದ ಜನರು ಸೇತುವೆ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಯಾವೊಬ್ಬ ಜನನಾಯಕನೂ ತಲೆಕೆಡಿಸಿಕೊಂಡಿಲ್ಲ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment